September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ವೇಣೂರು : ಅಯೋಧ್ಯಾ ಆಂದೋಲನದಲ್ಲಿ ಭಾಗವಹಿಸಿದ ಕರಸೇವಕರಿಗೆ ಗೌರವಾರ್ಪಣೆ

ಬೆಳ್ತಂಗಡಿ: ಭಾರತ ಎಂದರೆ ರಾಮ, ರಾಮ ಎಂದರೆ ಅಪೂರ್ವ ಶಕ್ತಿ. ಜ. 22 ರಂದು ರಾಮನ ಜಪದೊಂದಿಗೆ ಸಂಭ್ರಮದಿಂದ ಪ್ರತಿಷ್ಠಾ ದಿನವನ್ನು ಆಚರಣೆ ಮಾಡೋಣ ಎಂದು ಉಡುಪಿ-ಶಂಕರಮಠ ಏಕ ಜಾತಿಧರ್ಮ ದ್ವಾರಕ ಮಾಯಿ ಮಠದ ಶ್ರೀ ಸಾಯಿ ಈಶ್ವರ ಗುರೂಜಿ ನುಡಿದರು.


ಜ.14 ರಂದು ಸಂಜೆ ವೇಣೂರು ಶ್ರೀರಾಮ ಭಜನಾ ಮಂದಿರದಲ್ಲಿ ಅಯೋಧ್ಯಾ ಆಂದೋಲನದಲ್ಲಿ ಭಾಗವಹಿಸಿದ ಕರಸೇವಕರನ್ನು ಗೌರವಿಸಿ ಅವರು ಆಶೀರ್ವದಿಸಿದರು.


ರಾಮಜನ್ಮ ಭೂಮಿಗಾಗಿ ಸುಮಾರು ಮೂರು ಲಕ್ಷ ಮಂದಿ ಪ್ರಾಣತೆತ್ತಿದ್ದಾರೆ. ಹನುಮಂತನ ಶಕ್ತಿ ಕರಸೇವಕರಲ್ಲಿ ಸೇರಿದ ಪರಿಣಾಮವಾಗಿ ಇಂದು ಅಯೋಧ್ಯೆಯಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗಿದೆ. ರಾಮನ ಜಪ ಸಾರ್ವತ್ರಿಕವಾಗಲಿ ನಿತ್ಯ ನಿರಂತರವಾಗಿರಲಿ ಎಂದರು.


ಬಿಜೆಪಿ ರಾಜ್ಯ ಕಾರ್ಯದರ್ಶಿ ಬ್ರಿಜೇಶ್‌ ಚೌಟ ಕರಸೇವಕರನ್ನು ಅಭಿನಂದಿಸಿ, ಅಂದಿನ ಪ್ರತಿಕೂಲ ಸನ್ನಿವೇಶದಲ್ಲಿ ಕರಸೇವಕರು ನಿರ್ವಹಿಸಿದ ಪಾತ್ರ ಆದರ್ಶಪ್ರಾಯವಾದದ್ದು. ಸುಮಾರು ೫೦೦ ವರ್ಷಗಳ ಹೋರಾಟವು ಜ. ೨೨ ರಂದು ಅಂತ್ಯ ಕಾಣಲಿದೆ. ವಿಶ್ವವೇ ಕುಟುಂಬ ಎನ್ನುವ ತತ್ವ ನಮ್ಮದು. ಹಿಂದೂ ಸಮಾಜವನ್ನು ಜಾಗೃತ ಮಾಡಿಸುವ ಕೆಲಸ ನಿರಂತರವಾಗಿ ಮಾಡಬೇಕಾಗಿದೆ. ಹಿಂದು ಶಕ್ತಿಯಿಂದ ಹಲವರ ಷಡ್ಯಂತ್ರಗಳಿಗೆ ಕುತ್ತು ಬರಲಿದೆ. ಹೀಗಾಗಿ ಹಿಂದುಗಳು ಎಚ್ಚರದಿಂದ ಇರಬೇಕಾಗಿದೆ ಎಂದರು.
ವೇದಿಕೆಯಲ್ಲಿ ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ನವೀನ್‌ ನೆರಿಯ, ರಾ.ಸ್ವ.ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರಕಾಶ್‌ ಪುರೋಹಿತ, ಉದ್ಯಮಿ ಭಾಸ್ಕರ ಪೈ ಉಪಸ್ಥಿತರಿದ್ದರು.
ಕರಸೇವಕರಾದ ಮಂಜಪ್ಪ ದೇವಾಡಿಗ, ಗಣೇಶ್‌ ಹೆಗ್ಡೆ ನಾರಾವಿ, ಮೋಹನ ಅಂಡಿಂಜೆ, ಸುರೇಶ ಭಟ್‌ ಗುಂಡೂರಿ, ಪ್ರಭಾಕರ ಪ್ರಭು, ಶಶಿಧರ ಅಳದಂಗಡಿ, ಶೇಖರ ಶೆಟ್ಟಿ ಗುಂಡೂರಿ, ಎಂ.ಪಿ. ಶೇಖರ ಶಿರ್ಲಾಲು, ಪ್ರಶಾಂತ ಬರಯ, ಕೆ.ವೈ.ಈಶ್ವರ್‌, ಶ್ರೀನಿವಾಸ ಆಚಾರ್‌, ರಮೇಶ್‌ ಪೂಜಾರಿ, ವಸಂತ ಅಳದಂಗಡಿ, ಮಾಧವ ಕಾರಂತ ವೇಣೂರು ಅವರನ್ನು ಸಮ್ಮಾನಿಸಲಾಯಿತು.
ಉಮೇಶ್‌ ನಡ್ತಿಕಲ್ಲು ಅಯೋಧ್ಯಾ ಆಂದೋಲನದ ವಿವಿಧ ಮಜಲುಗಳನ್ನು ಸಾದ್ಯಂತ ವಿವರಿಸಿದರು. ಪ್ರಭಾಕರ ಪ್ರಭು ಸ್ವಾಗತಿಸಿದರು. ಸತೀಶ್‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Related posts

ವಾಣಿ ಪ.ಪೂ. ಕಾಲೇಜಿನ ಎನ್‌.ಎಸ್.ಎಸ್‌. ಘಟಕದಿಂದ ಕೋಟಿ ವೃಕ್ಷ ಅಭಿಯಾನ

Suddi Udaya

ಬೆಳ್ತಂಗಡಿ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಯಾಂತ್ರೀಕೃತ ಭತ್ತ ಬೇಸಾಯದ `ಯಂತ್ರಶ್ರೀ’ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ

Suddi Udaya

ಮುಂಡಾಜೆ ಕೀರ್ತನಾ ಕಲಾ ತಂಡದ ವತಿಯಿಂದ ನಿವೃತ್ತ ಚಂದ್ರಕಾಂತ ಪ್ರಭು ರಿಗೆ ಅಭಿನಂದನೆ ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಯಾಂತ್ರಿಕೃತ ಭತ್ತ ಕೃಷಿಗೆ ಚಾಲನೆ

Suddi Udaya

ಕಡಿರುದ್ಯಾವರ: ಗಾಳಿ ಮಳೆಯಿಂದ ದನದ ಹಟ್ಟಿಗೆ ಮರ ಬಿದ್ದು ಸಂಪೂರ್ಣ ಹಾನಿ

Suddi Udaya

ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ್ಲ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಗೆ ಭೇಟಿ: ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದ ಸಂಸ್ಥೆಯ ಮಾಲಕರಾದ ಕೆ.ಮೋಹನ್ ಕುಮಾರ್

Suddi Udaya
error: Content is protected !!