September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಡ್ಡಂದಡ್ಕ ಸರಿಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ವೇಣೂರು: ಪಡ್ಡoದಡ್ಕ ಶಾಲೆಯಲ್ಲಿ ಉಚಿತ ಬರೆಯುವ ಪುಸ್ತಕಗಳನ್ನು ಪೆರಿಂಜೆಯ ಸಾರಾ ಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ನ ವತಿಯಿಂದ ಜೂ.15 ರಂದು ವಿತರಿಸಲಾಯಿತು.

ಶಾಲಾ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂಸಿ ಅಧ್ಯಕ್ಷ ಪಿಎಸ್ ಶಬ್ಬೀರ್ ವಹಿಸಿದ್ದರು. ಶಾಲಾ ಸ್ಥಾಪಕ ಸದಸ್ಯ ಶಂಕರ್ ಭಟ್ ಬಾಲ್ಯ ಮಾತಾಡಿ, ಈ ವರ್ಷದಿಂದ ಶಾಲೆಯಲ್ಲಿ ಎಲ್ ಕೆಜಿ ಯಿಂದ 5 ನೇ ತರಗತಿಯವರೆಗೆ ಆಂಗ್ಲ ತರಗತಿ ಆರಂಭವಾಗಿದ್ದು ಇಬ್ಬರು ಪದವೀಧರ ಟೀಚರ್ ನ್ನು ಸರಕಾರದ ವತಿಯಿಂದ ಮಂಜೂರು ಮಾಡಲಾಗಿದೆ. ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಹೆತ್ತವರು ದೂರದ ಇಂಗ್ಲಿಸ್ ಮೀಡಿಯಂ ಶಾಲೆಗೆ ಪ್ರತಿಷ್ಠೆಗೋಸ್ಕರ ಕಳಿಸದೆ ಊರಿನ ಶಾಲೆಗೆ ಕಳಿಸಿದರೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಸರಕಾರದ ಸೌಲಭ್ಯ ಮತ್ತು ಒಳ್ಳೆಯ ಸಂಸ್ಕಾರ ಸಿಗುತ್ತೆ ಎಂದರು.

ಸಾರಾ ಇಬ್ರಾಹಿಂ ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಮಾತಾಡಿ, ಟ್ರಸ್ಟ್ ವಿದ್ಯೆ ಬಗ್ಗೆ ಪ್ರಥಮ ಆಧ್ಯತೆ ನೀಡಿತಿದ್ದು ಈ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಂಡು ಕಾರ್ಯಚರಿಸುತ್ತಿದೆ. ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಿದ್ದು ಸಂತೋಷವಾಗುತಿದೆ ಎಂದರು.
ಈ ಶಾಲಾ ಸ್ಥಾಪಕ ಸದಸ್ಯ ಇಸ್ಮಾಯಿಲ್ ಗಾಂಧಿನಗರ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು, ಅರುಣ್ ಪೂಜಾರಿ ಜಾರಿಗೆದಡಿ, ಉಮರ್.ಕೆ, ರಹಿಮಾನ್ ಪೆರಿಂಜೆ ಮಾತಾಡಿದರು. ಮುಖ್ಯ ಶಿಕ್ಷಕಿ ಕಮಲಮ್ಮ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ರೇಖಾ, ಪೆರಿಂಜೆಯ ಬುಲೆಟ್ ಖಾದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಹಾಗೂ ಶಾಲಾ ಅಭಿವೃದ್ಧಿ ಯೋಜನೆಗಳಲ್ಲಿ ಸಹಕರಿಸಿದ ಜಾರಿಗೆದಡಿ ಅರುಣ್ ಪೂಜಾರಿಯವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಶಿಕ್ಷಕಿ ಶ್ರೀಮತಿ ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿನೋದ ಕುಮಾರಿ ವಂದಿಸಿದರು.

Related posts

ಸುಲ್ಕೇರಿಮೊಗ್ರು : ಸಾನ್ವಿಯ 10ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ; ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಬೆಂದ್ರಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ : ಎಸ್‌ ಡಿ ಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ಎಲ್.ಸಿ.ಆರ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ” ವೆಬ್ ಟೆಕ್ ಫುಲ್ ಸ್ಟ್ಯಾಕ್ ಫಾಸ್ಟ್ ಟ್ರ್ಯಾಕ್” ತರಬೇತಿ ಕಾರ್ಯಾಗಾರಕ್ಕೆ ಚಾಲನೆ

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೆಯರ್ ವಿತರಣೆ

Suddi Udaya

ಮೂಡಿಗೆರೆ ರಾಣಿಝರಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಹುಚ್ಚಾಟ: ಬೈಕ್ ಸಹಿತ ಉಜಿರೆಯ ಐವರು ಯುವಕರನ್ನು ಬಂಧಿಸಿದ ಪೊಲೀಸರು

Suddi Udaya
error: Content is protected !!