23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹದಗೆಟ್ಟಿರುವ ಸುಲ್ಕೇರಿಯ ದೇರಂಡೋಡಿ ಮತ್ತು ದೇವರಗುಡ್ಡೆ ರಸ್ತೆ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

ಸುಲ್ಕೇರಿ: 1982 ರಿಂದ ಇಂದಿನವರೆಗೂ ನಾವರದ ದೇರಂಡೋಡಿ, ರಾಜಪಾದೆ ಮತ್ತು ದೇವರಗುಡ್ಡೆಯ ರಸ್ತೆಯು ಯಾವುದೇ ಅಭಿವೃದ್ಧಿ ಕಾಣದೆ ಅದೇ ದುಸ್ಥಿತಿಯಲ್ಲಿದೆ. ಮಳೆ ಬಂದರೆ ರಸ್ತೆ ಸಂಪೂರ್ಣ ಕೆಸರುಮಯವಾಗಿ ವಾಹನ ಸಂಚಾರಕ್ಕೂ, ಶಾಲಾ ಮಕ್ಕಳಿಗೂ, ಹಿರಿಯ ನಾಗರಿಕರಿಗೂ ತೀವ್ರ ತೊಂದರೆಯಾಗುತ್ತದೆ.

ಕಳೆದ ವಿಧಾನಸಭಾ ಚುನಾವಣೆಯ ವೇಳೆ ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸಲು ರೂ.30 ಲಕ್ಷ ಅನುದಾನ ಘೋಷಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಇಂದಿಗೂ ಕಾಮಗಾರಿ ಆರಂಭವಾಗಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಗಮನಹರಿಸಿ. ಸುಲ್ಕೇರಿಮೊಗ್ರು ಗ್ರಾಮ ಮತ್ತು ನಾವರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾದ ಕಲ್ಪಿಲದಿಂದ – ದೇವರಗುಡ್ಡೆಯವರೆಗಿನ ರಸ್ತೆಯನ್ನು ಶೀಘ್ರದಲ್ಲೇ ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸಿ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related posts

ವಾಣಿ ವಿದ್ಯಾ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳಾಲು ತಾರಗಂಡಿ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya

ವೇಣೂರು: ವಿ.ಕೆ. ಟ್ರೇಡರ್‍ಸ್ ನೂತನ ಕಾಡುತ್ಪತ್ತಿ ವ್ಯಾಪಾರ ಮಳಿಗೆ ಉದ್ಘಾಟನೆ

Suddi Udaya

ಹಿರಿಯ ಛಾಯಾಗ್ರಾಹಕ ಶಾಂತಲಾ ಸ್ಟುಡಿಯೋ ಮಾಲಕ ಶಶಿಧರ್ ರಾವ್ ನಿಧನ

Suddi Udaya

ಧರ್ಮಸ್ಥಳ  ಶ್ರೀ ಮಂ.ಸ್ವಾ. ಅ.ಹಿ. ಪ್ರಾ. ಶಾಲೆಯಲ್ಲಿ ‘ಆಟಿಡೊಂಜಿ ದಿನ ‘

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ವತಿಯಿಂದ ಮಕರ ಸಂಕ್ರಾಂತಿ ಆಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!