28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೋದಿ ಸರಕಾರಕ್ಕೆ 12 ವರ್ಷ: ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ

ನಾರಾವಿ : ಪ್ರಧಾನಿಯಾಗಿ ನರೇಂದ್ರ ಮೋದಿಜಿಯವರು ಇದೀಗ 12 ವರ್ಷಗಳನ್ನು ಪೂರೈಸಿ ಭಾರತದ ಇತಿಹಾಸದಲ್ಲಿ ಅತೀ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ವಿಶಿಷ್ಟ ಗೌರವಕ್ಕೆ ಪಾತ್ರರಾಗಿರುವ ಈ ಸಂದರ್ಭದಲ್ಲಿ ಮೋದಿಜಿಯವರಿಗೆ ಶ್ರೀ ದೇವರು ಉತ್ತಮ ಆಯುರಾರೋಗ್ಯ,ಆಯುಷ್ಯ, ಯಶಸ್ಸು, ಶಕ್ತಿಯನ್ನು ನೀಡಿ ಹರಸಲೆಂದು ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ನಾರಾವಿ ಇದರ ವತಿಯಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ಶ್ರೀ ದೇವರಲ್ಲಿ ಪ್ರಾರ್ಥಿಸಿ ಸಿಹಿಯನ್ನು ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ದ.ಕ ಜಿಲ್ಲಾ ಉಪಾಧ್ಯಕ್ಷರು ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಬಿಜೆಪಿ ಬೆಳ್ತಂಗಡಿ ಮಂಡಲ ಉಪಾಧ್ಯಕ್ಷ ಮೋಹನ್ ಅಂಡಿಂಜೆ, ಮಂಡಲ ಕಾರ್ಯದರ್ಶಿ ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಉದಯ ಹೆಗ್ಡೆ, ಬಿಜೆಪಿ ಮಹಾಶಕ್ತಿ ಕೇಂದ್ರ ನಾರಾವಿಯ ಅಧ್ಯಕ್ಷರಾದ ನೇಮಯ್ಯ ಕುಲಾಲ್, ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್, ಸದಸ್ಯರಾದ ರವೀಶ್ ಕುತ್ಲೂರು, ನಾರಾವಿ ಸಿಎಬ್ಯಾಂಕ್ ಅಧ್ಯಕ್ಷ ಸುಧಾಕರ್ ಭಂಡಾರಿ, ಹಿರಿಯ ಕಾರ್ಯಕರ್ತರಾದ ಚೆಲುವಯ್ಯ ಪೂಜಾರಿ ನಾರಾವಿ, ಡಾಕಯ್ಯ ಪೂಜಾರಿ ಕುತ್ಲೂರು, ರತ್ನಾಕರ ಹೆಗ್ಡೆ ಸಾವ್ಯ, ನಾರಾವಿ ಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಬೂತ್ ಸಮಿತಿ ಪ್ರಮುಖರಾದ ರಮೇಶ್ ಹೆಗ್ಡೆ ಕರಿಮಣೇಲು, ಸದಾನಂದ ಬಂಗೇರ,ಭಾಸ್ಕರ ಹೆಗ್ಡೆ ನಾರಾವಿ, ಸುದರ್ಶನ್ ಹೆಗ್ಡೆ ಕುತ್ಲೂರು, ಹರ್ಷ ಪಾರೊಟ್ಟು ಮತ್ತು ನರೇಂದ್ರ ಮೋದಿಜಿಯವರ ಅಭಿಮಾನಿಗಳು ಉಪಸ್ಥಿತರಿದ್ದರು.

Related posts

ಧರ್ಮಸ್ಥಳದಲ್ಲಿ ರುಡ್ ಸೆಟ್ ಸಂಸ್ಥೆಗಳ ನಿರ್ದೇಶಕರ ವಾರ್ಷಿಕ ಸಮಾವೇಶದ ಸಮಾರೋಪ ಸಮಾರಂಭ

Suddi Udaya

ಶಿಶಿಲ: ಸೃಷ್ಟಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಪಟ್ರಮೆ ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ 48ನೇ ವರ್ಷದ ಭಜನಾ ಸಪ್ತಾಹ : ಧಾರ್ಮಿಕ ಸಭೆ

Suddi Udaya

ಲಾಯಿಲದ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣು

Suddi Udaya

ಜು.20 ರಿಂದ ಉಜಿರೆ ಮಹಾವೀರ ಸಿಲ್ಕ್ಸ್ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ನಲ್ಲಿ ಆಷಾಢ ಆಟಿದ ಪರ್ಬ; ದರಕಡಿತ ಮಾರಾಟ

Suddi Udaya
error: Content is protected !!