32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ನವೀಕೃತಗೊಂಡ ಆರೋಗ್ಯ ವಿಮಾ ಯೋಜನೆಯ ವಿಭಾಗ ಲೋಕಾರ್ಪಣೆ     

ಉಜಿರೆ : NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ  ವಿನೂತನ ಮಾದರಿಯ ನವೀಕೃತಗೊಂಡ  ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿಂದ ವಿಭಾಗವನ್ನು ಜನಾರ್ಧನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ   ಶರತ್ ಕೃಷ್ಣ ಪಡವೆಟ್ನಾಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು .

ಈ ಸಂದರ್ಭದಲ್ಲಿ  ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಆರೋಗ್ಯ ವಿಮೆಯನ್ನು ಪ್ರತಿಯೊಬ್ಬರು ಹೊಂದಿರಬೇಕು . ಆರೋಗ್ಯ ಹಾಳಾಗಲಿ ಎಂದು ವಿಮೆ ಮಾಡಿಸುವುದಲ್ಲ, ಅಯಾಚಿತವಾಗಿ  ಆರೋಗ್ಯ ಹದಗೆಟ್ಟಾಗ ಊರುಗೋಲಾಗಿ ಆರೋಗ್ಯ ವಿಮೆ ನಮ್ಮ ಸಹಾಯಕ್ಕೆ ಅನೂಕೂಲವಾಗುತ್ತದೆ, ಉಜಿರೆಯಂತ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಆರೋಗ್ಯ ಸೌಲಭ್ಯ ನೀಡುತ್ತಿರುವ  ಬೆನಕ ಹೆಲ್ತ್ ಸೆಂಟರ್ ನ ಕಾರ್ಯವೈಖರಿ ಶ್ಲಾಘನೀಯ . ಅತ್ಯಂತ ಸುಂದರವಾಗಿ  ಮತ್ತು ನವೀನ ಮಾದರಿಯಲ್ಲಿ ವಿಮಾ ವಿಭಾಗ ಸ್ಥಳಾಂತರಗೊಂಡಿದ್ದು , ಡಾ.ಗೋಪಾಲಕೃಷ್ಣ ಅವರ ಸೃಜನಶೀಲತೆ ಮತ್ತು ಉತ್ಸುಕತೆ ನಿಜಕ್ಕೂ ಪ್ರಶಂಶನೀಯವೆಂದು ಮೆಚ್ಚುಗೆಯ ನುಡಿಗಳನ್ನಾಡಿ ಶುಭ ಹಾರೈಸಿದರು .

ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತಿ ದಂಪತಿಗಳು , ಶರತ್ ಕೃಷ್ಣ  ಪಡವೆಟ್ನಾಯರನ್ನು ಶಾಲು ಹೊದಿಸಿ, ಹೂಗುಚ್ಛ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಸೀತಾರಾಮ್  ಭಟ್ ಕೆ , ಡಾ.ಭಾರತಿ ಜಿ ಕೆ , ಡಾ.ಆದಿತ್ಯ ರಾವ್ , ಡಾ.ಅಂಕಿತ ಜಿ ಭಟ್ , ಡಾ.ರೋಹಿತ್ ಜಿ ಭಟ್ , ಡಾ.ನವ್ಯ ಭಟ್, ಡಾ.ಶ್ರೇಯಸ್ ಮತ್ತು ಬೆನಕ ಆಸ್ಪತ್ರೆಯ  ಸಿಬ್ಬಂದಿಗಳು ಉಪಸ್ಥಿತರಿದ್ದರು.      

Related posts

ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿಗೆ ಶೇ.98.17 ಫಲಿತಾಂಶ

Suddi Udaya

ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಧರ್ಮಸ್ಥಳದ ಜಿ. ಅನನ್ಯ ಪ್ರಭು ರವರಿಗೆ ದ್ವಿತೀಯ ರ‍್ಯಾಂಕ್ 

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅನ್ನಛತ್ರದಲ್ಲಿ ಹಾಲು ಉಕ್ಕಿಸುವ ಕಾರ್ಯ

Suddi Udaya

ಭಾರೀ ಮಳೆ; ಸಿಯೋನ್ ಆಶ್ರಮದ ತಡೆಗೋಡೆ ಕುಸಿತ

Suddi Udaya

ಶಶಾಂಕ್ ಬೊಲ್ಮ ಅವರಿಗೆ ಪಿಹೆಚ್‌‌ಡಿ ಪದವಿ

Suddi Udaya

ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಹಾಗೂ ಚಾರ್ಮಾಡಿ ಹಸನಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ

Suddi Udaya
error: Content is protected !!