September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಹಾಗೂ ಪಾಲೇದು ಸ. ಹಿ. ಪ್ರಾ. ಶಾಲೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ, ಹಾಗೂ ಸ, ಹಿ, ಪ್ರಾ, ಶಾಲೆ, ಪಾಲೇದು ಶಾಲೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಮಾಹಿತಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ತಾಲೂಕಿನ ಯೋಜನಾಧಿಕಾರಿಗಳು ಹರೀಶ್ ಉದ್ಘಾಟಿಸಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ “ಭೂಮಿ ತಾಯಿ ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಹಿಸಿ” ಪರಿಸರ ಕಾರ್ಯಕ್ರಮ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿದ್ದು ಎಲ್ಲರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿದರೆ ಉತ್ತಮ ಹಾಗೂ ಸ್ವಚ್ಛ ವಾತಾವರಣ ನಿರ್ಮಾಣವಾಗುವ ಜೊತೆಗೆ ಕಾಲಕಾಲಕ್ಕೆ ಮಳೆ ಆಗುತ್ತದೆ ಕೃಷಿಗೆ ಸಹಕಾರಿಯಾಗುತ್ತದೆ ರೈತರಿಗೆ ಹಾಗೂ ನಾಗರಿಕರಿಗೆ ಸಮೃದ್ಧಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸುವ ಮೂಲಕ ಶಾಲೆಗಳಲ್ಲಿ ಒಂದು ಮಗು ಒಂದು ಗಿಡ ಎಂಬ ಕಲ್ಪನೆಯ ಆಧಾರದಲ್ಲಿ ಸಾಮೂಹಿಕ ಗಿಡ ನಾಟಿ ಮಾಡಿದಾಗ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ಮಾಹಿತಿ ನೀಡಿದರು.

ಜಯಂತಿ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಅನಿಲ್, ಕೃಷಿ ಮೇಲ್ವಿಚಾರಕರು ಕೃಷ್ಣ, ಶಾಲಾ ಮುಖ್ಯೋಧ್ಯಾಪಕರು ಮಂಜುಳಾ, ಸಹ ಶಿಕ್ಷಕರು ಶ್ರದ್ದಾ, ಹಾಗೂ ರಕ್ಷಿತಾ, ಸೇವಾಪ್ರತಿನಿಧಿ ಶ್ರೀಮತಿ ನಂದಿನಿ, ಜಯಂತಿ, ಪ್ರವೀನಾ ಪಾಲಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು.

Related posts

ವಾಣಿ ಕಾಲೇಜು: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Suddi Udaya

ಕಿಲ್ಲೂರು : ಹರ್ಷ ಮಟನ್, ಚಿಕನ್, ಹಾಗೂ ಫಿಶ್ ಸೆಂಟರ್ ಶುಭಾರಂಭ

Suddi Udaya

ಖ್ಯಾತ ಕಲಾವಿದ ಗಣೇಶ್ ಗುಂಪಲಾಜೆರವರಿಗೆ ಗಣೇಶೋತ್ಸವದ ಗಣಪತಿ ರಚನೆಯಲ್ಲಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ: ಎಸ್ಡಿಪಿಐ ಮುಖಂಡರಿಂದ ಸಮಸ್ಯೆ ಬಗೆಹರಿಸಲು ಮನವಿ

Suddi Udaya

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ ನಿಂದ ಕ್ರಿಸ್ಮಸ್ ಆಚರಣೆ

Suddi Udaya

ಬಿಜೆಪಿ ಕುಕ್ಕೇಡಿ ಶಕ್ತಿ ಕೇಂದ್ರದ ಬೂತ್ ಸಮಿತಿಗಳ ರಚನೆ

Suddi Udaya
error: Content is protected !!