23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ: ಅಭ್ಯಾಸ್ ಪಿ.ಯು ಕಾಲೇಜಿನಲ್ಲಿ “POCSO ಕಾಯ್ದೆ ಜಾಗೃತಿ” ಕಾರ್ಯಕ್ರಮ

ಉಜಿರೆ: ಅಭ್ಯಾಸ್ ಪಿ.ಯು ಕಾಲೇಜಿನ ಸಭಾಂಗಣದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ಕಾಯ್ದೆ – POCSO Act, 2012 ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭ್ಯಾಸ್ ಪಿ.ಯು ಕಾಲೇಜಿನ ಅಧ್ಯಕ್ಷ ಕಾರ್ತಿಕೇಯ ಎಂ.ಎಸ್ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮತಿ. ಶ್ರದ್ಧಾ ಶೆಟ್ಟಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಮಂಗಳೂರಿನ ತತ್ವಸಿದ್ಧ ಸಂಸ್ಥೆಯ ಸ್ಥಾಪಕಿ ಹಾಗೂ ಹಿರಿಯ ವಕೀಲರಾದ ಶ್ರೀಮತಿ.ಶ್ರದ್ಧಾ ಶೆಟ್ಟಿ ಅವರು, POCSO ಕಾಯ್ದೆಯ ಮಹತ್ವವನ್ನು ವಿವರಿಸಿದರು. “18 ವರ್ಷದೊಳಗಿನ ಪ್ರತಿಯೊಬ್ಬ ಮಗು POCSO ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಮಗುವಿನ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ, ಕಿರುಕುಳ ಅಥವಾ ಅಶ್ಲೀಲ ಚಿತ್ರಣವು ಗಂಭೀರ ಅಪರಾಧ. ಈ ಕಾಯ್ದೆಯಡಿ ಕಠಿಣ ಶಿಕ್ಷೆಗಳಿವೆ. ‘Good Touch, Bad Touch’ ಬಗ್ಗೆ ಅರಿವು ಮೂಡಿಸಿಕೊಂಡು, ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಇರಬೇಕು” ಎಂದು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷ ಕಾರ್ತಿಕೇಯ ಎಂ.ಎಸ್ ಅವರು ಮಾತನಾಡಿ, “ಮಕ್ಕಳ ಸುರಕ್ಷತೆ ಎಂಬುದು ಶಾಲೆ, ಮನೆ ಮತ್ತು ಸಮಾಜದ ಜಂಟಿ ಜವಾಬ್ದಾರಿ. ನಿಮ್ಮ ದೇಹ, ನಿಮ್ಮ ಮಿತಿ ಬಗ್ಗೆ ಅರಿವು ಇರಬೇಕು. ಯಾವುದೇ ರೀತಿಯ ಅನುಮಾನ ಅಥವಾ ಭಯವಿದ್ದರೆ ಶಿಕ್ಷಕರು, ಪೋಷಕರು ಅಥವಾ ಪೊಲೀಸರ ಬಳಿ ನಿರ್ಭಯವಾಗಿ ಹೇಳಬೇಕು. ಮೌನವಾಗಿರುವುದೇ ದೊಡ್ಡ ಅಪಾಯ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಭ್ಯಾಸ್ ಸಂಸ್ಥೆಯ ಕಾರ್ಯದರ್ಶಿ ಶಿಲ್ಪಾ ಆರ್ ಮತ್ತು ಆಡಳಿತ ಅಧಿಕಾರಿ ಪ್ರಮೋದ್ ಗೌಡ ಹಾಗೂ ಪ್ರಾಂಶುಪಾಲರಾದ ದೀಪಕ್ ಕೆ. ಎಸ್ , ಪಿ. ಆರ್. ಓ ರಾದ ಧನಂಜಯ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಸಹಾಯಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಸುಧೀರ್ ನಿರೂಪಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಜೋಸೆಫಿನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಸ್ತಿ ಶ್ರೀ ಹೆಬ್ಬಾರ್ ಪ್ರಾರ್ಥನೆಗೈದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಚೆನ್ನಬಸವ ವಂದನಾರ್ಪಣೆ ಮಾಡಿದರು.

Related posts

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸುಜನ್ ಸಿ. ಭಂಡಾರಿ ರವರಿಗೆ ಅಳದಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಸನ್ಮಾನ

Suddi Udaya

ಚಾರ್ಮಾಡಿ: ರಸ್ತೆ ಬದಿ ಅರಣ್ಯಕ್ಕೆ ಮಗುಚಿ ಬಿದ್ದ ಐಸ್ ಕ್ರೀಂ ಸಾಗಾಟದ ವಾಹನ

Suddi Udaya

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಶ್ರೀ ಕ್ಷೇತ್ರ ಬಂಗಾಡಿ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ’ ವಾರ್ಷಿಕ ಪರ್ವ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಸಕಾಲಿಕ ಚಿಕಿತ್ಸೆ: ಮಹಿಳೆಯ ಜೀವ ರಕ್ಷಿಸಿದ ಕಕ್ಕಿಂಜೆಯ ಕೆಎಂಸಿ ತುರ್ತು ಚಿಕಿತ್ಸಾ ಘಟಕ

Suddi Udaya

ಉಜಿರೆ: ಕೋಡಿಬೈಲು ನಿವಾಸಿ ಪ್ರಭಾಕರ ಪಡುವೆಟ್ನಾಯ ನಿಧನ 

Suddi Udaya
error: Content is protected !!