28.3 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಬಂಟರ ವಲಯ ಸಮಿತಿ ವತಿಯಿಂದ ಆಟಿಡೊಂಜಿ ದಿನ

ಬೆಳ್ತಂಗಡಿ: ಬಂಟರ ವಲಯ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಲಾಯಿಲ ಗ್ರಾಮದ ಕರ್ನೊಡಿ “ಜಯಭವಾನಿ” ಮನೆಯ ವಠಾರದಲ್ಲಿ ಜು. 26 ರಂದು ನಡೆಯಿತು.‌

ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ಉದ್ಘಾಟಿಸಿ ಆಟಿ ಕೂಟ ಕಾರ್ಯಕ್ರಮದ ಮಹತ್ಚವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೊಟೇಲ್ ಕಂಫರ್ಟ್ ಇನ್, ದೇರಳಕಟ್ಟೆ ಮಾಲಕ ಚಂದ್ರಹಾಸ ಶೆಟ್ಟಿ ಮಾತನಾಡಿ ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುತಿದ್ದ ವಿವಿಧ ಔಷಧಿಯ ಗುಣಗಳುಳ್ಳ ಆಹಾರ ಖಾದ್ಯಗಳನ್ನು ಸೇವಿಸುತ್ತ  ಆರೋಗ್ಯದ ಕಾಳಜಿ ವಹಿಸುತಿದ್ದರು.  ಆಗಿನ ಕಾಲದ ಆಹಾರ ಪದ್ದತಿಗಳನ್ನು, ಇಂತಹ ಕಾರ್ಯಕ್ರಮಗಳ ಮೂಲಕ ಈಗಿನ ಯುವ ಜನತೆಗೆ ಮಾಹಿತಿ ತಿಳಿಯ ಪಡಿಸುವ ಅಗತ್ಯತೆ ಇದೆ ಈ ನಿಟ್ಟಿನಲ್ಲಿ ಆಟಿದಕೂಟ ಕಾರ್ಯಕ್ರಮಗಳು ಅಯೋಜಿಸಿರುವುದು ಬಹಳ ಅರ್ಥಪೂರ್ಣ ಎಂದರು.

ಡಾ.ಮಂಜುಶ್ರೀ ಚಂದ್ರಹಾಸ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಗೌರವಿಸಲಾಯಿತು. ವಲಯ ಸಮಿತಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಕರ್ನೊಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಇಷ್ಟೊಂದು ಅಚ್ಚುಕಟ್ಟಾಗಿ ಮೂಡಿಬರಲು ಹಾಗೂ ಯಶಸ್ವಿಯಾಗಿ ನಡೆಯಲು ಶ್ರಮ ವಹಿಸಿದ ಎಲ್ಲರನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಜಿತ್ ಜಿ ಶೆಟ್ಟಿ, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ವಂದನ ರೈ, ವಿಠಲ ಶೆಟ್ಟಿ ಶ್ರದ್ಧಾ ಲಾಯಿಲ,   ಸುರೇಶ್ ಶೆಟ್ಟಿ, ವಸಂತ ಶೆಟ್ಟಿ, ಸಂಸ್ಕ್ರತಿ ಶೆಟ್ಟಿ ಸೇರಿದಂತೆ ವಲಯ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು. ವಲಯ ಸಮಿತಿ ಕಾರ್ಯದರ್ಶಿ ಆಶೋಕ್ ಶೆಟ್ಟಿ ಲಾಯಿಲ ಪ್ರಸ್ತಾವಿಸಿ ಸ್ವಾಗತಿಸಿದರು.ರಘಚಂದ್ರ ಶೆಟ್ಟಿ ದನ್ಯವಾದವಿತ್ತರು.ಸೋನಾಕ್ಷಿ ವಿಭ ರೈ ಕಾರ್ಯಕ್ರಮ ನಿರ್ವಹಿಸಿದರು.

ಬೆಳಗ್ಗಿನಿಂದ ಸಂಜೆಯವರೆಗೆ ಪುಟಾಣಿ ಮಕ್ಕಳು ಸಹಿತ ಎಲ್ಲರಿಗೂ ಕ್ರೀಡಾಕೂಟವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಲಯದ ವಿವಿಧ ಮನೆಗಳಿಂದ ತಯಾರಿಸಿ ತಂದಿದ್ದ ಸುಮಾರು 70 ಕ್ಕಿಂತಲೂ ಅಧಿಕ ಬಗೆಯ ವಿವಿಧ ಆಹಾರ ಖಾಧ್ಯಗಳು ಎಲ್ಲರ ಗಮನಸೆಳೆದವು. ಸಂಜೆ ಪುರುಷರ ,ಮಹಿಳೆಯರ ಹಗ್ಗಜಗ್ಗಾಟ ಕ್ರೀಡೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.ಲಾಯಿಲ, ನಡ, ಕನ್ಯಾಡಿ,ಗುರಿಪಳ್ಳ, ನಾವೂರು,ಸವಣಾಲು,ಮೇಲಂತಬೆಟ್ಟು,ಬೆಳ್ತಂಗಡಿ ಗ್ರಾಮಸಮಿತಿಗಳ ಸುಮಾರು 700 ಮಂದಿ ಬಂಟ ಭಾಂಧವರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ತಾಲೂಕಿನ‌ ವಿವಿಧ ವಲಯ ಸಮಿತಿಗಳ ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Related posts

ಜೂ.21: ಬಳಂಜ ಬಿಲ್ಲವ ಸಂಘದಲ್ಲಿ ದತ್ತಿನಿಧಿಯಿಂದ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ತರಬೇತಿ ಕಾರ್ಯಾಗಾರ

Suddi Udaya

ನಿಟ್ಟಡೆ: ಕುಂಭಶ್ರೀ ವಿದ್ಯಾಸಂಸ್ಥೆಗೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಭೇಟಿ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ‘ಸಾಧನಾ ಪ್ರಶಸ್ತಿ’

Suddi Udaya

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ವಿಭಾಗಿಯ ಮಟ್ಟಕ್ಕೆ ಆಯ್ಕೆ

Suddi Udaya

ಅಳದಂಗಡಿಯಲ್ಲಿ “ನೊಚ್ಚ ಸೆರಾಮಿಕ್ಸ್” ಪ್ರಾರಂಭೋತ್ಸವ: ಶಾಸಕ ಹರೀಶ್ ಪೂಂಜ ಸೇರಿದಂತೆ ಹಲವು ಗಣ್ಯರಿಂದ ಶುಭ ಹಾರೈಕೆ

Suddi Udaya

ಉಜಿರೆ: ಹಳೆಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಯಲ್ಲಿ ಸಂಭ್ರಮದ ಈದ್ ಮೀಲಾದ್ ಆಚರಣೆ

Suddi Udaya
error: Content is protected !!