24.8 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳದಲ್ಲಿ ಎಲ್ಲಾ ಸಂಘಗಳ ಉದ್ಘಾಟನಾ ಸಮಾರಂಭ ನೆರವೇರಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್ ದೀಪ ಪ್ರಜ್ವಲಿಸಿ ಸಂಘಗಳ ಕಾರ್ಯಗಳಿಗೆ ಚಾಲನೆ ನೀಡಿದರು. ಬಳಿಕ ಶಾಲೆಯ ಒಟ್ಟು ಹತ್ತು ಸಂಘಗಳು ತಮ್ಮ ವಾರ್ಷಿಕ ಯೋಜನೆಗಳನ್ನು ನಾಟಕ, ನೃತ್ಯ, ಕಥೆ, ಕವನ, ಹಾಡು ಇತ್ಯಾದಿ ವಿವಿಧ ಕಲಾಪ್ರಕಾರದ ರೂಪದಲ್ಲಿ ಪ್ರಸ್ತುತಪಡಿಸಿದರು.

ಅತಿಥಿಯಾಗಿ ಆಗಮಿಸಿದ್ದ ಡಾ. ಶ್ರೀಧರ ಭಟ್ ಅವರು ವಿವಿಧ ಸಂಘಗಳ ಯೋಚನೆಗಳನ್ನು ನೋಡಿ ಸಂತಸ ಪಟ್ಟರು.ವಿದ್ಯೆಯ ಮಹತ್ವ,ವಿದ್ಯಾರ್ಥಿಗಳ ಜೀವನದ ಮಹತ್ವ ಮತ್ತು ಅದು ಹೇಗಿರಬೇಕು,ಅಲ್ಪ ಆಹಾರದ ಮಹತ್ವ,ಪರಿಶ್ರಮ ಪಡಬೇಕಾದ ರೀತಿ, ಗುರಿ ಹಾಗೂ ಅದನ್ನು ತಲುಪುವ ದಾರಿ. ಪ್ರಾರ್ಥನೆಯ ಹಿಂದಿನ ಶಕ್ತಿ.ಪರಿಶ್ರಮ ಪಡಬೇಕಾದ ಅಗತ್ಯ, ಅವಕಾಶಗಳ ಸದುಪಯೋಗ, ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಸಂಘಗಳ ಮಹತ್ವ,ಅದನ್ನು ಉಪಯೋಗಿಸಿಕೊಳ್ಳುವ ರೀತಿ ಇತ್ಯಾದಿಗಳನ್ನು ಹಲವಾರು ಉದಾಹರಣೆಗಳ ಮುಖಾಂತರ ಮಾರ್ಮಿಕವಾಗಿ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಾಕ್ಷಿಗಳಾದರು.

Related posts

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪದವಿಪೂರ್ವ ಕಾಲೇಜು ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಅಸೌಖ್ಯದಿಂದ ಕೊಕ್ರಾಡಿ ಯುವಕ ಸಾವು

Suddi Udaya

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 548ನೇಯ ಯೋಜನೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ:ಶಾಲಾ ಮಕ್ಕಳಿಗೆ ಊಟದ ಬಟ್ಟಲು, ಲೋಟ ಮತ್ತು ತಟ್ಟೆ ಹಸ್ತಾಂತರ ಕಾರ್ಯಕ್ರಮ ನಡೆಯಿತು

Suddi Udaya

ಉಜಿರೆ ದುರ್ಗಾ ಮೊಬೈಲ್ಸ್ ಸೇಲ್ಸ್ & ಸರ್ವೀಸ್ ನವೀಕೃತಗೊಂಡು ಶುಭಾರಂಭ

Suddi Udaya
error: Content is protected !!