September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಮುಂಡಾಜೆಯಲ್ಲಿ ಕೃಷಿ ತರಬೇತಿ ಕಾರ್ಯಕ್ರಮ

ಮುಂಡಾಜೆ : ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ, ನೇತ್ರಾವತಿ ಮಹಿಳಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮುಂಡಾಜೆಯಲ್ಲಿ ನಡೆಸಲಾಯಿತು.

ಎಲ್ ಸಿ ಆರ್ ಪಿ ಶಾಲಿನಿ ಸ್ವಾಗತಿಸಿ, ಒಕ್ಕೂಟದ ಅಧ್ಯಕ್ಷೆ ಭವಾನಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ರಬ್ಬರ್ ಸೊಸೈಟಿ ಅಧ್ಯಕ್ಷರು ಎಪಿಎಂಸಿ ಮಾಜಿ ಸದಸ್ಯರು ಪ್ರಗತಿಪರ ಕೃಷಿಕರು ಆದ ಶ್ರೀಧರ್ ಜಿ ಬಿಢೆ ಮತ್ತು ನಾರಾಯಣ ಫಡ್ಕೆ ಸಿಎ ಬ್ಯಾಂಕಿನ ಮಾಜಿ ಸಿಇಓ ಹಾಗೂ ಪ್ರಗತಿಪರ ಕೃಷಿಕರು ಮತ್ತು ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀಧರ ಭಿಡೆಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಗಣೇಶ್ ಅಡಿಗ ಕೃಷಿ ಅಧಿಕಾರಿ ಬೆಳ್ತಂಗಡಿ ಇವರು ಬೆಳೆ ಸಮೀಕ್ಷೆ ಮಾಡುವ ವಿಧಾನ ಹಾಗೂ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಪ್ರಭಾಕರ ಮಯ್ಯ ಇವರು ಅಡಿಕೆಗೆ ಬರುವ ರೋಗಗಳು ಮತ್ತು ಅದರ ಪರಿಹಾರ ಬೋರ್ಡೋ ದ್ರಾವಣ ಮಾಡುವ ವೈಜ್ಞಾನಿಕ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮನಮುಟ್ಟುವಂತೆ ತಿಳಿಸಿದರು. ಜಿಲ್ಲಾ ತರಬೇತಿ ಕೇಂದ್ರದ ಎ.ಟಿ.ಎಮ್ ಕುಸುಮ ಹಾಜರಿದ್ದರು. ಕೃಷಿಸಖಿ ದಿವ್ಯಶ್ರೀ ಧನ್ಯವಾದವಿತ್ತರು.

Related posts

ಗೇರುಕಟ್ಟೆ: ಅಲ್ಟೋ ಕಾರು ಡಿಕ್ಕಿ – ಪಾದಚಾರಿಗೆ ಗಂಭೀರ ಗಾಯ

Suddi Udaya

ಉಜಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ 110ನೇ ಸಂಸ್ಥಾಪನಾ ದಿನಾಚರಣೆ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಲಾಯಿಲ ಗ್ರಾ.ಪಂ. ಎದುರು ಪ್ರತಿಭಟನೆ

Suddi Udaya

ವೇಣೂರು: ಕ್ಷೇತ್ರದಲ್ಲಿ ಸರ್ವಜ್ಞ ವಾಣಿ ವೆಬ್ ಸೈಟ್ ಅನಾವರಣ

Suddi Udaya

ಕಲ್ಲೇರಿ : ಪಕ್ಕದ ಮನೆಗೆ ಕುಸಿದು ಬಿದ್ದ ಕಾಂಪೌಂಡ್ ಗೋಡೆ, ಮನೆಗೆ ಅಪಾರ ಹಾನಿ

Suddi Udaya

ಕಳಿಯ ಸಹಕಾರಿ ಸಂಘದಿಂದ ಬೆಳೆ ವಿಮೆ, ಬೆಳೆ ಸಮೀಕ್ಷೆ, ಕೃಷಿ ಮಾಹಿತಿ

Suddi Udaya
error: Content is protected !!