September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದಿಂದ ಆಟಿದ ಪೊಲಬು

ಪುಂಜಾಲಕಟ್ಟೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಪುಂಜಾಲಕಟ್ಟೆ ಘಟಕ ಇದರ ಆಶ್ರಯದಲ್ಲಿ ನಡೆದ ಆಟಿದ ಪೊಲಬು ಕಾರ್ಯಕ್ರಮ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಜು.19 ರಂದು ನಡೆಯಿತು.

ಕಾರ್ಯಕ್ರಮದ ಸಮಾರೋಪದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ| ಯೋಗೀಶ್ ಕೈರೋಡಿ ಅವರು ಆಟಿ ತಿಂಗಳ ವಿಶೇಷತೆ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ನಮ್ಮ ಹಿರಿಯರು ಹಸಿವು ಮತ್ತು ಆರೋಗ್ಯ ರಕ್ಷಣೆಗಾಗಿ ಗಿಡಮೂಲಿಕೆಗಳು ಪ್ರಕೃತಿದತ್ತವಾದ ಆಹಾರವನ್ನು ಬಳಸಿ ನೆಮ್ಮದಿಯಾಗಿದ್ದರು. ಆಟಿ ತಿಂಗಳ ಆಹಾರ ಕ್ರಮ ತನ್ನದೇ ವೈಶಿಷ್ಟ್ಯಗಳಿಂದ ಕೂಡಿದೆ. ಹಾಗಾಗಿ ಹೊಟ್ಟೆ ಹಾಗೂ ಮನಸ್ಸು ಸ್ವಚ್ಛವಾಗಿರುತ್ತಿತ್ತು. ಹಿರಿಯರು ಗೆಡ್ಡೆ ಗೆಣೆಸು, ಸಸ್ಯಗಳಲ್ಲಿ ಆಹಾರವನ್ನು ಕಂಡು ಹುಡುಕಿದ ಅಪಾಯದ ಹೋರಾಟದ ಬಗೆಯನ್ನು ನಾವು ನೆನಪಿಸಬೇಕು ಎಂದರು. ಬದಲಾವಣೆ ಅನಿವಾರ್ಯ, ಆದರೆ ನಾವು ಹಿಂದಿನ ಭೌತಿಕ ವಸ್ತುಗಳನ್ನು ಕಳಕೊಂಡಿರುವುದರ ಬಗ್ಗೆ ಚಿಂತಿಸದೆ ಪಡಕೊಂಡಿರುವ ಬಗ್ಗೆ ಸಂತೋಷ ಪಡಬೇಕು ಎಂದರು.

ಬಿ.ಸಿ.ರೋಡ್ ನ್ಯಾಯವಾದಿ ಶೈಲಜಾ ರಾಜೇಶ್ ಮಾತನಾಡಿ, ಆಟಿ ತಿಂಗಳ ತಿಂಡಿ ತಿನಸುಗಳಲ್ಲಿ ಔಷಧಿಯ ಗುಣಗಳಿರುವುದರಿಂದ ಹಿರಿಯರು ತೋರಿಸಿದ ಸಂಸ್ಕೃತಿಯನ್ನು ನಾವು ಮರೆಯಬಾರದು ಎಂದು ಹೇಳಿದರು.

