September 14, 2026
Uncategorizedಧಾರ್ಮಿಕವರದಿ

ಗುರಿಪಳ್ಳ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮ: ಸಿದ್ದಿವಿನಾಯಕ ಸಭಾಂಗಣ ಉದ್ಘಾಟನೆ

ಉಜಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಸುವರ್ಣ ಮಹೋತ್ಸವ ಶ್ರೀ ಗಣೇಶೋತ್ಸವ ಸಮಿತಿ ಗುರಿಪಳ್ಳ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮದ ಸಿದ್ದಿವಿನಾಯಕ ಸಭಾಂಗಣ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಸೆ.14ರಂದು ಜರುಗಿತು.

ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುರಿಪಳ್ಳ ಇದರ ಸ್ಥಾಪಕರಾದ ಸುಬ್ರಾಯ ಗಾಣಿಗ ಸಭಾಂಗಣ ಉದ್ಘಾಟಿಸಿ, ದೀಪ ಪ್ರಜ್ವಲನೆಗೊಳಿಸಿದರು. ವಿಧಾನ ಪರಿಷತ್ ಸದಸ್ಯ ಪಿವಿ ಮೋಹನ್ ನಾಮಫಲಕ ಉದ್ಘಾಟಿಸಿದರು. ಮೂಡುಬಿದಿರೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಪರಮಪೂಜ್ಯ ಶ್ರೀ ಮುಕ್ತಾನಂದ ಶ್ರೀಗಳವರು ಆಶೀರ್ವಚನ ನೀಡಿದರು.

ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುರಿಪಳ್ಳ ಇದರ ಸ್ಥಾಪಕರಾದ ಸುಬ್ರಾಯ ಗಾಣಿಗ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ವಿಧಾನ ಪರಿಷತ್ ಸದಸ್ಯ ಪಿವಿ ಮೋಹನ್,ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಗೌಡ, ಗೋಳಿದೊಟ್ಟು, ಮೆಸ್ಕಾಂ ಅಧ್ಯಕ್ಷ ಕೆ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಉಜಿರೆ ಸಿಎ ಬ್ಯಾಂಕ್ ಅಧ್ಯಕ್ಷ ಕೆ ಬಾಲಕೃಷ್ಣ ಗೌಡ ಕೇರಿಮಾರು, ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್ ಲಕ್ಷ್ಮಣ ಗೌಡ, ಕಾಲಬೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಬ್ಯಾಂಕ್ ಉಜಿರೆ ಇದರ ಅಧ್ಯಕ್ಷ ರಂಜನ್ ಜಿ. ಗೌಡ, ಸುನಿಲ್ ಸಂಪಿಗೆತ್ತಾಯ, ನಿವೃತ್ತ ಅಧ್ಯಾಪಕ ಸೀತಾರಾಮ ಶೆಟ್ಟಿ, ಸ.ಉ.ಪ್ರಾ. ಶಾಲೆ ಗುರಿಪಳ್ಳ ಇದರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾಂಭ ಶೆಟ್ಟಿ, ಶಾಲಾ ಮುಕ್ಯೋಪಾಧ್ಯಾಯರಾದ ಸುರೇಶ್ ಎನ್., ನಿವೃತ್ತ ಸೈನಿಕ ಗೋಪಾಲಕೃಷ್ಣ ಕಾಂಚೋಡು, ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಉಜಿರೆ, ಸುಮಂತ್ ಕುಮಾರ್ ಜೈನ್, ಪ್ರಕಾಶ್ ಆಚಾರ್ ಪೊಸಮಾರ್ ಮನೆ, ಉಜಿರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಗೌಡ, ಬಲ೦ದ್ರಬೆಟ್ಟು, ಉಪಾಧ್ಯಕ್ಷರಾದ ಬೇಬಿ ಉಮೇಶ್, ಪಾಡಿ, ಚೇತನ್ ಶೆಟ್ಟಿ, ಶ್ರೀ ಗುರುಕೃಪಾ, ಗುರಿಪಳ್ಳ, ಜಯರಾಮ್ ಪೂಜಾರಿ, ಜಯನಗರ, ಗುರಿಪಳ್ಳ, ಕಾರ್ಯದರ್ಶಿ ಭರತ್ ಪೂಜಾರಿ, ಮಾತೃಶ್ರೀ ನಿಲಯ, ಬ್ರಹ್ಮಸ,ಜೊತೆ ಕಾರ್ಯದರ್ಶಿ ಶ್ರೀಮತಿ ಶಾ೦ಭಾ ಎಚ್. ಶೆಟ್ಟಿ, ಗುತ್ತಿಲಾರಬೆಟ್ಟು ಸುಧನ್ವ ಕೆ., ಗುರಿಪಳ್ಳ, ಕೋಶಾಧಿಕಾರಿ ರಕ್ಷಿತ್ ಗೌಡ, ಏಣೀರು, ಲೆಕ್ಕಪರಿಶೋಧಕರಾದ ಪ್ರಕಾಶ್ ಕುಮಾರ್, ಏಣೀರು, ವಿಕಾಸ್ ಪೂಜಾರಿ, ಕೊಡೆಕ್ಕಲ್, ಗೌರವ ಸಲಹೆಗಾರದ ಸುಂದರ ಪೂಜಾರಿ, ಜಯನಗರ, ಕೆ. ಬಾಲಕೃಷ್ಣ ಗೌಡ, ಕೇರಿಮಾ‌ರ್, ವಸಂತಿ ಶ್ರೀನಿವಾಸ ಗೌಡ, ಕಾರಿಜೆ, ಸೌಮ್ಯಲತಾ ಜಯಂತ ಗೌಡ, ಗುರಿಪಳ್ಳ, ಅನಿಲ್ ಕುಮಾರ್, ತಾರಕುಟೇಲು, ಸುಂದರ ಗೌಡ, ಮಾಳಿಗೆ ಮನೆ, ನೀಲಯ್ಯ ಬಂಗೇರ, ಕೊಡೆಕ್ಕಲ್, ದೀಪಾ ವಿ. ಶೆಟ್ಟಿ, ಗುರುಕೃಪಾ, ಗುರಿಪಳ್ಳ, ಚನನ ಗೌಡ, ಏಣೀರು, ಉಮೇಶ್ ಗೌಡ, ಕೇರಿಮಾರು, ಗುರಿಪಳ್ಳ, ಸುವರ್ಣ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷ ರಮಾನಂದ ಶರ್ಮ ಭಾರದ್ವಾಜ್ ಸದನ ಗುರಿಪಳ್ಳ, ಅಧ್ಯಕ್ಷ ಸದಾನಂದ ಪೂಜಾರಿ ಕೊಡೆಕ್ಕಲ್, ಕಾರ್ಯದರ್ಶಿ ಶಿವಪ್ರಸಾದ್ ಗೌಡ ಕೇರಿಮಾರ್ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ವಿಮಲಾ ಶೆಟ್ಟಿ ಪ್ರಾರ್ಥಿಸಿದರು. ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಗುತ್ತಿಲಾಬೆಟ್ಟು ಸ್ವಾಗತಿಸಿದರು.

Related posts

ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಶ್ರೀ ಧ.ಮಂ.ಆಂ.ಮಾ. ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಭಾಗಿ

Suddi Udaya

ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಆಟಿದ ಮಿನದನ’

Suddi Udaya

ರೇಷ್ಮೆರೋಡ್ ಬಳಿಯ ಪೆಟ್ರೋಲ್ ಗುಣಮಟ್ಟ ಅಸಮಪ೯ಕ ಆರೋಪ : ರಿಕ್ಷಾ ಚಾಲಕರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಸುಲ್ಕೇರಿಮೊಗ್ರು ಶಾಲಾಭಿವೃದ್ಧಿ ಸಮಿತಿಯಿಂದ ಅಳದಂಗಡಿ ಗ್ರಾ.ಪಂ. ನ ನೂತನ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಶವ ಪತ್ತೆ

Suddi Udaya

ಪೆಟ್ರೋಲು, ಡೀಸೆಲ್ ಏರಿಕೆ ಬೆನ್ನಲ್ಲೇ ಸಿಎನ್‌ಜಿ ದರ 2 ರೂ.ಗೆ ಏರಿಕೆ

Suddi Udaya
error: Content is protected !!