September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನದ ಸಂಭ್ರಮ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಆಟಿಡೊಂಜಿ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಾಲೆ ತುಳುನಾಡಿನ ವೈಭವವನ್ನು ನೆನಪಿಸುವಂತೆ ಅಲಂಕರಿಸಲಾಗಿತ್ತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ವಾಣಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಯದುಪತಿ ಗೌಡ ಆಗಮಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿ ತುಳುನಾಡಿನ ನಾಡು ನುಡಿ ಸಂಸ್ಕೃತಿ ಆಚಾರ ವಿಚಾರ ಅದರ ಹಿಂದಿರುವ ವೈಜ್ಞಾನಿಕ ತತ್ವಗಳನ್ನು ಆಧಾರ ಸಹಿತ, ಹಲವಾರು ಗಾದೆ ಒಗಟುಗಳ ಮುಖಾಂತರ ವಿವರಿಸಿದರು. ಹಲವಾರು ತುಳು ನಿದರ್ಶನಗಳನ್ನು ನೀಡಿ ತುಳು ತುಳುನಾಡಿನ ಜನ ಜೀವನವನ್ನು ವಿವರಿಸಿದರು. ಶಾಲೆಯಲ್ಲಿ ಔಷಧೀಯ ಸಸ್ಯಗಳ ಪ್ರದರ್ಶನ, ಆಟಿ ತಿಂಗಳಲ್ಲಿ ಆಡುವಂತಹ ಆಟಗಳು, ಔಷಧೀಯ ಸಸ್ಯಗಳ ಪ್ರದರ್ಶನ, ಆಹಾರ ಕಾಳಜಿಯ ಕುರಿತಾದ ಪ್ರದರ್ಶನ , ಆಟಿ ತಿಂಗಳ ವೈಜ್ಞಾನಿಕ ಮಹತ್ವದ ವಿಚಾರ ಸಂಕಿರಣ, ತುಳು ಭಾಷೆಗಳ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಿತ್ತಿ ಪತ್ರಿಕೆ ಸಂಘವು ಆಟಿಗೆ ಸಂಬಂಧಿಸಿದಂತಹ ಬಿತ್ತಿ ಪತ್ರಿಕೆಯ ತಯಾರಿಯ ಸ್ಪರ್ಧೆಯನ್ನು ಏರ್ಪಡಿಸಿದ್ದು, ಶಾಲಾ ಓದಿನ ಸಂಘ ಗಾದೆ ಮಾತುಗಳ ಸ್ಪರ್ಧೆ ಏರ್ಪಡಿಸಿದ್ದು ಅದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ತುಳು ಗಾದೆ ಒಗಟು ನೃತ್ಯ, ಹಾಡು, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಎಲ್ಲರನ್ನೂ ಮನರಂಜಿಸಿದರು. ಶಾಲಾ ವಿದ್ಯಾರ್ಥಿಗಳಾದ ಅನ್ವಿತ್ , ಅಮೀತ್ ಅರ್ಚನಾ ಹಾಗೂ ಕೃತಿಕಾ ಅವರ ನಿರೂಪಣೆಯೊಂದಿಗೆ, ಶಾಲಾ ವಿದ್ಯಾರ್ಥಿ ಭವ್ಯೇಶ್ ಎಸ್.ಗೌಡ , ಸ್ವಾಗತಿಸಿ, ಅಶ್ವಿತ ಧನ್ಯವಾದವಿತ್ತರು.ಶಾಲೆಯಲ್ಲಿ ವಿದ್ಯಾರ್ಥಿಗಳು ಆಟಿ ತಿಂಗಳ ತಿಂಡಿ ತಿನಿಸುಗಳನ್ನು ತಂದು ಸಂಭ್ರಮಿಸಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related posts

ಬದ್ಯಾರ್: ರಸ್ತೆಯಲ್ಲಿ ಬಾಯಿ ತೆರದ ಗುಂಡಿ: ಅಪಾಯದ ಸೂಚನೆ

Suddi Udaya

ಅಳದಂಗಡಿ: ಲೋಕೋಪಯೋಗಿ ಇಲಾಖೆಯಲ್ಲಿ 38 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಿವಪ್ರಸಾದ್ ಅಜಿಲ ದಂಪತಿಗೆ ಊರವರಿಂದ ಪೌರ ಸನ್ಮಾನ, ಷಷ್ಠ್ಯಬ್ಧ ಸಂಭ್ರಮ, ಸಾವಿರಾರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ರೂ. 27 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸೂಳಬೆಟ್ಟು ಸ.ಕಿ. ಪ್ರಾಥಮಿಕ ಶಾಲಾ ವಿಭಾಗದ ನೂತನ ಕಟ್ಟಡ ಉದ್ಘಾಟನೆ

Suddi Udaya

ಬೆಳ್ತಂಗಡಿ: ಮನೋಜ್ ಕಟ್ಟೆಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

Suddi Udaya

ಭಾರತೀಯ ಕಿರಿಯ ಪುರುಷರ ಹ್ಯಾಂಡ್‌ಬಾಲ್ ತಂಡಕ್ಕೆ ಎಸ್‌.ಡಿ.ಎಂ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಎಚ್. ಆಯ್ಕೆ

Suddi Udaya

ಇಂದಬೆಟ್ಟು: ಗೊಂಚಲು ಸ್ತ್ರೀ ಶಕ್ತಿ ಮಹಾಸಭೆ

Suddi Udaya
error: Content is protected !!