ಘಟಕದ ಅಧ್ಯಕ್ಷ ಹರೀಂದ್ರ ಟಿ.ಪೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆಟಿ ತಿಂಗಳಿನ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪಿಲಾತಬೆಟ್ಟು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ., ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ್ ಪ್ರಭು ಮೂರ್ಜೆ, ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ಯದರ್ಶಿ ಧರ್ಣಪ್ಪ ಗೌಡ ಹಟ್ಟತ್ತೋಡಿ, ಯಕ್ಷಧ್ರವ ಪಟ್ಲ ಫೌಂಡೇಶನ್ ಟ್ರಸ್ಟಿ ಲಕ್ಷ್ಮಿ ಸಂಜೀವ ಶೆಟ್ಟಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಉಮಾ ಡಿ. ಗೌಡ, ಅಧ್ಯಕ್ಷೆ ಶಶಿಕಲಾ ಗೋಪಾಲ ಪೂಜಾರಿ, ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಸಲಹೆಗಾರ ದಿನೇಶ್ ಶೆಟ್ಟಿ ಕಾವಳಕಟ್ಟೆ, ಉಪಾಧ್ಯಕ್ಷ ದಿವಾಕರ ದಾಸ್, ಘಟಕದ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಉದಯ ಕುಮಾರ್ ಶೆಟ್ಟಿ ಮೇಲ್ಮನೆ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಸತೀಶ್ ಆಚಾರ್ಯ ಬೆರ್ಕಳ ವಂದಿಸಿದರು. ರೇಖಾ ಶೆಟ್ಟಿ ಬಹುಮಾನ ವಿಜೇತರ ವಿವರ ವಾಚಿಸಿದರು. ಕಲಾವಿದ ಎಚ್.ಕೆ.ನೈನಾಡು ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ ಕಾರ್ಯಕ್ರಮವನ್ನು ಯಕ್ಷಧ್ರವ ಪಟ್ಲ ಫೌಂಡೇಶನ್ ಟ್ರಸ್ಟಿ ಲಕ್ಷ್ಮಿ ಸಂಜೀವ ಶೆಟ್ಟಿ ಉದ್ಘಾಟಿಸಿದರು. ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಫೌಂಡೇಶನ್ ಟ್ರಸ್ಟಿ ವಸಂತ ಶೆಟ್ಟಿ ಕೇದಗೆ, ಗೌರವ ಸಲಹೆಗಾರ ಯಶೋಧರ ಶೆಟ್ಟಿ ದಂಡೆ, ಅಧ್ಯಕ್ಷ ಹರೀಂದ್ರ ಟಿ.ಪೈ, ಅಧ್ಯಕ್ಷೆ ಶಶಿಕಲಾ ಗೋಪಾಲ್ ಮತ್ತಿತರರಿದ್ದರು .

Related posts

ಲಾಯಿಲ: ರಸ್ತೆ ದಾಟುತ್ತಿರುವ ವೇಳೆ ಪಿಕಪ್ ಡಿಕ್ಕಿ: ಪಾರೆಂಕಿಯ ಬಾಲಕ ರಂಝಿನ್ ಸಾವು

Suddi Udaya

ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಧ್ವಜಸ್ತಂಭ ಸ್ಥಾಪನೆಗೆ ಸಿದ್ದಗೊಳಿಸಿದ ಕಲ್ಲಿನ ಕೆತ್ತನೆ ಕಾರ್ಯಕ್ಕೆ ಚಾಲನೆ

Suddi Udaya

ಮಹಿಳಾ ಕಾಂಗ್ರೆಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಝೀನತ್ ಉಜಿರೆ ನೇಮಕ

Suddi Udaya

ಅಳದಂಗಡಿ ಪ್ರಾ.ಕೃ.ಪ.ಸ. ಸಂಘದ ಸಿಬ್ಬಂದಿ ಪ್ರಿಯಾ ಡಿಸೋಜಾರಿಗೆ ಬಿಳ್ಕೋಡುಗೆ ಸಮಾರಂಭ

Suddi Udaya

ಮಡಂತ್ಯಾರು ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ಆಟಿಡೊಂಜಿ ಕೂಟ

Suddi Udaya

ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳ (ಐಎನ್‌ಎಸ್‌ಇಎಫ್) 2024-25″ – ಶ್ರೀ ಧ.ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯ ಅಧೀಶ್ ಬಿ.ಸಿ ಮತ್ತು ಆಲಾಪ್.ಎಂ ಗೆ ಚಿನ್ನದ ಪದಕ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.

Suddi Udaya
error: Content is protected !!