27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

ಪುದುವೆಟ್ಟು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟುಇಲ್ಲಿ ವಿವಿಧ ಸಂಘಗಳ ಉದ್ಘಾಟನೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯ ಲೆಕ್ಕಾಧಿಕಾರಿ ಪುರಂದರ ಭಟ್ ರವರು ಶಾಲೆಗಳಲ್ಲಿ ಸಂಘಗಳ ರಚನೆ ಮಾಡಿ ಬೇರೆ ಬೇರೆ ಸಂಘಗಳ ಪರಿಕಲ್ಪನೆಯನ್ನು ಮೂಡಿಸಿ ಆ ವಿದ್ಯಾರ್ಥಿಯು ಮುಂದೊಂದು ದಿನ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ, ಅದೇ ರೀತಿ ಇಂತಹ ಸಂಘಗಳಿಂದ ಪರಿಸರ ಜಾಗೃತಿ, ವಿಜ್ಞಾನದ ಕುತೂಹಲ, ಭಾರತೀಯ ಸಂಸ್ಕೃತಿ, ಸಾಹಿತ್ಯಗಳನ್ನು ತಿಳಿಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ ರವರು ಸಂಘಗಳು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿಯಾದ ಶ್ರೀಮತಿ ತೇಜಾವತಿಯವರು ಉಪಸ್ಥಿತರಿದ್ದರು.

ವಿವಿಧ ಸಂಘಗಳ ಜವಾಬ್ದಾರಿಯನ್ನು ಶಾಲಾ ಶಿಕ್ಷಕ ಪವನ್ ಕುಮಾರ್ ತಿಳಿಸಿಕೊಟ್ಟರು . ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ನಿಶಾಂತ್ ಕುಮಾರ ಸ್ವಾಗತಿಸಿ ಕು. ಜಿತೀಕ್ಷಾ ಧನ್ಯವಾದವಿತ್ತರು. ಶಾಲಾ ಶಿಕ್ಷಕಿ ಪುಷ್ಪಲತಾ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಉಜಿರೆ ಶ್ರೀ ಧ.ಮಂ.ಕಾಲೇಜಿನಲ್ಲಿ “MS Excel with Power BI” ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮ

Suddi Udaya

ಉಜಿರೆ : ಕಾಲೇಜು ವಿದ್ಯಾರ್ಥಿ ಚಂದ್ರಶೇಖರ್ ಗೌಡ ನಿಧನ

Suddi Udaya

ಕಕ್ಕಿಂಜೆ: ರಮ್ಯ ಡ್ರೆಸ್ಸಸ್ ನಲ್ಲಿ ಶೇ. 10-30 ಡಿಸ್ಕೌಂಟ್ ಸೇಲ್

Suddi Udaya

ಐಸಿಎಸ್‌ಇ ಪರೀಕ್ಷೆ: ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕಿನ್ನರ ಮೇಳ ರಂಗ ತಂಡದಿಂದ ‘ ‘ಇರುವೆ ಪುರಾಣ ‘ ಮಕ್ಕಳ ನಾಟಕ ಪ್ರದರ್ಶನ

Suddi Udaya

ಸ್ನಾತಕೋತ್ತರ ವಿಭಾಗದಲ್ಲಿ ನೈನಾಡಿನ ಚೇತನಾ ರವರಿಗೆ ನಾಲ್ಕು ಚಿನ್ನದ ಪದಕ

Suddi Udaya
error: Content is protected !!