32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಎಸ್‌ವೈಎಸ್ ಬೆಳ್ತಂಗಡಿ ಝೋನ್ ವತಿಯಿಂದ ಶರೀಫ್ ಪರಪ್ಪು ಕುಟುಂಬಕ್ಕೆ ಸಾಂತ್ವನ ಫಂಡ್ ಹಸ್ತಾಂತರ

ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಎಸ್‌ವೈಎಸ್ ಕಾರ್ಯಕರ್ತ ಶರೀಫ್ ಪರಪ್ಪು ರವರ ಕುಟುಂಬಕ್ಕೆ ಸುನ್ನೀ ಯುವಜನ ಸಂಘ (ಎಸ್‌ವೈಎಸ್) ಬೆಳ್ತಂಗಡಿ ಝೋನ್ ವತಿಯಿಂದ ಸಾಂತ್ವನ ಫಂಡ್ 1,17,313 ರೂ.ಗಳನ್ನು ಜೂ 14 ರಂದು ಅವರ ಕುಟುಂಬಕ್ಕೆ ಹಸ್ತಾoತರ ಮಾಡಲಾಯಿತು.

ಈ ಸಂದರ್ಭದಲ್ಲಿ ಎಸ್‌ವೈಎಸ್ ಝೋನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ, ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ, ಉಪಾಧ್ಯಕ್ಷ ಅಯ್ಯೂಬ್ ಮಹ್ಳರಿ, ಕೆ.ವೈ ಇಸ್ಮಾಯಿಲ್, ಕಾರ್ಯದರ್ಶಿ ಹಾರಿಸ್ ಕುಕ್ಕುಡಿ, ಸಿದ್ದೀಕ್ ಪರಪ್ಪು ಹಾಗೂ ಸರ್ಕಲ್, ಯುನಿಟ್ ಪ್ರತಿನಿಧಿಗಳು, ಪರಪ್ಪು ಜಮಾಅತ್ ನಾಯಕರು ಉಪಸ್ಥಿತರಿದ್ದರು.

ಸಣ್ಣ ವ್ಯಾಪಾರಿಯಾಗಿದ್ದ ಶರೀಫ್ ಪರಪ್ಪು ಅವರು ಕೆಲ ದಿನಗಳ ಹಿಂದೆ ಅಲ್ಪಕಾಲದ ಆನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಮನೆಯ ಯಜಮಾನನಾಗಿದ್ದ ಅವರ ಅಕಾಲಿಕ ಅಗಲುವಿಕೆಯಿಂದ ಅವರ ಪತ್ನಿ, ಮಕ್ಕಳು‌ ಹಾಗೂ ಅವರ ಕುಟುಂಬ ಕಂಗಾಲಾಗಿದ್ದರು. ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ದಕ್ಷತೆಯನ್ನು ಪರಿಗಣಿಸಿ ಅವರ ಕುಟುಂಬದ ಸಂಕಷ್ಟ ಕಾಲದಲ್ಲಿ ಅವರಿಗೆ ಸಾಂತ್ವನ ನೀಡುವ ಮೂಲಕ ಎಸ್‌ವೈಎಸ್ ತನ್ನ ಜವಾಬ್ದಾರಿ ಮೆರೆದಿದೆ.

Related posts

ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಮಾದರಿ ಮದುವೆ ಪ್ರಯುಕ್ತ ಡಿ.12 ರಂದು ಜಮಾಅತ್ ಪ್ರತಿನಿಧಿ ಸಂಗಮ

Suddi Udaya

ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘ ಮಡಂತ್ಯಾರು ಪುಂಜಾಲಕಟ್ಟೆ ಇವರ ನೇತೃತ್ವದಲ್ಲಿ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕುರಿತು ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಹುಣ್ಸೆಕಟ್ಟೆ ಶಾಲೆಯ ಶೌಚಾಲಯ ಸ್ವಚ್ಛತೆ

Suddi Udaya

ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಉಮನಾಥ್ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಹರೀಶ್ ಎಳನೀರು ಆಯ್ಕೆ

Suddi Udaya

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಪ್ತಿ ಗೌಡ ರಾಜ್ಯಕ್ಕೆ ಪ್ರಥಮ

Suddi Udaya

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಎಂ. ಗಂಗಾಧರ ಮಿತ್ತಮಾರ್, ಪ್ರಧಾನ ಸಂಚಾಲಕರಾಗಿ ಪಿ. ಎಚ್. ನಿತ್ಯಾನಂದ ಶೆಟ್ಟಿ ನೇಮಕ

Suddi Udaya
error: Content is protected !!