September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಫ್ಯಾಬ್ರಿಕ್ ಪೈಂಟ್ ಡಿಸೈನ್ ಉಚಿತ ತರಬೇತಿ ಶಿಬಿರದ ಉದ್ಘಾಟನೆ

ಕನ್ಯಾಡಿ : ಸೇವಾಭಾರತಿ ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ಧರ್ಮಸ್ಥಳ, ಶ್ರೀ ದುರ್ಗಾ ಮಾತೃ ಮಂಡಳಿ ಕನ್ಯಾಡಿ ಇವುಗಳ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 1 ತಿಂಗಳ ಫ್ಯಾಬ್ರಿಕ್ ಪೈಂಟ್ ಡಿಸೈನ್ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಜೂ.15 ರಂದು ಕನ್ಯಾಡಿ ಸೇವಾನಿಕೇತನದಲ್ಲಿ ನಡೆಯಿತು.

ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.), ನಿರ್ದೇಶಕ ನೀಲಕಂಠ ಶೆಟ್ಟಿಯವರು ಶಿಬಿರಕ್ಕೆ ಚಾಲನೆ ನೀಡಿ, ಫ್ಯಾಬ್ರಿಕ್ ಪೇಯಿಂಟ್ ಡಿಸೈನ್ ಎಂಬುದು ಕೇವಲ ಒಂದು ಕಲೆ ಮಾತ್ರವಲ್ಲ, ಅದು ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣದ ಉತ್ತಮ ಅವಕಾಶವಾಗಿದೆ. ಈ ತರಬೇತಿಯ ಮೂಲಕ ನೀವು ಹೊಸ ಕೌಶಲ್ಯಗಳನ್ನು ಕಲಿತು ನಿಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಿ ಎಂದು ಶುಭಹಾರೈಸಿದರು.

ಸೇವಾಭಾರತಿ ಅಧ್ಯಕ್ಷ ಹಾಗೂ ಸೇವಾಧಾಮ ಸಂಸ್ಥಾಪಕ ವಿನಾಯಕ ರಾವ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಯಶಸ್ಸು ಸಾಧಿಸಲು ದೊಡ್ಡ ಅವಕಾಶಗಳೇ ಬೇಕೆಂದಿಲ್ಲ, ಕಲಿಯುವ ಮನಸ್ಸು ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಸಾಕು. ಕಲಿಕೆಯ ಹಂಬಲ ಇರುವ ವ್ಯಕ್ತಿಗೆ ಯಾವುದೇ ಕ್ಷೇತ್ರ ಕಷ್ಟವಾಗುವುದಿಲ್ಲ. ಇಂತಹ ತರಬೇತಿಗಳು ನಮ್ಮ ಪ್ರತಿಭೆಯನ್ನು ಗುರುತಿಸಲು, ಅದನ್ನು ಬೆಳೆಸಿಕೊಳ್ಳಲು ಹಾಗೂ ಜೀವನದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ನೆರವಾಗುತ್ತವೆ. ಆದ್ದರಿಂದ ಈ ತರಬೇತಿಯನ್ನು ಒಂದು ಅವಕಾಶವಾಗಿ ಸ್ವೀಕರಿಸಿ, ಪ್ರತಿಯೊಬ್ಬರೂ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ನುಡಿದರು.

ಮಂಗಳೂರು ವಿಭಾಗದ ರಾ. ಸ್ವ. ಸಂಘದ ಘುಮಂತು ಕಾರ್ಯ ವಿಭಾಗ ಪ್ರಮುಖರಾದ ಸುದರ್ಶನ್ ಕೆ ವಿ, ಉದ್ಯಮಿ ಶ್ರೀಮತಿ ಸ್ವಾತಿ ವಿಶ್ವಜಿತ್, ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷೆ ಮಮತಾ ಬಿ, ಫ್ಯಾಷನ್ ಡಿಸೈನರ್ ಮತ್ತು ತರಬೇತುದಾರರಾದ ಭವ್ಯಶ್ರೀ ಕೀರ್ತಿರಾಜ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 20 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿಯ ಸದಸ್ಯರಾದ ಶ್ರೀಮತಿ ಸವಿತಾ ಎಂ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಾವತಿ ನಿರೂಪಿಸಿ, ಸೇವಾಭಾರತಿ ಡಾಕ್ಯುಮೆಂಟೇಷನ್ ಮಾನಿಟರಿಂಗ್ ಮತ್ತು ಇವೆಲ್ಯೂಷನ್ ಕಾರ್ಡಿನೇಟರ್ ಕು. ಸುಮ ಧನ್ಯವಾದವಿತ್ತರು.

Related posts

26 ನೇ ವರ್ಷದ ಭಜನಾ ತರಭೇತಿ ಕಮ್ಮಟದ ಸಮಾರೋಪ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿ ಭಾವದ ಭಜನೆಯ ಝೇಂಕಾರ

Suddi Udaya

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ತೆಕ್ಕಾರು ಗ್ರಾ.ಪಂ. ಎದುರು ಪ್ರತಿಭಟನೆ

Suddi Udaya

ಉಜಿರೆ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಯುಗಾದಿ ಹಾಗೂ ರಂಝಾನ್ ಹಬ್ಬದ ಪ್ರಯುಕ್ತ ವಿಶೇಷ ಆಫರ್: ಪ್ರತಿ ಖರೀದಿ ಮೇಲೆ ಶಾಪಿಂಗ್ ವೊಚರ್

Suddi Udaya

ಕೊಯ್ಯೂರು: ಪಾರೊಟ್ಟು ನಿವಾಸಿ ಹೊನ್ನಪ್ಪ ಗೌಡ ನಿಧನ

Suddi Udaya

ಮುಂಡಾಜೆ ವಲಯದ ಕಾನರ್ಪ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಜು.26: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ “ಕಾರ್ಗಿಲ್ ವಿಜಯ ದಿವಸ್” ಪಂಜಿನ ಮೆರವಣಿಗೆ

Suddi Udaya
error: Content is protected !!