25.5 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ-ಕೋರ್ಟು ರಸ್ತೆಯಲ್ಲಿ ಅಪಾಯಕಾರಿ ಗುಂಡಿಗೆ ರೆಡ್ ಟೇಪ್ ಹಾಕಿ ಎಚ್ಚರಿಕೆ

ಬೆಳ್ತಂಗಡಿ: ಬೆಳ್ತಂಗಡಿಯಿಂದ ಕೋರ್ಟುಗೆ ಹೋಗುವ ರಸ್ತೆ ಬದಿಯಲ್ಲಿ ಗುಂಡಿಯೊಂದು ನಿರ್ಮಾಣವಾಗಿದ್ದು, ವಾಹನ ಚಾಲಕರಿಗೆ ಹಾಗೂ ಪಾದಾಚಾರಿಗಳಿಗೆ ಅಪಾಯವನ್ನು ತಂದೊಡ್ಡಿದೆ. ಇದೀಗ ಗುಂಡಿ ಗೋಚರಿಸಲು ಕೆಂಪುಪಟ್ಟಿ ಹಾಕಲಾಗಿದೆ. ಸುದ್ದಿ ಉದಯ ವಾರ ಪತ್ರಿಕೆಯಲ್ಲಿ ಜೂ.11 ರಂದು ಪ್ರಕಟವಾದ ವಿಶೇಷ ವರದಿಯಾ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸಾರ್ವಜನಿಕರ ಸುರಕ್ಷತೆಗಾಗಿ ಗುಂಡಿಯ ಸುತ್ತ ಕೆಂಪು ಪಟ್ಟಿ ಹಾಕಿದ್ದಾರೆ.

ಕೋರ್ಟು ರಸ್ತೆಗೆ ತಾಗಿಕೊಂಡೇ ಈ ಗುಂಡಿ ನಿರ್ಮಾಣವಾಗಿದ್ದು, ವಾಹನಗಳಲ್ಲಿ ಬರುವ ಚಾಲಕರಿಗೆ ಇದು ಪಕ್ಕನೆ ಅರಿವಿಗೆ ಬರುವುದಿಲ್ಲ, ಯಾರೋ ಒಬ್ಬರು ಪುಣ್ಯಾತ್ಮರು ಗುಂಡಿ ನಿರ್ಮಾಣವಾದ ಜಾಗದ ಬಳಿ ರಸ್ತೆಯಲ್ಲಿ ಕಲ್ಲೊಂದನ್ನು ಇಟ್ಟು ಇಲ್ಲಿ ಅಪಾಯ ಇದೆ ಎಂಬ ಬಗ್ಗೆ ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಈ ರಸ್ತೆಯಲ್ಲಿ ಕೋರ್ಟು, ಸುದೇಮುಗೇರು, ಸಂಜಯನಗದ ಕಡೆ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹೋಗುತ್ತಾರೆ. ಹಲವಾರು ವಾಹನಗಳ ಓಡಾಟ ಇದೆ. ರಸ್ತೆಯ ಎರಡು ಬಂದಿಯ ಕುಸಿದ ಗುಂಡಿ ನಿರ್ಮಾಣವಾದರೂ ಸಂಬಂಧಪಟ್ಟ ಇಲಾಖೆಯಾಗಲಿ ಅಧಿಕಾರಿಗಳಾಗಲಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆವಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Related posts

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷರಾಗಿ ತುಕರಾಮ್ ಬಿ., ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ ಬಳಂಜ

Suddi Udaya

ಮಚ್ಚಿನ : ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಈಶ್ವರ ದೇವರ ನೂತನ ಗರ್ಭಗೃಹದ ಶಿಲಾನ್ಯಾಸ

Suddi Udaya

ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆ

Suddi Udaya

ಇತಿಹಾಸ ಪ್ರಸಿದ್ಧ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ 20ನೇ ವಷ೯ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಯೋಧರಿಗೆ ಗೌರವಾರ್ಪಣೆ

Suddi Udaya

ಕೊಲ್ಲಿ: ರತನ್ ಶೆಟ್ಟಿಯವರ ಮನೆಯೊಳಗಿದ್ದ ಸೌಂಡ್ ಬಾಕ್ಸ್ ನಲ್ಲಿ ಅವಿತಿದ್ದ ಕಾಳಿಂಗ ಸರ್ಪ

Suddi Udaya

ಜೆಸಿಐ ಉಜಿರೆ ಸಿಟಿ ವತಿಯಿಂದ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಕ್ತದಾನದ ಜಾಗೃತಿ – ಮಾಹಿತಿ ಕಾರ್ಯಾಗಾರ

Suddi Udaya
error: Content is protected !!