26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ನೂತನ ರೂಪದಲ್ಲಿ ಶುಭಾರಂಭಗೊಂಡ ‘ಶ್ರೀರಾಮ್ ತರಕಾರಿ & ಫ್ರೂಟ್ಸ್’

ಬೆಳ್ತಂಗಡಿ: ಉಜಿರೆ ಮಾರಿಗುಡಿ ದ್ವಾರದ ಮುಂಭಾಗದಲ್ಲಿರುವ ‘ಶ್ರೀರಾಮ್ ತರಕಾರಿ & ಫ್ರೂಟ್ಸ್’ ಮಳಿಗೆಯು ಸಂಪೂರ್ಣ ನವೀಕೃತಗೊಂಡು ಹೊಸ ರೂಪದಲ್ಲಿ ಜು.15ರಂದು ಶುಭಾರಂಭಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ ಕೆ. ಮೋಹನ್ ಕುಮಾರ್ , ಉಜಿರೆ ಮಾಧವ ಪಡ್ವೆಟ್ನಾಯ, ಉದಯ ಚಿಕನ್ ಮಾಲೀಕ ರಾಮಚಂದ್ರ ಶೆಟ್ಟಿ, ಶ್ರೀಪತಿ ಪಡ್ವೆಟ್ನಾಯ, ಶ್ರೀಶ ಪಡ್ವೆಟ್ನಾಯ ಹಾಗೂ ರಾಜಾರಾಮ್ ದಂಪತಿ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭಕೋರಿದರು.

ಕಾರ್ಯಕ್ತಮದಲ್ಕಿ ಜಯಪ್ರಕಾಶ್ ಶೆಟ್ಟಿ, ಗಣೇಶ್ ಕಕ್ಕಿಂಜೆ, ಪ್ರಶಾಂತ್ ಜೈನ್ ಅಮೃತ್, ಪ್ರಭಾಕರ ಜೈನ್ ಮಹಾವೀರ, ಹುಕುಂರಾಮ್ ಪಟೇಲ್, ಪುರುಷೋತ್ತಮ ಆಚಾರ್ಯ ಸೋಮಂತಡ್ಕ, ಜಯಂತ್ ನಮನ, ಆನಂದ್ ಪೂಜಾರಿ ಸೇರಿದಂತೆ ಉಜಿರೆಯ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.

ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ಸ್ವಾಗತಿಸಿದರು. ಬೆಳ್ತಂಗಡಿಯ ಪ್ರತೀಕ್ಷಾ ಫ್ಯಾನ್ಸಿ ಸಂಸ್ಥೆಯ ಮಾಲೀಕ ಚಿದಾನಂದ ಇಡ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಮ್ ತರಕಾರಿ & ಫ್ರೂಟ್ಸ್ ಮಾಲೀಕರಾದ ವಿಜಯ್ ಕುಮಾರ್ – ಸುಮಾ ಕಕುಂದರ್, ಪುತ್ರರಾದ ಹಿಮಾನ್ಶ್ ಮತ್ತು ದ್ರುತವ್ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

Related posts

ಎಸ್.ಡಿ.ಎಂ ಐಟಿ ಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಮಿನಿ ಪ್ರಾಜೆಕ್ಟ್ ಪ್ರದರ್ಶನ

Suddi Udaya

ಪದ್ಮುಂಜ : ಸಜನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಶುಭಾರಂಭ

Suddi Udaya

ದೆಹಲಿಯ ಗಣರಾಜ್ಯೋತ್ಸವ: ಉಜಿರೆ ಎಸ್.ಡಿ.ಎಂ ಎನ್.ಸಿ.ಸಿಯ 3 ಕೆಡೆಟ್‌ಗಳ ಆಯ್ಕೆ

Suddi Udaya

ಬೆಳ್ತಂಗಡಿ ಆಶಾ ಯಂಗ್ ಸ್ಟಾರ್ ಕ್ಲಬ್ ನ ಮಹಾಸಭೆ: ನೂತನ ಅಧ್ಯಕ್ಷರಾಗಿ ಪಾಲಾಕ್ಷ ಸುವರ್ಣ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕಿನ ಮುಖ್ಯ ಪುಸ್ತಕ ಬರಹಗಾರರಿಗೆ ಪುಸ್ತಕ ನಿರ್ವಹಣೆ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ

Suddi Udaya

ಕಳಿಯ ಗೋವಿಂದೂರು ಶಾಲಾ ಪಕ್ಕದ ಗುಡ್ಡೆಗೆ ಬೆಂಕಿ

Suddi Udaya
error: Content is protected !!