23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಕುಂಭಶ್ರೀ ಆಂ.ಮಾ. ಶಾಲೆಗೆ ಪ್ರಮೋದ್ ಶೆಟ್ಟಿ ರವರಿಂದ ಫ್ಯಾನ್ ಕೊಡುಗೆ

ವೇಣೂರು : ಪ್ರಮೋದ್ ಶೆಟ್ಟಿ ಸಿರಿಮನೆ ಟ್ರೇಡರ್ಸ್ ಮಾಲಕರು ಅವರ ಪುತ್ರಿ ಸೃಷ್ಟಿ ಅವರು ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯ ಮಾಂಟೇಸರಿ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತಮ್ಮ ಶಾಲೆಯ ಮೇಲಿನ ಅಭಿಮಾನ, ಪ್ರೀತಿ ಹಾಗೂ ಸಾಮಾಜಿಕ ಕಳಕಳಿಯ ಸಂಕೇತವಾಗಿ ಶಾಲೆಯ ಉಪಯೋಗಕ್ಕಾಗಿ ಎರಡು ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ.

ಅವರ ಈ ಉದಾರ, ಶ್ಲಾಘನೀಯ ಕೊಡುಗೆಯನ್ನು ಕುಂಭಶ್ರೀ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದೆ. ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕ ಗಿರೀಶ್ ಕೆ. ಎಚ್., ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶುಭ ನಿತೇಶ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ಎಲ್. ಎನ್., ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ಭವಾನಿ ದಿವ್ಯ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ಸೌಮ್ಯ ಅವರು ಶ್ರೀ ಪ್ರಮೋದ್ ಶೆಟ್ಟಿ ಹಾಗೂ ಕುಮಾರಿ ಸೃಷ್ಟಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಅವರ ಉದಾರ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಇಂತಹ ಸಮಾಜಮುಖಿ ಸಹಕಾರ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿನ ಕಾಳಜಿಯು ಇತರರಿಗೂ ಪ್ರೇರಣೆಯಾಗಲಿ ಎಂದು ಸಂಸ್ಥೆಯ ವತಿಯಿಂದ ಶುಭ ಹಾರೈಸಲಾಯಿತು.

Related posts

ಬೆಳಾಲು ಪ್ರೌಢಶಾಲೆಯಲ್ಲಿ ಗಾಯನ ತರಗತಿ ಆರಂಭ

Suddi Udaya

ಲಾಯಿಲ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳಾಲು ಗ್ರಾ. ಪಂ. ಅಧ್ಯಕ್ಷರಾಗಿ ವಿದ್ಯಾಶ್ರೀನಿವಾಸ ಹಾಗೂ ಉಪಾಧ್ಯಕ್ಷರಾಗಿ ಗೀತಾ ಅವಿರೋಧ ಆಯ್ಕೆ

Suddi Udaya

ಬಾಂಜಾರು ಮಲೆ ಶ್ರೀ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ಸಾರ್ವಜನಿಕ ಸಮಾಲೋಚನಾ ಸಭೆ

Suddi Udaya

ಇಚ್ಚುರಲ್ಲಿ ಶ್ರೀ ಮಹಾಭಾರತ ಸರಣಿ ತಾಳ ಮದ್ದಳೆಯ ಮೂರನೇ ಹಂತದ ಕಾರ್ಯಕ್ರಮ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

Suddi Udaya
error: Content is protected !!