25.6 C
ಪುತ್ತೂರು, ಬೆಳ್ತಂಗಡಿ
September 13, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಿಡುಪೆ ಜಲಪಾತದಲ್ಲಿ ಅರಣ್ಯ ವಾಚರ್ ಮೇಲೆ ಹಲ್ಲೆ: ಹಣ ದೋಚಿ ಪರಾರಿ

ಬೆಳ್ತಂಗಡಿ: ದಿಡುಪೆಯಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಜಲಪಾತ ಪ್ರವೇಶ ದ್ವಾರದಲ್ಲಿ ಪ್ರವೇಶ ಶುಲ್ಕದ ಡಿಜಿಟಲ್ ರಶೀದಿ ವಿಚಾರವಾಗಿ ಉಂಟಾದ ವಾಗ್ವಾದ ಹಲ್ಲೆ ಮತ್ತು ಹಣ ದೋಚಿದ ಘಟನೆ ಜು‌.19ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆಯ ಗುತ್ತಿಗೆ ವಾಚರ್ ಆಗಿರುವ ಗೋಪಾಲ (42) ಅವರು ದಿಡುಪೆ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧ್ಯಾಹ್ನ 15 ಯುವಕರು ಜಲಪಾತಕ್ಕೆ ಆಗಮಿಸಿದ್ದು, ಇಲಾಖೆಯ ನಿಯಮದಂತೆ ತಲಾ 200 ರೂ.ನಂತೆ ಒಟ್ಟು3,000 ರೂ. ನಗದು ಪಡೆದು ಕೈಬರಹದ ರಶೀದಿ ನೀಡಲಾಗಿತ್ತು. ಜತೆಗೆ ಪ್ರತಾಪ್ ಬನ್ಕಲ್ ಎಂಬಾತನ ಗುರುತಿನ ಚೀಟಿಯನ್ನು ಪಡೆದು ನೋಂದಣಿ ಪುಸ್ತಕದಲ್ಲಿ ದಾಖಲಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಜಲಪಾತ ವೀಕ್ಷಿಸಿ ಬಂದ ತಂಡ ಡಿಜಿಟಲ್ ರಶೀದಿ ನೀಡುವಂತೆ ಒತ್ತಾಯಿಸಿದೆ. ಆ ವೇಳೆ ಡಿಜಿಟಲ್ ರಶೀದಿ ಯಂತ್ರ ಕಾರ್ಯನಿರ್ವಹಿಸದ ಬಗ್ಗೆ ಗೋಪಾಲ ವಿವರಿಸಿದರೂ ಯುವಕರು ತಕರಾರು ಮುಂದುವರಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಪ್ರತಾಪ್ ಬನ್ಕಲ್ ಎಂಬಾತ ಗೋಪಾಲ ಅವರನ್ನು ತಡೆದು ನಿಲ್ಲಿಸಿ ಹಣ ಹಿಂತಿರುಗಿಸುವಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ. ನಂತರ ಗೋಪಾಲ ಅವರ ಬಳಿ ಇದ್ದ 50,500 ರೂ. ನಗದು ಹೊಂದಿದ್ದ ಬ್ಯಾಗ್‌ ನ್ನು ಕಸಿದುಕೊಂಡು ಇತರರೊಂದಿಗೆ ಸ್ಥಳದಿಂದ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಗೋಪಾಲ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಬನ್ಕಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts

ರೆಖ್ಯ: ಜನರ ಜೀವ ಬಲಿ ಪಡೆಯುವ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ರೆಖ್ಯ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆಯ ಎಚ್ಚರಿಕೆ

Suddi Udaya

ಯುವ ಸಂಸತ್ತು ಸ್ಪರ್ಧೆ: ಅರ್ಪಿತಾ ಎ. ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಭಕ್ತಿಗೀತೆ ಬಿಡುಗಡೆ

Suddi Udaya

ಡಾ. ಕುಮಾರ ಹೆಗ್ಡೆ ರವರಿಗೆ ಪ್ರತಿಷ್ಠಿತ ಜೇಸಿಯ ಉದ್ಯೋಗ ರತ್ನ ಪ್ರಶಸ್ತಿ

Suddi Udaya

ತಣ್ಣೀರುಪಂಥ : ಬೋಳ್ನಡ್ಕ ಭಾಗದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟರವರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.10 ಲಕ್ಷ ಅನುದಾನ ಕಾಂಕ್ರೀಟ್ ರಸ್ತೆ ನಿರ್ಮಾಣ

Suddi Udaya

ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ನಿಗಮ್ ಜೈನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!