September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಸುಗಳ ಅಭಿಯಾನ ಶಿಬಿರ

ಗೇರುಕಟ್ಟೆ : ನಾಳ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಸುಗಳ ಅಭಿಯಾನ ಮಾಹಿತಿ ಶಿಬಿರ ಜೂ.16 ರಂದು ಸಂಘದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಕೇಶವ ಪೂಜಾರಿ ಪಿ ನಾಳ ಇವರ ಮುತುವರ್ಜಿಯಲ್ಲಿ ನಡೆಯಿತು. ಶಿಬಿರದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಇದರ ತಾಲ್ಲೂಕುವಾರು ಉಪ ವ್ಯವಸ್ಥಾಪಕರುಗಳಾದ ಡಾ. ಡಿ.ಆರ್ ಸತೀಶ್ ರಾವ್ ಸೂಕ್ತ ಸಲಹೆಗಳನ್ನು ಹೈನುಗಾರರಿಗೆ ನೀಡಿದರು. ಉಪ ವ್ಯವಸ್ಥಾಪಕ ಡಾ. ಗಣಪತಿ ಮಾಂಗ ಇವರು ಹಸುಗಳ ಬಂಜೆತನ ನೀವಾರಿಸಲು ಕೆಲವು ಸುಲಭವಾಗಿ ಸಿಗುವ ಹಳ್ಳಿ ಮದ್ದುಗಳನ್ನು ರೈತರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಸ್ತರಣಾಧಿಕಾರಿಗಳಾದ ರಾಜೇಶ್ ಪಿ ಕೆ ಮತ್ತು ಸಂದೀಪ್ ಭಾಗವಹಿಸಿದರು. ಈ ಅಭಿಯಾನ ಸಂಘದ ಸದಸ್ಯರು ಅದ ಜಯಚಂದ್ರ ಮುಂಚಲ್ಲಕ್ಕಿ ಮತ್ತು ರೋನಾಲ್ಡ್ ಮೋನಿಸ್ ಇವರ ಮನೆಯಲ್ಲಿ ಕೂಡ ನಡೆಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸೋಮಪ್ಪ ಗೌಡ, ನಿರ್ದೇಶಕರುಗಳಾದ ಸುಧಾಕರ ಮಜಲು, ಬಾಲಕೃಷ್ಣ ಶೆಟ್ಟಿ, ವಿಠಲ ಗೌಡ ಪಿ, ಜಗದೀಶ್ ಪೂಜಾರಿ, ಬೊಮ್ಮಣ ಗೌಡ, ರಮೇಶ ಶೆಟ್ಟಿ, ಶ್ರೀಧರ ಪೂಜಾರಿ, ಶ್ರೀಮತಿ ರೀತಾ ಪಿ ನಾಳ,ಶ್ರೀಮತಿ ವಿಜಯಾ ಮತ್ತು ಸಂಘದ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಎಂ ಹಾಗೂ ಸಿಬ್ಬಂದಿ ವರ್ಗ ಕೆ ವೆಂಕಪ್ಪ ಪೂಜಾರಿ, ಸವಿತಾ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಶ್ರಮಿಕ ಕಚೇರಿಗೆ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಭೇಟಿ: ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya

ಎಸ್‌ಜಿಎಫ್‌ಐ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ: ರಾಜ್ಯ ಪ್ರತಿನಿಧಿಸಲಿರುವ ಉಜಿರೆಯ ಎಸ್.ಡಿ.ಎಂ ತಂಡ

Suddi Udaya

ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳಿಗೆ “ಗೋಲ್ ಸೆಟ್ಟಿಂಗ್” ತರಬೇತಿ ಕಾರ್ಯಾಗಾರ

Suddi Udaya

ಕನ್ಯಾಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಸಭೆ: ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ವಿತರಣೆ

Suddi Udaya

ಬಳಂಜ ಎಲ್ಯೋಟ್ಟು ರಾಜು ಪೂಜಾರಿ-ಶ್ರೀಮತಿ ಕಮಲ ಹಾಗೂ ಬಾಬು ಪೂಜಾರಿ-ಶ್ರೀಮತಿ ಪ್ರೇಮಾ ದಂಪತಿಗಳ 50ನೇ ವರ್ಷದ ವೈವಾಹಿಕ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆ

Suddi Udaya

ಡಿ.12ರಂದು ಬೆಳ್ತಂಗಡಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!