23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡಾಜೆ : ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

ಮುಂಡಾಜೆ : ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ ಇಲ್ಲಿ ಜೂ.30 ರಂದು ಯಕ್ಷ ಧ್ರುವ ಪಟ್ಲ ಪೌಂಡೇಶನ್ (ರಿ) ವತಿಯಿಂದ ಯಕ್ಷಗಾನ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿ ಗಳಾದ ಸಾತ್ವಿಕ್ ಪಿ ಹಾಗೂ ಡಿ ವಿಜಿತ್ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮಂತ್ರಿಮಂಡಲದ ನಾಯಕನಾದ ಜಶ್ವಿನ್ ಬಿ ಎಸ್ ವಹಿಸಿಕೊಂಡಿದ್ದರು. ಯಕ್ಷದ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಯಕ್ಷದ್ರುವ ಪಟ್ಲ ಪೌಂಡೇಶನ್ (ರಿ)ಬೆಳ್ತಂಗಡಿ ಘಟಕ ಇದರ ಕಾರ್ಯದರ್ಶಿ ಶೃತಿ ಕಂಠ ಭಟ್ ಯಕ್ಷಗಾನ ಕಲಿಕೆ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ , ಶಾಲಾ ಪ್ರಾಂಶುಪಾಲರಾದ ಮುರಳಿಧರ್ ಜಿ ಎನ್ , ಕಂಪ್ಯೂಟರ್ ಶಿಕ್ಷಕಿ ಹಾಗೂ ನಿಲಯಪಾಲಕಿಯಾದ ರೋಹಿಣಿ ಆರ್ ಜಿ ,ಯಕ್ಷಗಾನ ತರಗತಿಯ ಶಾಲಾ ಸಂಚಾಲಕರಾದ ಸುರಕ್ಷಾ ಉಪಸ್ಥಿತರಿದ್ದರು . ಕಾರ್ಯಕ್ರಮವನ್ನು ಹತ್ತನೇ ತರಗತಿಯ ತನ್ವಿತ್ ಸ್ವಾಗತಿಸಿದರು , ಉಲ್ಲಾಸ್ ವಂದಿಸಿದರು, ತನ್ವಿತ್ ಕೆ ಕಾರ್ಯಕ್ರಮ ನಿರೂಪಿಸಿದರು.

Related posts

ಎಕ್ಸೆಲ್ ನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಪ್ರಯುಕ್ತ ‘ಸೇಪ್ಟಿ ರೈಡ್’ ಜಾಗೃತಿ ಅಭಿಯಾನ

Suddi Udaya

ಜ್ಞಾನ ಪೀಠ ಪುರಸ್ಕೃತರು: ಉಪನ್ಯಾಸ ಮಾಲೆ ಕಾರ್ಯಕ್ರಮದ ಉದ್ಘಾಟನೆ

Suddi Udaya

ಗುರುವಾಯನಕೆರೆ: ಎಸ್.ಎಂ.ಎ ವತಿಯಿಂದ ನೂತನ ಮದರಸ ಕಟ್ಟಡ ಉದ್ಘಾಟನೆ

Suddi Udaya

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ದಿ| ದೇವಪ್ಪ ಗೌಡ ಉಜಿರೆ ರವರಿಗೆ ಶ್ರದ್ಧಾಂಜಲಿ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ತಂಬಾಕು ರಹಿತ ದಿನ

Suddi Udaya
error: Content is protected !!