September 6, 2026
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುತ್ತಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಪುತ್ತಿಲ: ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಉಪ್ಪಿನಂಗಡಿಯ ಮದರ್ ಗೋಲ್ಡ್ ಮಾಲಕ ಮಹಮ್ಮದ್ ಸಿರಾಜುದ್ದೀನ್ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪರಿಸರ ಸಂರಕ್ಷಣೆ ಒಬ್ಬರ ಕೆಲಸವಲ್ಲ ಅದು ಎಲ್ಲರ ಕೆಲಸ ಮತ್ತು ನಿತ್ಯವೂ ಮಾಡುವ ಕರ್ತ್ಯವಾಗಬೇಕು. ಆಗ ಪರಿಸರ ಸಂರಕ್ಷಣೆ ಖಂಡಿತಾ ಆಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ ವಹಿಸಿ ಮಾತನಾಡಿ ಭೂಮಿ ನಮ್ಮನ್ನು ಸಲವುಹ ತಾಯಿ ಅದು ನಿತ್ಯ ಸೌಂದರ್ಯದಿAದ ಕೂಡಿರಬೇಕು. ಭೂಮಿಯ ಸೌಂದರ್ಯವೆAದರೆ ಹಸಿರು ಮತ್ತು ಜೀವವೈವಿದ್ಯತೆ. ಅದಕ್ಕಾಗಿ ನಾವು ವಿವಿಧ ಜಾತಿಯ ಗಿಡಮರಗಳನ್ನು ಬೆಳೆಸಿ ಭೂಮಿಯನ್ನು ರಕ್ಷಿಸುವ ಕೆಲಸಮಾಡಬೇಕೆಂದರು.

ಶಿಕ್ಷಕರಾದ ಸೆವ್ರಿನ್ ಮಾರ್ಟಿಸ್ ಸ್ವಾಗತಿಸಿದರು. ಇಕೋ ಕ್ಲಬ್ ನೋಡಲ್ ಶಿಕ್ಷಕ ಮಹೇಂದ್ರ ಪೂಜಾರಿ ಇಕೋ ಕ್ಲಬ್ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಗೀತಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥರವರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಶಾಲಾ ವಠಾರದಲ್ಲಿ ವಿವಿಧ ಗಿಡಗಳನ್ನು ನೆಟ್ಟರು. ಪ್ರದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ತುಳಸಿ, ಹರ್ಷಿತ ಸಹಕರಿಸಿದರು.

Related posts

ಮಾ.4: ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ “ಕೋಟಿ- ಚೆನ್ನಯ” ಯಕ್ಷಗಾನ

Suddi Udaya

ಕೂಕ್ರಬೆಟ್ಟು ಸರ್ಕಾರಿ ಶಾಲೆಗೆ ರೂ.1.10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಫೆ.17: ಕಟ್ಟಡ ಲೋಕಾರ್ಪಣಾ ಸಮಾರಂಭ

Suddi Udaya

ಮರೋಡಿ: ಯುವಕನ ಧ್ವನಿ ಪೆಟ್ಟಿಗೆಯ ಶಸ್ತ್ರಚಿಕಿತ್ಸೆಗೆ ಯುವವಾಹಿನಿ ವೇಣೂರು ಘಟಕ ಹಾಗೂ ಯುವವಾಹಿನಿ ಮರೋಡಿ ಸಂಚಲನಾ ಸಮಿತಿ ಸದಸ್ಯರಿಂದ ಆರ್ಥಿಕ ನೆರವು

Suddi Udaya

ಪಿಯುಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ, ಸಹನ ಭಟ್ ರವರಿಗೆ ಸನ್ಮಾನ

Suddi Udaya

ತೆಕ್ಕಾರು : ಸರಳಿಕಟ್ಟೆ ನದಿ ಬಳಿ ಕಾಡಾನೆ ಪ್ರತ್ಯಕ್ಷ

Suddi Udaya

ಕಡಿರುದ್ಯಾವರ: ಹೇಡ್ಯದಲ್ಲಿ ಪಿಕಪ್ ಮತ್ತು ಕಾರು ಡಿಕ್ಕಿ

Suddi Udaya
error: Content is protected !!