September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೇಲಂತಬೆಟ್ಟು ಸಂಪತ್ ಆಚಾರ್ಯ ರವರ ಚಿಕಿತ್ಸೆಗೆ ನೆರವಾಗಿ

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಸಂಪತ್ ಆಚಾರ್ಯ ಅವರು ಕಾರ್ಕಳದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪತ್ ಅವರ ಎಡ ಕೈ ಗಂಭೀರ ಗಾಯಗೊಂಡ ಕಾರಣ ಸಂಪೂರ್ಣ ತೆಗೆಯಲಾಗಿದೆ. ತಲೆಗೆ ಬಲವಾದ ಗಾಯಗಳು ಆಗಿರುವ ಕಾರಣ ದೊಡ್ಡ ಮಟ್ಟದ ಶಸ್ತ್ರ ಚಿಕಿತ್ಸೆ ಮಾಡುವ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿರುತ್ತಾರೆ.

ತೀರ ಬಡಕುಟುಂಬದ ಸಂಪತ್ ಅವರ ಮನೆಗೆ ಈಗ ಆಧಾರ ಸ್ತಂಭವಾಗಿ ಇರುವವರು ಸಹೋದರ ಸೂರ್ಯ ಆಚಾರ್ಯ ಅವರು. ಮನೆಯ ಪೂರ್ಣ ಜವಾಬ್ದಾರಿ ಹೊತ್ತು ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ ಅವರಿಗೆ ಸಹೋದರ ಸಂಪತ್ ಅವರ ಚಿಕಿತ್ಸೆಯ ವೆಚ್ಚಕ್ಕೆ ಅವರಿಂದ ಆಗುವ ವೆಚ್ಚವನ್ನು ಬರಿಸುತ್ತಿದ್ದಾರೆ. ಆದರೆ ಮುಂದಿನ ಒಟ್ಟು ಆಸ್ಪತ್ರೆಯ ವೆಚ್ಚ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಬೇಕಾಗಿರುವ ಕಾರಣ ಸಜ್ಜನರಾದ ತಾವೆಲ್ಲರೂ ತಮ್ಮ ಕೈಯಲ್ಲಿ ಆಗುವ ಸಹಾಯ ಮಾಡಬೇಕಾಗಿ ವಿನಂತಿಸಲಾಗಿದೆ. ಸಹಾಯ ಮಾಡುವವರು phone pay/ Gpay no: 9731020346

Related posts

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಿಂದ ಕಬಡ್ಡಿ ಮ್ಯಾಟ್ ಹಸ್ತಾಂತರ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಮಚ್ಚಿನ: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಂಚಮಿಯ ಕೊಪ್ಪರಿಗೆ ಮುಹೂರ್ತ, ಅಂಗಪ್ರದಕ್ಷಿಣೆ

Suddi Udaya

ಕಸಾಪ ಸಮ್ಮೇಳನ; ಸರ್ವಾಧ್ಯಕ್ಷ ಪ್ರೊ.ಎ ಕೃಷ್ಣಪ್ಪ ಪೂಜಾರಿ ಅವರಿಗೆ ಅಧಿಕೃತ ಆಮಂತ್ರಣ

Suddi Udaya

ಶಿಲಾ೯ಲಿನಲ್ಲಿ ತಂದೆಯ ಮೇಲೆ ಪುತ್ರ, ಸೊಸೆಯಿಂದ ಹಲ್ಲೆ ಆರೋಪ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಚೆಕ್ ಅಮಾನ್ಯ ಪ್ರಕರಣ; ನ್ಯಾಯಾಲಯದಲ್ಲಿ ಖುಲಾಸೆ

Suddi Udaya
error: Content is protected !!