September 15, 2026
ಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸೋಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ

ಸೋಣಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಣಂದೂರು ಇಲ್ಲಿ 2026-27 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭವನ್ನು ಜೂ.15 ರಂದು ಜರಗಿತು.


ವಿದ್ಯಾರ್ಥಿ ಜೀವನ ಎಂದರೆ ಕೇವಲ ಪಾಠ ಪ್ರವಚನಗಳಿಗೆ ಸೀಮಿತವಾಗಿರದೆ ಶಿಸ್ತು ಆರೋಗ್ಯ ಜವಾಬ್ದಾರಿಗಳ ಬಗ್ಗೆ ತಿಳುವಳಿಕೆ ಇರಬೇಕು ಎಂಬ ಕಾರಣಕ್ಕೆ ವಿದ್ಯಾರ್ಥಿ ಜೀವನದ ಹಂತದಲ್ಲಿ ಚುನಾವಣಾ ಪ್ರಚಾರ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.

ಜೂ 6 ರಂದು ನಡೆದ ಚುನಾವಣೆಯಲ್ಲಿ ಶಾಲಾ ಮುಖ್ಯಮಂತ್ರಿ ಆಗಿ 7ನೇ ತರಗತಿಯ ಗಗನ್, ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಮೊಹಮ್ಮದ್ ಫೈಜಲ್, ಶಾಲಾ ಗೃಹಮಂತ್ರಿಯಾಗಿ 6ನೇ ತರಗತಿಯ ಫಾತಿಮಾತ್ ರಿಫಾ ಅವರು ಆಯ್ಕೆಯಾಗಿರುತ್ತಾರೆ.


ಶಾಲಾ ಸಂಸತ್ತಿನಲ್ಲಿ ಶಾಲಾ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧಪಕ್ಷ, ಶಿಸ್ತು ಮತ್ತು ಶಿಕ್ಷಣ, ಆಹಾರ ಮತ್ತು ಆರೋಗ್ಯ, ಸಾಂಸ್ಕೃತಿಕ ಮಂತ್ರಿ, ಕ್ರೀಡಾ ಮಂತ್ರಿ, ನೀರಾವರಿ ಮತ್ತು ತೋಟಗಾರಿಕೆ, ವಾರ್ತಾ ಮಂತ್ರಿ ಮತ್ತು ಉಪ ಮಂತ್ರಿ ಗಳ ಆಯ್ಕೆ ನಡೆಸಲಾಯಿತು.


ಮಂತ್ರಿಗಳ ಜವಾಬ್ದಾರಿಯನ್ನು ಮುಖ್ಯ ಶಿಕ್ಷಕಿ ಅನಿತಾ ರೇಷ್ಮಾ ತಿಳಿಸಿದರು. ಸಹ ಶಿಕ್ಷಕಿ ರಕ್ಷಾ ಪ್ರತಿಜ್ಞಾವಿಧಿ ನೆರವೇರಿಸಿದರು. ಸಹಶಿಕ್ಷಕಿ ರಶ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಬಡಗಕಾರಂದೂರು: ಸ.ಉ.ಪ್ರಾ. ಶಾಲೆಯಲ್ಲಿ ಶ್ರಮದಾನ

Suddi Udaya

ಶಾಸಕ ಹರೀಶ್ ಪೂಂಜರವರಿಂದ ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಕ್ರಾಡಿ ಶಾಖೆಯ ಕೃಷಿ ಗೊಬ್ಬರ ಮಾರಾಟ ಕೇಂದ್ರ ಹಾಗೂ ಎಟಿಎಂ ಉದ್ಘಾಟನೆ

Suddi Udaya

ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಟನಾ ಸಮಿತಿ ಕನ್ವಿನರ್ ಆಗಿ ನ್ಯಾಯವಾದಿ ಅಸ್ಮಾ ಬೆಳ್ತಂಗಡಿ ಆಯ್ಕೆ

Suddi Udaya

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಾಣಿ ಕಾಲೇಜಿನ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯದ ಬಗ್ಗೆ ಗ್ರಾಮಸ್ಥರ ಸಭೆ: ಸಮಿತಿ ರಚನೆ

Suddi Udaya
error: Content is protected !!