23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಹಾ.ಉ. ಕಾರ್ಯದರ್ಶಿಯವರ ವತಿಯಿಂದ ಗೌರವ ಡಾಕ್ಟರೇಟ್ ಅವಾರ್ಡ್ ಪುರಸ್ಕೃತೆ ಡಾ| ಸಾವಿತ್ರಿ ರೈ ಕೆ ರವರಿಗೆ ಸನ್ಮಾನ

ಬೆಳ್ತಂಗಡಿ: ಜು.2 ರಂದು ಬೆಳ್ತಂಗಡಿ ಡಾ. ಬಿ.ನಾರಾಯಣ ರಾವ್ ಸಭಾಭವನದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಹಾಲು ಉತ್ಪಾದಕರ ಕಾರ್ಯದರ್ಶಿಯವರ ಮಾಸಿಕ ತಿಂಗಳ ಸಭೆಯಲ್ಲಿ ಗೌರವ ಡಾಕ್ಟರೇಟ್ ಅವಾರ್ಡ್ ಪುರಸ್ಕೃತೆ ಡಾ| ಸಾವಿತ್ರಿ ರೈ ಕೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ. ಸಾವಿತ್ರಿ ರೈ ಕೆ ಇವರಿಗೆ ಅತ್ಯುತ್ತಮ ಸಹಕಾರಿ ಮಹಿಳಾ ಸಾಧಕಿ, ರಾಷ್ಟ್ರೀಯ ಕಲಾ ಸೇವಾ ರತ್ನ ಮತ್ತು ರಾಷ್ಟ್ರೀಯ ವೀರ ವನಿತೆ, ಸಹಕಾರಿ ಕ್ಷೇತ್ರ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿರುವ ಅಗಣಿತ ಸೇವೆಯನ್ನು ಗುರುತಿಸಿ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಷರ್ಚ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಅವಾರ್ಡ್ ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಯವರಾದ ರಾಜೇಶ್ ಕಾಮತ್ , ಸಂದೀಪ್ , ನೌಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಭಾರತಿ ಕೆ. ನೌಕರ ಸಂಘದ ಮಾಜಿ ಅಧ್ಯಕ್ಷ ಬಿ.ಎಂ. ಶರೀಫ್, ಜಿಲ್ಲಾ ನೌಕರ ಸಂಘದ ಕೋಶಾಧಿಕಾರಿ ಮೇಬಲ್ ಕ್ರಾಸ್ತ, ಸಂಘದ ಪದಾಧಿಕಾರಿಯವರು, ಕಾರ್ಯದರ್ಶಿಗಳು ಭಾಗವಹಿಸಿದರು.

Related posts

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya

ನಡ: ಜಮಲಾಬಾದ್ ಇದ್ಗ ಮೈದಾನ ನಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಸತತವಾಗಿ 9ನೇ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಪ್ರಶಸ್ತಿಗೆ ಆಯ್ಕೆ

Suddi Udaya

ಬೆಳ್ತಂಗಡಿ ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘದ 28ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್‌.ಇ ಶಾಲೆಗೆ ಶೇ.100 ಫಲಿತಾಂಶ

Suddi Udaya

ಹತ್ಯಡ್ಕ: ನಿವೃತ್ತ ಎ.ಎಸ್.ಐ ಕೆ.ಎಸ್. ಬಾಬು ನಿಧನ

Suddi Udaya
error: Content is protected !!