24.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಾಸಕ ಹರೀಶ್ ಪೂಂಜರವರಿಂದ ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಕ್ರಾಡಿ ಶಾಖೆಯ ಕೃಷಿ ಗೊಬ್ಬರ ಮಾರಾಟ ಕೇಂದ್ರ ಹಾಗೂ ಎಟಿಎಂ ಉದ್ಘಾಟನೆ

ಬೆಳ್ತಂಗಡಿ: ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಕ್ರಾಡಿ ಶಾಖೆಯ ಕೃಷಿ ಗೊಬ್ಬರ ಮಾರಾಟ ಕೇಂದ್ರ ಹಾಗೂ ಎಟಿಎಂ ಇದರ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರವರು ನೆರವೇರಿಸಿ ಶುಭಕೋರಿದರು.

ಪ್ರಗತಿಪರ ಕೃಷಿಕ ಪೊನ್ನೆಮಾರಡ್ಡ ಮನೆಯ ರಾಜು ಶೆಟ್ಟಿ ಪಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ನಾರಾವಿ ಸೊಸೈಟಿ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಶಾಸಕರನ್ನು ಮತ್ತು ಗ್ರಾಹಕರನ್ನು ಆತ್ಮೀಯವಾಗಿ ಸ್ವಾಗತಿಸಿ, ಸೊಸೈಟಿಯ ಕಾರ್ಯವೈಖರಿ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಓ ಶಶಿಕಾಂತ್ ಜೈನ್, ನಾರಾವಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜವರ್ಮ ಜೈನ್, ಸೊಸೈಟಿ ನಿರ್ದೇಶಕರಾದ ಸದಾನಂದ ಗೌಡ ಸುಲ್ಕೇರಿ, ಕೃಷ್ಣಪ್ಪ ಪೂಜಾರಿ ಕುತ್ಲೂರು, ವಿಠಲ ಪೂಜಾರಿ ಸಾವ್ಯ, ಉಮೇಶ್ ಎಂ.ಕೆ ನಾರಾವಿ, ರಾಜೇಂದ್ರ ಕುಮಾರ್ ನಾರಾವಿ, ಶೇಖರ್ ಕುತ್ಲೂರು, ಯಶೋದ ಕುತ್ಲೂರು, ಸುಜಲತಾ ನಾರಾವಿ, ಪದ್ಮಶ್ರೀ ಕೊಕ್ರಾಡಿ, ಸುಪ್ರಿಯಾ ನಾರಾವಿ, ಕೊಕ್ರಾಡಿ ಶಾಖಾ ಮುಖ್ಯಸ್ಥ ಶೇಖರ್, ಪ್ರಮಖರಾದ ಉದಯ ಹೆಗ್ಡೆ, ಅಭಿಜಿತ್ ಜೈನ್, ಹರೀಶ್ ಹೆಗ್ಡೆ ಸಾವ್ಯ, ಲಕ್ಷ್ಮಣ್ ಪೂಜಾರಿ ಕೊಕ್ರಾಡಿ, ಮೋಹನ್ ಹೆಗ್ಡೆ ಸಾವ್ಯ, ಸಂತೋಷ್ ಕುತ್ಲೂರು, ವಿಷ್ಣು ಕೊಕ್ರಾಡಿ, ಆಶಾಲತಾ ನಾರಾವಿ ಹಾಗೂ ಊರವರು, ಸಹಕಾರಿ ಸಂಘದ ಸದಸ್ಯರು, ಸಿಎ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನವೋದಯ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಯಶೋಧರ್ ಬಂಗೇರ ನಿರೂಪಿಸಿದರು.

Related posts

ವಾಣಿ ಆಂ.ಮಾ. ಶಾಲೆಯಲ್ಲಿ ನೂತನ ಕಬ್ & ಬುಲ್ ಬುಲ್ ದಳಗಳ ಉದ್ಘಾಟನಾ ಸಮಾರಂಭ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ರಕ್ತೇಶ್ವರಿ ಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಚಿವ ಎನ್.ಎಸ್. ಬೋಸರಾಜು ಭೇಟಿ

Suddi Udaya

ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಹೊಕ್ಕಾಡಿಗೋಳಿ ಇದರ ಆಶ್ರಯದಲ್ಲಿ ಅನಾರೋಗ್ಯ ಪೀಡಿತ ಬಡಕುಟುಂಬಗಳಿಗೆ ಸಹಾಯಧನ

Suddi Udaya

ಮೇ 17: ವೇಣೂರುನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!