30.6 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಮುಂಡಾಜೆ ಯುವವಾಹಿನಿ ಸಂಚಲನಾ ಸಮಿತಿಯ ಪದಗ್ರಹಣ, ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ

ಮುಂಡಾಜೆ: ಯುವವಾಹಿನಿ ಸಂಚಲನಾ ಸಮಿತಿ ಮುಂಡಾಜೆ ಇದರ 6ನೇ ವರ್ಷದ ಪದಗ್ರಹಣ , ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಜೂ.28ರಂದು ಮುಂಡಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕೇಶವ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಯುವ ವಾಹಿನಿ ಬೆಳ್ತಂಗಡಿ ಘಟಕದ ನಿಯೋಜಿತ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಪಣಕಜೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

2025-26ನೇ ಸಾಲಿನ ವರದಿ ವಾಚನವನ್ನು ಕಾರ್ಯದರ್ಶಿ ಜಿತಿಕ್ಷಾ ವಾಚಿಸಿದರು. 2026ನೇ ಸಾಲಿನ ನೂತನ ಪದಾಧಿಕಾರಿಗಳ ಸಮಿತಿಯನ್ನು ಅಧ್ಯಕ್ಷ ಕೇಶವ ಪೂಜಾರಿ ಶಾರದ ನಗರ ಹಾಗೂ ಕಾರ್ಯದರ್ಶಿ ಸಂತೋಷ್ ಪೂಜಾರಿ ಪಿಲತಡ್ಕ ಇವರಿಗೆ ಸಂಚಲನಾ ಸಮಿತಿಯ ಪುಸ್ತಕ ಹಸ್ತಾಂತರ ಮಾಡುವ ಮುಖೇನ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ 500ಕ್ಕಿಂತ ಅಧಿಕ ಅಂಕ ಗಳಿಸಿದ ಸ್ವಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಅದೇ ರೀತಿ 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.

ಸಮಾರಂಭದ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಆಯೋಜಿಸಲಾಗಿರುವ ಪದಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷ ಬಾಬು ಪೂಜಾರಿ ಕೂಳೂರು ಸಭೆಯನ್ನುದ್ದೇಶಿಸಿ ಪ್ರಾಸ್ತವಿಕ ನುಡಿಯನ್ನು ನುಡಿದರು. ತಂಡದ ಸಂಚಾಲಕ ಗಣೇಶ್ ಬಂಗೇರ ಕೂಳೂರು ಮಕ್ಕಳಿಗೆ ಶುಭನುಡಿ ನುಡಿದರು.

ಮುಖ್ಯ ಅತಿಥಿ ಕಿಶೋರ್ ಕುಮಾರ್ ಕುರುಡ್ಯ ಸಭೆಯನ್ನು ಉದ್ದೇಶಿಸಿ ಹಿತನುಡಿಗಳ ನುಡಿದರು. ಬೆಳ್ತಂಗಡಿ ಘಟಕದ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ, ನಿಯೋಜಿತ ಕಾರ್ಯದರ್ಶಿ ಅಶ್ವಿನ್ ಹಾಗೂ ನಿಯೋಜಿತ ಕೋಶಾಧಿಕಾರಿ ಸುದೀಪ್ ಸಾಲ್ಯಾನ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಕ್ಷ ಕೇಶವ ಪೂಜಾರಿ ಇವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಸ್ವಜಾತಿ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಯಶೋಧರ ಪೂಜಾರಿ ಸ್ವಾಗತಿಸಿ, ಲೀಲಾವತಿ ವಂದಿಸಿದರು. ನಿಶ್ಮಿತಾ ನಿರೂಪಿಸಿದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂಸ್ಕೃತೋತ್ಸವ

Suddi Udaya

ಶ್ರೀ ಗುರುದೇವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಉಜಿರೆ ಶ್ರೀ. ಧ.ಮಂ. ಆಂ.ಮಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಮಳೆನೀರಿನ ಕೊಯ್ಲು ಪ್ರಾತ್ಯಾಕ್ಷಿತೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ,(ಸಿ.ಬಿ.ಎಸ್.ಇ) ಕನ್ನಡ ರಾಜ್ಯೋತ್ಸವ

Suddi Udaya

ಸೂಳಬೆಟ್ಟು ಸ.ಕಿ.ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣೆ

Suddi Udaya

ಕೊಕ್ಕಡ ಸೈಂಟ್ ಫ್ರಾನ್ಸಿಸ್ ಪ.ಪೂ ಕಾಲೇಜಿಗೆ ಶೇ.100 ಫಲಿತಾಂಶ

Suddi Udaya
error: Content is protected !!