28.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ರೂ.23 ಕೋಟಿ ವೆಚ್ಚದಲ್ಲಿ ನಿಮಾ೯ಣವಾಗಲಿರುವ ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಜಿಲ್ಲಾ ನ್ಯಾಯಾಂಗ, ದ.ಕ ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಜನತೆ ಮತ್ತು ವಕೀಲರ ಸಂಘದ ಬಹುದಿನಗಳ ಬೇಡಿಕೆಯಾಗಿದ್ದ

ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಕರ್ನಾಟಕ ಸರಕಾರಕ್ಕೆ ಸಲ್ಲಿಸಲಾದ ಸುಮಾರು 23 ಕೋಟಿ ಪ್ರಸ್ತಾವನೆಯಲ್ಲಿ ಈಗಾಗಲೇ ಮೊದಲ ಹಂತದಲ್ಲಿ ರೂ.9 ಕೋಟಿ ಬಿಡುಗಡೆಗೊಳಿಸಿದ್ದು ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ ಕಾರ್ಯಕ್ರಮವು ಜೂ.14 ರಂದು ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಜರುಗಿತು.

ನೂತನ ನ್ಯಾಯಾಲಯದ ಕಟ್ಟಡದ ಶಂಕುಸ್ಥಾಪನೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮಹಮ್ಮದ್ ನವಾಜ್ ರವರ ಉಪಸ್ಥಿತಿಯಲ್ಲಿ ಹೈಕೋರ್ಟ್, ನ್ಯಾಯಮೂರ್ತಿಗಳು ಮತ್ತು ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಚ್.ಟಿ. ನರೇಂದ್ರ ಪ್ರಸಾದ್‌ರವರು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ನ್ಯಾಯಾಧೀಶರಾದ ಬಸವರಾಜ್ ವಹಿಸಿಕೊಂಡಿಸಿದ್ದರು. ಮುಖ್ಯ ಅಥಿತಿಗಳಾಗಿ ಆರೋಗ್ಯ ಇಲಾಖೆಯ ಸಚಿವ ಯು.ಟಿ ಖಾದರ್, ಕರ್ನಾಟಕ ಸರಕಾರದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ, ರಾಜೇಶ್ ರೈ ಕೆ, ತ್ಯಾಗರಾಜ್ ಎನ್. ಇನವಳ್ಳಿ, ಮುರಳೀಧರ ಪೈ, ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಶಾಸಕರುಗಳಾದ ಐವನ್ ಡಿಸೋಜ ಮತ್ತು ಕೆ. ಪ್ರತಾಪಸಿಂಹ ನಾಯಕ್ ಹಾಗೂ ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯ ಪಿ.ಪಿ ಹೆಗ್ಡೆ, ಹೈಕೋರ್ಟ್ ನ್ಯಾಯವಾದಿ ರಕ್ಷಿತ್ಗ್ ಶಿವರಾಂ ಭಾಗವಹಿಸಿದ್ದಾರೆ.

ದ.ಕ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜು, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಸಿಯಸ್ ಎಸ್. ಲೋಬೊ, ವಕೀಲರ ಸಂಘದ ಕಾರ್ಯದರ್ಶಿ ಪ್ರಶಾಂತ್ ಎಂ., ಜಿಲ್ಲಾ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತತ ಗೋಕುಲ್‌ದಾಸ್, ಲೋಕೋಪಯೋಗಿ ಇಲಾಖೆ ಜಿಲ್ಲಾ ಕಾರ್ಯನಿರ್ವಾಹಕರಾದ ಅಭಿಯಂತರ ರಾಘವೇಂದ್ರ ನಾಯ್ಕ, ಸಮಿತಿ ಅಧ್ಯಕ್ಷ ಶಿವಕುಮಾರ್ ಎಸ್. ಎಂ., ವಕೀಲರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಗೌಡ, ಮಾಜಿ ಅಧ್ಯಕ್ಷ ವಸಂತ ಮರಕಡ, ಮಾಜಿ ಕಾರ್ಯದರ್ಶಿ ನವೀನ್ ಬಿ.ಕೆ, ಅಪರ ಸರಕಾರಿ ವಕೀಲ ಮನೋಹರ್ ಕುಮಾರ್, ನೋಟರಿ ವಕೀಲರಾದ ಭಗೀರಥ ಜಿ., ನ್ಯಾಯವಾದಿ ಗಣೇಶ್ ಗೌಡ, ನ್ಯಾಯವಾದಿ ಹಾಗೂ ನೋಟರಿ ಸಂತೋಷ್ ಕುಮಾರ್ ಲಾಯಿಲ, ನ್ಯಾಯವಾದಿ ಕೇಶವ ಗೌಡ, ನ್ಯಾಯವಾದಿ ಶ್ರೀನಿವಾಸ ಗೌಡ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನವೀನ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಸಿಯಸ್ ಎಸ್. ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಧನಂಜಯ ರಾವ್ ಹಾಗೂ ಮನೋಹರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related posts

ಬಳಂಜ ಬೋಂಟ್ರೊಟ್ಟುಗುತ್ತು ದೈವಸ್ಥಾನಕ್ಕೆ ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ವಿಧಾನಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕರಿಂದ ಉಗ್ರಾಣದ ಉದ್ಘಾಟನೆ

Suddi Udaya

ಕೊಕ್ಕಡ: ಸಂತ ಜೋನರ ದೇವಾಲಯದಲ್ಲಿ ಪವಿತ್ರ ಗುರುವಾರ

Suddi Udaya

ಮನೆಗೆ ಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ತೆರವು ಕಾರ್ಯ

Suddi Udaya

ಆ.29: ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Suddi Udaya

ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ನಿಡ್ಲೆ ಕೃಷ್ಣಪ್ಪ ಎಂ. ಕೆ ಅವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ, ವೈಯಕ್ತಿಕ ಧನಸಹಾಯ

Suddi Udaya

ದ್ವಿಚಕ್ರ ವಾಹನಗಳ ಅಪಘಾತ: ಮೂವರಿಗೆ ಗಂಭೀರ ಗಾಯ

Suddi Udaya
error: Content is protected !!