September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆ. 1: ಧರ್ಮಸ್ಥಳದಲ್ಲಿ “ಜ್ಞಾನ ಚಂದನ” ಮತ್ತ”ಜ್ಞಾನ ನಂದನ” ಕೃತಿಗಳ ಬಿಡುಗಡೆ ಹಾಗೂ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ ಸಮಾರಂಭ

ಧರ್ಮಸ್ಥಳ : ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಪ್ರಕಟಿಸಲಾದ “ಜ್ಞಾನ ಚಂದನ” ಮತ್ತು “ಜ್ಞಾನ ನಂದನ” ಕೃತಿಗಳನ್ನು ಆ.1 ರಂದು ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಅಂಕಣ ಬರಹಗಾರರಾದ ದೀಪಾ ಹಿರೇಗುತ್ತಿ ಬಿಡುಗಡೆಗೊಳಿಸುವರು ಎಂದು ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಜಗನ್ನಾಥ್ ಹಾಗೂ ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ ಸಮಾರಂಭ ನಡೆಯಲಿದೆ.
ಚಲನಚಿತ್ರ ನಟ ಅಭಿಜಿತ್ ಶುಭಾಶಂಸನೆ ಮಾಡುವರು. ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ್ ಭಾಗವಹಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಶಾಂತಿವನ ಟ್ರಸ್ಟ್ ಟ್ರಸ್ಟಿಗಳಾದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಗೌರವ ಉಪಸ್ಥಿತರಿರುವರು.

ಉಜಿರೆಯ ಎಸ್.ಡಿ.ಎಂ. ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಗಾಯನ ಮತ್ತು ನೃತ್ಯ ಕಾರ್ಯಕ್ರಮ ಹಾಗೂ ಕುಂಚಕಲಾವಿದ ಪೆರ್ಮುದೆ ಮೋಹನಕುಮಾರ್ ಅವರಿಂದ ಚಿತ್ರಕಲಾ ಪ್ರದರ್ಶನವಿದೆ.

Related posts

ಆರಂಬೋಡಿ: ಧನ್ಯಶ್ರೀ ಕೆ-ಮನೋಜ್ ಶೆಟ್ಟಿ ಐತೇರಿರವರ ಪುತ್ರ ಜಸ್ಟೀಕ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಶಾಲೆಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ದೇಶಭಕ್ತಿ ಗೀತೆ ಸ್ಪರ್ಧೆ: ಉಜಿರೆ ಶ್ರೀ. ಧ. ಮಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ ವಕೀಲರ ಭವನದಲ್ಲಿ ವಕೀಲರ ದಿನ ಆಚರಣೆ

Suddi Udaya

ಪಣಕಜೆ ಕೃಷ್ಣನಗರ ನಿವಾಸಿ ಅಪ್ಪಿ ಶೆಟ್ಟಿ ನಿಧನ

Suddi Udaya

ನ.29: ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಹೆಚ್.ಬಿ ಲೀಲಾವತಿ ಸೇವಾ ನಿವೃತ್ತಿ

Suddi Udaya

ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸುವರ್ಣ ರಂಗ ಸಮ್ಮಾನ್ , ಸಾಧನಾ ಭೂಷಣ – 2024

Suddi Udaya
error: Content is protected !!