25.5 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ಉಜಿರೆ ಸಿಟಿ ವತಿಯಿಂದ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಕ್ತದಾನದ ಜಾಗೃತಿ – ಮಾಹಿತಿ ಕಾರ್ಯಾಗಾರ

ಉಜಿರೆ : ಜೆಸಿಐ ಉಜಿರೆ ಸಿಟಿ ವತಿಯಿಂದ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ರಕ್ತದಾನದ ಜಾಗೃತಿ – ಮಾಹಿತಿ ಕಾರ್ಯಾಗಾರ
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸೇವಾ ಭಾರತಿ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷ ವಿನಾಯಕ ರಾವ್ ರವರು ರಕ್ತದಾನ ಶಿಬಿರ ಆಯೋಜನೆಯ ತಮ್ಮ ಸ್ವಅನುಭವಗಳನ್ನು ಹಂಚಿಕೊಂಡು, ರಕ್ತದಾನದ ಮಹತ್ವವನ್ನು ತಿಳಿಸಿದರು. “ಬ್ಲಡ್ ಡೊನೇಟ್” ತುರ್ತು ಸೌಲಭ್ಯವನ್ನು ಹೊಂದಿರುವ ಸೇವಾ ಭಾರತಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿ, ಅಗತ್ಯ ಸಂದರ್ಭದಲ್ಲಿ ಸಂಪರ್ಕಿಸುವಂತೆ ತಿಳಿಸಿ ಇವರು ಜೆಸಿಐ ಉಜಿರೆ ಘಟಕದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಸನ್ಮಾನ ಕಾರ್ಯಕ್ರಮ
48 ಬಾರಿ ರಕ್ತದಾನ ಮಾಡಿರುವ ಎಸ್.ಡಿ.ಎಂ ಕಾಲೇಜಿನ ಪಾಲಿಟೆಕ್ನಿಕ್ ಉಪನ್ಯಾಸಕರು ಹಾಗೂ ರೆಡ್ ಕ್ರಾಸ್ ವಿಭಾಗದ ಕಾರ್ಯನಿರ್ವಹಣಾಧಿಕಾರಿಯಾದ ಅವನೀಶ್ ಮತ್ತು ಉಜಿರೆ ವರ್ತಕರ ಸಂಘದ ಅಧ್ಯಕ್ಷರು ರಮ್ಯಾ 1 ಗ್ರಾಂ ಗೋಲ್ಡ್ ಅಂಡ್ ಫ್ಯಾನ್ಸಿ ಇದರ ಮಾಲಕರು 30 ಬಾರಿ ರಕ್ತದಾನ ಮಾಡಿರುವ ಪ್ರಸಾದ್ ಬಿ ಎಸ್ ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಘಟಕ ಅಧ್ಯಕ್ಷ ಮೊಹಮ್ಮದ್ ಮಿರ್ಷಾದ್ ರವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮಹಿಳಾ ಜೆಸಿ ವಿಭಾಗದ ಸಂಯೋಜಕಿ ಹೇಮಾವತಿ.ಕೆ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಭವ್ಯಶ್ರೀ ಧನ್ಯವಾದ ಸಮರ್ಪಿಸಿದರು. ಜೆಸಿ ಸದಸ್ಯೆ ಸುಮಿತ್ರಾ ರವರು ಜೆಸಿ ವಾಣಿ ಉದ್ಘೋಷಿಸಿದರು.

ಕಾರ್ಯಕ್ರಮದಲ್ಲಿ ಜೆಸಿಐ ಸದಸ್ಯರು ಹಾಗೂ ಸೇವಾ ಭಾರತಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

Related posts

ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ

Suddi Udaya

ಲಾಯಿಲ ವಲಯ ಭಜನಾ ಪರಿಷತ್ತಿನ ಸಭೆ

Suddi Udaya

ಪಡಂಗಡಿ : ಹೊನಲು ಬೆಳಕಿನ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪೆರಿಂಜೆ : ರಸಿಕ ಕಂಬಳಿ ನಿಧನ

Suddi Udaya

ಇಳಂತಿಲ: ಬೃಹತ್ ಗಾತ್ರದಲ್ಲಿ ಗುಡ್ಡ ಕುಸಿತ : ಗ್ರಾ.ಪಂ. ಸದಸ್ಯ ತಿಮ್ಮಪ್ಪ ಗೌಡರ ನೇತೃತ್ವದಲ್ಲಿ ತೆರವು ಕಾರ್ಯ

Suddi Udaya

ಅಭಿವೃದ್ಧಿ ಅಧಿಕಾರಿಗಳಾದ ಸಫಾನ, ಸುಮ ವರ್ಗಾವಣೆ: ಧರ್ಮಸ್ಥಳ ಪಿಡಿಓ ಆಗಿ ನಾಗೇಶ್, ಸುಲ್ಕೇರಿಗೆ ಗೌರಿಶಂಕರ್, ಪಟ್ರಮೆಗೆ ಹೊನ್ನಮ್ಮ, ಮೇಲಂತಬೆಟ್ಟುಗೆ ಜಗದೀಶ್ ನೇಮಕ

Suddi Udaya
error: Content is protected !!