September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಪೂಜೆ ಹಾಗೂ ರೆಖ್ಯ ಗ್ರಾಮದ ಸಮಗ್ರ ಅಭಿವೃದ್ಧಿಗೆ ರೂ. 15ಕೋಟಿ ಅನುದಾನ ನೀಡಿರುವ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

ರೆಖ್ಯ: ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಪೂಜೆ ಹಾಗೂ ರೆಖ್ಯ ಗ್ರಾಮದ ಸಮಗ್ರ ಅಭಿವೃದ್ಧಿಗೆ ರೂ. 15ಕೋಟಿ ಅನುದಾನ ನೀಡಿರುವ ಶಾಸಕ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಸನ್ಮಾನ ಕಾರ್ಯಕ್ರಮವು ಜೂ.5 ರಂದು ನಡೆಯಿತು.

ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ ವಹಿಸಿದರು.

ವೇದಿಕೆಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ರಾಮಯ್ಯ ಗೌಡ ಕೋಲಾರು, ಶಿರಾಡಿ ಗಡಿ ದೇವಸ್ಥಾನದ ಮಾಜಿ ಅಧ್ಯಕ್ಷ ನಾಗರಾಜ್, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಮಾಗಣೆಗುತ್ತು ಕೊಳೆಚ್ಚಾವು ಗುತ್ತುವಿನ ಹಿರಿಯರಾದ ದಾಮೋದರ ಗೌಡ ಕೊಳೆಚ್ಚಾವು, ದೇವಸ್ಥಾನದ ಕಾರ್ಯದರ್ಶಿ ಲಕ್ಷ್ಮಣ ಕನ್ನೆಕಂಡ , ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಬಾಲಕೃಷ್ಣ ಗೌಡ, ಐತಪ್ಪ ಕೋಲಾರು, ನಾರಾಯಣ ಗೌಡ ಗುಡ್ರಾದಿ , ತುಕರಾಮ ಗೌಡ ಗುಡ್ರಾದಿ , ಕುಶಾಲಪ್ಪ ಗೌಡ ಪಾಪಿನಮಂಡೆ, ಆನಂದ ಗೌಡ ಮುರತ್ತಮೇಲು, ರವಿಚಂದ್ರ ಗೌಡ ಕೋಲಾರು, ಸುಂದರ ಕೋಲಾರು ಉಪಸ್ಥಿತರಿದ್ದರು.

ಈ ವೇಳೆ ಶಾಸಕ ಹರೀಶ್ ಪೂಂಜರಿಗೆ ರೆಖ್ಯ ಗ್ರಾಮಸ್ಥರಿಂದ ಚಿನ್ನದ ಬ್ರಾಸ್ ಲೈಟ್ ಹಾಗೂ ಫಲಪುಷ್ಪವನ್ನು ನೀಡಿ ಸನ್ಮಾನಿಸಲಾಯಿತು.

ಭಜನಾ ಮಂಡಳಿ ವತಿಯಿಂದ ಕುಶಾಲಪ್ಪ ಗೌಡ ಪಾಪಿನಮಂಡೆಯವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ರಾಘವೇಂದ್ರ ನಾಯಕ್, ರಾಮಯ್ಯ ಗೌಡ, ಮಂಜುನಾಥ ಗೌಡ, ನಾಗರಾಜ್, ದಾಮೋದರ ಗೌಡರವರನ್ನು ಗೌರವಿಸಲಾಯಿತು.

ಹರಿಣಾಕ್ಷಿ ಕೋಲಾರು ಸ್ವಾಗತಿಸಿದರು. ನಾರಾಯಣ ಗೌಡ ಉರ್ನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶೋದರ ಕೋಟಿಮಾರು ಕಾರ್ಯಕ್ರಮ ನಿರೂಪಿಸಿದರು. ನವೀನ್ ಕೆ. ಧನ್ಯವಾದವಿತ್ತರು.

Related posts

ಲಾಯಿಲ: ಪಡ್ಲಾಡಿ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡ ಮರ, ಕಸ-ಕಡ್ಡಿ ತೆರವು: ಸ್ಪಂದಿಸಿದ ಲಾಯಿಲ ಗ್ರಾ. ಪಂ. ಕಾರ್ಯಕ್ಕೆ ಮೆಚ್ಚುಗೆ

Suddi Udaya

ಬೆಳ್ತಂಗಡಿ: ಜಲಪಾತದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಮೂವರು ಕಾಸರಗೋಡು ಮೂಲದ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Suddi Udaya

ಗುರುವಾಯನಕೆರೆ: ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ನೀರು: ಕುವೆಟ್ಟು ಗ್ರಾ.ಪಂ. ನಿಂದ ಮೋರಿ ಅಳವಡಿಕೆ, ಚರಂಡಿ ದುರಸ್ತಿ, ಪಂ.ಸದಸ್ಯರ ಮೂಲಕ ಸಮಸ್ಯೆಗೆ ಪರಿಹಾರ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆ

Suddi Udaya

ಅಳದಂಗಡಿ ಗ್ರಾ. ಪಂ. ನಲ್ಲಿ ಸಾಮಾಜಿಕ ಪರಿಶೋದನಾ ವಿಶೇಷ ಗ್ರಾಮ ಸಭೆ

Suddi Udaya

ಉಜಿರೆಯಲ್ಲಿ ಹಲಸು ಮತ್ತು ಹಣ್ಣಿನ ಮೇಳದ ಉದ್ಘಾಟನೆ

Suddi Udaya
error: Content is protected !!