September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಂಟ್ವಾಳ : ಯುವತಿಯ ಹತ್ಯೆ ಪ್ರಕರಣದಲ್ಲಿ ಭಜರಂಗದಳದ ವಿರುದ್ಧ ಸುಳ್ಳು ಸುದ್ದಿ: ಭಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ದೂರು ದಾಖಲು

ಬೆಳ್ತಂಗಡಿ : ಬಿ.ಸಿರೋಡ್ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ ಅದಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಸೇರಿಸಿ “ಬಜರಂಗದಳ‌ದ ಮುಖಂಡ ಚೇತನ್” ಹಾಗೂ “ಬಜರಂಗದಳದ ಶಾಖೆಯಿಂದ ತರಬೇತಿ ಪಡೆದಿದ್ದ” ಎಂಬ ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೋಮು ಸೌಹಾರ್ದತೆ ಕದಡುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಬೆಳ್ತಂಗಡಿ ಪ್ರಖಂಡ ವತಿಯಿಂದ ದೂರು ದಾಖಲಿಸಲಾಗಿದೆ.

ಆರೋಪಿಯ ತಿರುಚಿದ ಭಾವಚಿತ್ರ ಹಾಗೂ ಪ್ರಚೋಧನಕಾರಿ ಸಂದೇಶಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಲಾಗಿದ್ದು ಈ ಸಂಬಂಧ ಕಾನೂನುಬಾಹಿರ ಕೃತ್ಯ ಎಸಗಿರುವ ರಶೀದ್ ಲಾಯಿಲ ಮತ್ತು ಅನ್ವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೆಳಾಲು ಶ್ರೀ ಧ. ಮ. ಅನುದಾನಿತ ಪ್ರೌಢಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ

Suddi Udaya

ಕೊಕ್ಕಡ: ತಲೆಗೆ ಮರಬಿದ್ದು ಮಹಿಳೆಯ ಧಾರುಣ ಸಾವು:

Suddi Udaya

ಓಡಿಲ್ನಾಳ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಥಮ ವರ್ಷದ ಶಾರದೋತ್ಸವ ವಿಸರ್ಜನಾ ಕಾರ್ಯಕ್ರಮ

Suddi Udaya

ಪಣಕಜೆ ಕೃಷ್ಣನಗರ ನಿವಾಸಿ ಅಪ್ಪಿ ಶೆಟ್ಟಿ ನಿಧನ

Suddi Udaya

ಕಲ್ಮಂಜ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆ: ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳಾದ ಜೈದೀಪ್ ಗೌಡ ಹಾಗೂ ರಕ್ಷಣ್ ಶೆಟ್ಟಿ ತೇರ್ಗಡೆ

Suddi Udaya
error: Content is protected !!