28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸುದ್ದಿ ಉದಯ ವರದಿ ಫಲಶ್ರುತಿ: ಬೆಳ್ತಂಗಡಿ- ಕೋರ್ಟು ರಸ್ತೆಯಲ್ಲಿದ್ದ ಅಪಾಯಕಾರಿ ಗುಂಡಿ ಮುಚ್ಚಿದ ನ.ಪಂ.

ಬೆಳ್ತಂಗಡಿ: ಬೆಳ್ತಂಗಡಿಯಿಂದ ಕೋರ್ಟುಗೆ ಹೋಗುವ ರಸ್ತೆ ಬದಿಯಲ್ಲಿ ಗುಂಡಿಯೊಂದು ನಿರ್ಮಾಣವಾಗಿ ವಾಹನ ಚಾಲಕರಿಗೆ ಹಾಗೂ ಪಾದಾಚಾರಿಗಳಿಗೆ ಅಪಾಯವನ್ನು ತಂದೊಡಿದ್ದು, ಈ ಗುಂಡಿಯನ್ನು ನಗರ ಪಂಚಾಯತು ಮುಚ್ಚುವ ಕಾಮಗಾರಿ ನಡೆಸಿದೆ.

ಕೋರ್ಟು ರಸ್ತೆಯಲ್ಲಿ ರಸ್ತೆ ಬದಿ ಅಪಾಯಕಾರಿ ಗುಂಡಿ ನಿರ್ಮಾಣವಾಗಿ ಪಾದಾಚಾರಿಗಳಿಗೆ, ವಾಹನ ಚಾಲಕರಿಗೆ ಸಮಸ್ಯೆಯಾಗಿರುವ ಕುರಿತು ಈ ವಾರದ ‘ಸುದ್ದಿ ಉದಯ ಪತ್ರಿಕೆ’ಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ರಸ್ತೆಗೆ ತಾಗಿಕೊಂಡೇ ಈ ಗುಂಡಿ ನಿರ್ಮಾಣವಾಗಿದ್ದು, ವಾಹನಗಳಲ್ಲಿ ಬರುವ ಚಾಲಕರಿಗೆ ಇದು ಪಕ್ಕನೆ ಅರಿಗೆ ಬರುವುದಿಲ್ಲ, ಯಾರೋ ಒಬ್ಬರು ಪುಣ್ಯಮ್ಮರು ಗುಂಡಿ ನಿರ್ಮಾಣವಾದ ಜಾಗದ ಬಳಿ ರಸ್ತೆಯಲ್ಲಿ ಕಲ್ಲೊಂದನ್ನು ಇಟ್ಟು ಇಲ್ಲಿ ಅಪಾಯ ಇದೆ ಎಂಬ ಬಗ್ಗೆ ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಈ ರಸ್ತೆಯಲ್ಲಿ ಕೋರ್ಟು, ಸುದೇಮುಗೇರು, ಸಂಜಯನಗರ ಕಡೆ ಪ್ರತಿ ದಿನ ನೂರಾರು

ಸಂಖ್ಯೆಲ್ಲಿ ಸಾರ್ವಜನಿಕರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹೋಗುತ್ತಾರೆ. ಹಲವಾರು ವಾಹನಗಳ ಓಡಾಟ ಇದೆ. ರಸ್ತೆ ಬದಿ ನಿರ್ಮಾಣವಾದ ಈ ಗುಂಡಿ ಬಳಿ ಕಲ್ಲು ಇಟ್ಟಿರುವುದರಿಂದ ಎಲ್ಲರಿಗೂ ಗೊತ್ತಾಗಿದೆ. ಇಲ್ಲವಾದರೆ ಈ ಗುಂಡಿಗೆ ಯಾರಾದರೂ ಬಿದ್ದು ಹಾನಿ ಸಂಭವಿಸುವ ಸಾಧ್ಯತೆ ಇತ್ತು ಎಂದು ನ.ಪಂ ಮಾಜಿ ಹಿರಿಯ ಸದಸ್ಯ ಜಗದೀಶ್ ಡಿ ತಿಳಿಸಿದ್ದರು. ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ ನಗರ ಪಂಚಾಯತು ಅಧಿಕಾರಿಗಳು ಈಗ ಗುಂಡಿಯನ್ನು ಮುಚ್ಚುವ ಕಾಮಗಾರಿಯನ್ನು ನಡೆಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Related posts

ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ತಿಂಗಳ ಸಭೆ ಹಾಗೂ ಆಟಿಡ್ ಒಂಜಿ ವಿಶೇಷ ತಿನಸ್

Suddi Udaya

ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ದೋಸೆ ಹಬ್ಬ ಹಾಗೂ ಪುರುಷರ ಹಗ್ಗಜಗ್ಗಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನದ ಸಂಭ್ರಮ

Suddi Udaya

ಟ್ರಯಥ್ಲಾನ್ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌: ಪಡಂಗಡಿಯ ಕುವರಿ ಅದ್ವಿಕಾ ಕೆಪಿ ಯವರಿಗೆ ಕಂಚಿನ ಪ್ರಶಸ್ತಿ

Suddi Udaya

ಜನಪ್ರತಿನಿಧಿ ನೆಲೆಯಿಂದ ಶಾಸಕರಿಂದ ಆಮಂತ್ರಣ ಅನಾವರಣ : ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವ ನೆರವಿನ ಭರವಸೆ

Suddi Udaya

ನಡ ಗ್ರಾಮ ಪಂಚಾಯತ್ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ

Suddi Udaya
error: Content is protected !!