27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ : ಅಭ್ಯಾಸ್ ಪಿ.ಯು ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಕಾರ್ಯಕ್ರಮ

ಉಜಿರೆ: ಅಭ್ಯಾಸ್ ಪಿ.ಯು ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಕಾರ್ಯಕ್ರಮ ಅಭ್ಯಾಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಅಭ್ಯಾಸ್ ಪಿ.ಯು ಕಾಲೇಜಿನ ಅಧ್ಯಕ್ಷ ಕಾರ್ತಿಕೇಯ ಎಂ. ಎಸ್ ಹಾಗೂ ಮುಖ್ಯ ಅತಿಥಿಯಾದ ಬೆಳ್ತಂಗಡಿ ತಾಲೂಕಿನ ಪೊಲೀಸ್ ಉಪ -ನೀರಿಕ್ಷಕ ಸಿಕಂದರ್ ಪಾಶ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಅಭ್ಯಾಸ್ ಪಿ.ಯು ಕಾಲೇಜಿನ ಅಧ್ಯಕ್ಷ ಕಾರ್ತಿಕೇಯ ಎಂ. ಎಸ್ ರವರು ವಿದ್ಯಾರ್ಥಿಗಳನ್ನು ಕುರಿತು, ಯುವಜನರೇ, ನಶೆ ನಮ್ಮ ದೇಹಕ್ಕಷ್ಟೇ ಅಲ್ಲ, ನಮ್ಮ ದೇಶದ ಭವಿಷ್ಯಕ್ಕೂ ಮಾರಕ, ಡ್ರಗ್ಸ್ ಮುಕ್ತ ಭಾರತ ಕಟ್ಟುವುದು ನಮ್ಮೆಲ್ಲರ ಕರ್ತವ್ಯ, ಇದೇ ನಿಜವಾದ ದೇಶಭಕ್ತಿ ಹೀಗೆ ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಮುಖ್ಯ ಅತಿಥಿಗಳಾದ ಬೆಳ್ತಂಗಡಿ ತಾಲೂಕಿನ ಪೊಲೀಸ್ ಉಪ -ನೀರಿಕ್ಷಕರಾದ ಸಿಕಂದರ್ ಪಾಶ ರವರು ವಿದ್ಯಾರ್ಥಿಗಳನ್ನ ಕುರಿತು NDPS ಕಾಯ್ದೆ,1985ರ ಪ್ರಕಾರ ಮಾದಕ ವಸ್ತುಗಳ ಸೇವನೆ, ಹೊಂದಾಣಿಕೆ ಮತ್ತು ಸಾಗಾಣಿಕೆ ಸಂಪೂರ್ಣ ಅಪರಾಧ. ಇದರಲ್ಲಿ ಸಿಕ್ಕಿಬಿದ್ದರೆ 10 ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ, ಆದ್ದರಿಂದ ಡ್ರಗ್ಸ್ ಗೆ ‘ನೋ’ ಹೇಳಿ ನಶಾ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ, ಮಕ್ಕಳೇ, ನಿಮ್ಮ ಬದುಕು ಬೆಲೆಬಾಳುವ ಪುಸ್ತಕದಂತೆ, ಡ್ರಗ್ಸ್ ಅದರ ಪುಟಗಳನ್ನು ಸುಡುತ್ತದೆ. ಹಾಗಾಗಿ ನಶೆ ಬೇಡ ಅಂತ ಹೇಳಿ, ನಶಾ ಮುಕ್ತ ಭಾರತದ ಕನಸಿಗೆ ಕೈಜೋಡಿಸಿ. ಹೀಗೆ ಹಲವಾರು ವಿಷಯಗಳನ್ನ ತಿಳಿಸಿ ಪ್ರತಿಜ್ಞಾ ವಿಧಿ ಭೋಧಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಸುಧೀರ್ ನಿರೂಪಿಸಿದರು. ರಾಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ವಿದ್ಯಾಶ್ರೀ ಬಿ.ಎಸ್ ಸ್ವಾಗತಿಸಿದರು. ಹಾಗೂ ಎಲ್ಲಾ ಬೋಧಕೇತರ ಸಿಬ್ಬಂದಿ ವರ್ಗದವರೂ, ಸಹಾಯಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿ ಸ್ವಸ್ತಿ ಶ್ರೀ ಹೆಬ್ಬಾರ್ ಪ್ರಾರ್ಥನೆಗೈದರು, ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಚೆನ್ನಬಸವ ವಂದಿಸಿದರು.

Related posts

ಏ.18: ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಮಂದಾರ ಸಂಭ್ರಮ-2026

Suddi Udaya

572 ಗ್ರಾಮ ಆಡಳಿತ ಅಧಿಕಾರಿ (VAO)ಹುದ್ದೆಗಳಿಗೆ ಅರ್ಜಿ ಆಹ್ವಾನ: ವಿದ್ಯಾಮಾತಾ ಅಕಾಡೆಮಿಯಿಂದ ತರಬೇತಿ ಪ್ರಾರಂಭ: ಪಿಯುಸಿ ಮುಗಿಸಿರುವಂತಹ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ

Suddi Udaya

ದಿಡುಪೆ: ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Suddi Udaya

ಉಜಿರೆ: ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ನೂತನ ಒಳ ಕ್ರೀಡಾಂಗಣ ಪ್ರಾರಂಭೋತ್ಸವ ಮಕ್ಕಳ ಭವಿಷ್ಯಕ್ಕೆ ಆಧುನಿಕ ಶಿಕ್ಷಣ ಅಗತ್ಯ: ಶರತ್ ಕೃಷ್ಣ ಪಡ್ವೆಟ್ನಾಯ

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಮಾಣ ವಚನ ಸ್ವೀಕಾರ

Suddi Udaya

ರಾಷ್ಟ ಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆ ಪ.ಪೂ. ಕಾಲೇಜು ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya
error: Content is protected !!