September 15, 2026
Uncategorizedನಿಧನ

ಪಟ್ರಮೆ ಗ್ರಾಮದ ಜಾಲು ನಿವಾಸಿ ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಲಕ್ಷ್ಮಣ ಗೌಡರು ನಿಧನ

ಬೆಳ್ತಂಗಡಿ : ಪಟ್ರಮೆ ಗ್ರಾಮದ ಜಾಲು ಎಂಬಲ್ಲಿರುವ ಸಿಪಿಐಎಂ ಪಕ್ಷದ ಹಿರಿಯ ಸಂಗಾತಿ ಲಕ್ಷ್ಮಣ ಗೌಡರು ಅಲ್ಪಕಾಲದ ಅನಾರೋಗ್ಯದ ಬಳಿಕ ತನ್ನ 70 ನೇ ವರ್ಷ ಪ್ರಾಯದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.
ಕಳೆದ ತಿಂಗಳು ಮೆದುಳಿನ ತೀವ್ರರಕ್ತಸ್ರಾವದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಹತ್ತು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದರು.
ಮೃತರು 10 ನೇ ತರಗತಿ ತನಕ ಓದಿ ನಂತರ 50 ವರ್ಷದ ಹಿಂದೆಯೇ ಮಂಗಳೂರಿನ ಹಂಚಿನ‌ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿ ಟೈಲ್ಸ್ ವರ್ಕರ್ಸ್ ಯುನಿಯನ್ (ಸಿಐಟಿಯು) ನ ಸ್ಥಾಪಕ ಸದಸ್ಯರಾಗಿದ್ದರು. ಅಲ್ಲೇ ಪಕ್ಷದ ಸದಸ್ಯರಾಗಿ ಸೇರಿದ ಅವರು ಬಳಿಕ 1996 ,ರಿಂದ ಪಕ್ಷದ ಪಟ್ರಮೆ ಗ್ರಾಮದ ಶಾಖೆಯ ಸದಸ್ಯರಾಗಿ ಪಕ್ಷದ‌ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿ ದುಡಿಯುತ್ತಾ, ಯುವ ಸಂಗಾತಿಗಳಿಗೆ ಮಾರ್ಗದರ್ಶಕರೂ ಆಗಿದ್ದರು. ಮೃತರು ಪತ್ನಿ ಧರ್ನಮ್ಮ, ಮಗ ಯೋಗೀಶ್, ಮಗಳು ಕವಿತಾ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಅವರಿಗೆ ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಗೌರವ ಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ.ಭಟ್ ತಿಳಿಸಿದ್ದಾರೆ.
ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ‌ ಎಂದಿರುವ‌ ಪಕ್ಷ, ಸಮಾಜದ ಕುರಿತಾಗಿನ ಅವರ ಆಶಯಗಳ ಈಡೇರಿಕೆಗೆ ಶ್ರಮಿಸುವುದೇ ಅವರಿಗೆ ಸಲ್ಲಿಸುವ ಶ್ರದ್ದಾಂಜಲಿ ಎಂದರು.

Related posts

ಪುಂಜಾಲಕಟ್ಟೆ ಪ್ರ.ದ. ಕಾಲೇಜು: ಯೂತ್ ಹೆಲ್ತ್ ಮತ್ತು ನ್ಯೂಟ್ರಿಷನ್ ವಿಶೇಷ ಉಪನ್ಯಾಸ

Suddi Udaya

ವೇಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ ಹೆಗ್ಡೆ ನಿಧನ

Suddi Udaya

ಹೊಸಂಗಡಿ: ಕಾರು ಡಿಕ್ಕಿ-ಬಾಲಕ ಸ್ಥಳದಲ್ಲೇ ಮೃತ್ಯು

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ದಿನಕರ ಪೂಜಾರಿ ಕಡ್ತಿಲರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಗೇರುಕಟ್ಟೆ: ಕೊರಂಜ ನಿವಾಸಿ ದೇವಕಿ ಆಳ್ವ ನಿಧನ

Suddi Udaya

ಡಿ.17: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, ಬಿರುಸಿನ ಪೈಪೋಟಿ: ಬಿಜೆಪಿ-ಕಾಂಗ್ರೆಸ್ ಬಿಗ್ ಫೈಟ್, 12 ಸ್ಥಾನಕ್ಕೆ 24 ನಾಮಪತ್ರ ಸಲ್ಲಿಕೆ

Suddi Udaya
error: Content is protected !!