23.7 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸಾಧಕರಿಗೆ ಅಭಿನಂದನೆ

ಉಜಿರೆ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವು ಜು.9ರಂದು ಉಜಿರೆ ಓಶಿಯನ್ ಪರ್ಲ್ ನಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ರವರು ವಹಿಸಿದ್ದರು. ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಗೌರವಾಧ್ಯಕ್ಷ ಶರತ್‌ ಕೃಷ್ಣ ಪಡುವೆಟ್ನಾಯ ರವರು ಗೌರವ ಉಪಸ್ಥಿತಿಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಿರಿ ಸಂಸ್ಥೆಯ ಎಂಡಿ ಕೆ.ಎನ್. ಜನಾರ್ದನ್, ಉಜಿರೆ ಶ್ರೀ ಧ.ಮಂ. ಆಸ್ಪತ್ರೆ ಎಂ.ಡಿ. ಎಂ. ಜನಾರ್ದನ್, ಉದ್ಯಮಿ ಜಿ. ರಾಜೇಶ್ ಪೈ ಸಂಧ್ಯಾ ಟ್ರೇಡರ್ಸ್ ಉಜಿರೆ ಉಪಸ್ಥಿತರಿದ್ದರು.

ವಿಧಾನ ಪರಿಷತ್ ನಿಕಟಪೂರ್ವ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ನಿಕಟಪೂರ್ವ ಸಿ.ಇ.ಓ. ರಾಜು ಶೆಟ್ಟಿ, ಉಜಿರೆ ಮಂಜುಶ್ರೀ ಪ್ರಿಂಟರ್ಸ್ ನಿಕಟಪೂರ್ವ ವ್ಯವಸ್ಥಾಪಕ ಶೇಖರ್ ಟಿ, ರೋಟರಿ ಕ್ಲಬ್ ಬೆಳ್ತಂಗಡಿ ಇದರ ನೂತನ ಅಧ್ಯಕ್ಷ ಶ್ರೀಧರ್ ಕೆವಿ, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಪ್ರಭಾರ ಸಿ.ಇ.ಓ. ಹರಿಪ್ರಸಾದ್ ಅವರನ್ನು ವರ್ತಕರ ಸಂಘದ ವತಿಯಿಂದ ಗೌರವಿಸಲಾಯಿತು.

ವಿಶೇಷವಾಗಿ 2025-26ನೇ ಸಾಲಿನ ಸರಕಾರಿ ಕನ್ನಡ ಪ್ರೌಢ ಶಾಲೆಗಳ ಪೈಕಿ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 100% ಫಲಿತಾಂಶ ಗಳಿಸಿದ ಶಾಲಾ ಮುಖ್ಯೋಪಾಧ್ಯಾಯರಿಗೆ ಮತ್ತು ಅತೀ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವರ್ತಕರ ಸಂಘದ ರವಿಕುಮಾರ್ ಬರಮೇಲು, ಪ್ರವೀಣ್ ಫರ್ನಾಂಡೀಸ್ ಹಳ್ಳಿಮನೆ, ಹುಕರಾಮ್ ಪಟೇಲ್, ಅರವಿಂದ್ ಉಜಿರೆ ,ಜಯಂತ್ ನಮನ, ಅರ್ಪಿತ್ ಭಂಡಾರಿ, ಹರಿಪ್ರಸಾದ್, ಮೋಹನ್ ಚೌಧರಿ, ಪ್ರಶಾಂತ್ ಅಮೃತ್, ಅರುಣ್ ದಿಶಾ,ಅಕ್ಷಯ್ ಕುಮಾರ್, ಅನಿಲ್ ಅಕ್ಷರ ಹಾಗೂ ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯಕಾರಿ ಸಮಿತಿ ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

ವಿನ್ಯಾಸ್ ಭಂಡಾರಿ ನಿರೂಪಿಸಿದರು. ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಅಬೂಬಕ್ಕರ್ ಸ್ವಾಗತಿಸಿದರು.ಕೋಶಾಧಿಕಾರಿ ವಿಶ್ವ ಭಂಡಾರಿ ಮತ್ತು ಪದಾಧಿಕಾರಿಗಳು ಸಹಕರಿಸಿದರು.

ಸುನಿಲ್ ದೇವಾಡಿಗ, ಭವ್ಯ, ಉಷಾ ಶೆಟ್ಟಿ, ಝೀನತ್ ಸನ್ಮಾನ ಪತ್ರ ವಾಚಿಸಿದರು.

Related posts

6300 ಕಿ.ಮೀ. ಕಾರು ಚಾಲನೆ ಮಾಡಿ ಚಾರ್‌ಧಾಮ ಯಾತ್ರೆ ಪೂರ್ಣಗೊಳಿಸಿದ ಬೆಳ್ತಂಗಡಿಯ ರತೀಶ್–ಪ್ರೀತಿ ರಾವ್ ಉದ್ಯಮಿ ದಂಪತಿ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಕಸದಿಂದ ರಸ ಸ್ಪರ್ಧೆ

Suddi Udaya

ಅಳದಂಗಡಿಯಲ್ಲಿ ಮಕ್ಕಳಿಂದ ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನ

Suddi Udaya

ಹೊಸಂಗಡಿ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ

Suddi Udaya

ಬೆಳ್ತಂಗಡಿ ದಲಿತ ಮುಖಂಡರ ನಿಯೋಗದಿಂದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

Suddi Udaya

ಅರಸಿನಮಕ್ಕಿಯಲ್ಲಿ ಮಕ್ಕಳ ಸಂಸ್ಕಾರ ಶಿಬಿರ ಸಂಪನ್ನ

Suddi Udaya
error: Content is protected !!