August 2, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕುಕ್ಕವು- ಕೂಡಬೆಟ್ಟು ಸಂಪರ್ಕ ರಸ್ತೆಯ ಪಾದೆ ಕಿರು ಸೇತುವೆ ಬಳಿ ರಸ್ತೆ ಬಿರುಕು: ವಾಹನ ಸಂಚಾರ ಸ್ಥಗಿತ-ಜನರಲ್ಲಿ ಆತಂಕ

ಮಿತ್ತಬಾಗಿಲು ಗ್ರಾಮದ ಕುಕ್ಕವುನಿಂದ ಕೂಡಬೆಟ್ಟು ಸದಾಶಿವ ದೇಗುಲ ಕಡೆಗೆ ಸಂಪರ್ಕ ಕಲ್ಪಿಸುವ ಪಾದೆ ಸೇತುವೆ ಕಿರು ಸೇತುವೆ ಸಮೀಪ ಭಾರಿ ಮಳೆಗೆ ರಸ್ತೆ ಬಿರುಕು ಬಿಟ್ಟಿದ್ದು ಈ ಪ್ರದೇಶದ ವಾಹನ ಸಂಚಾರ ಸ್ಥಗಿತಗೊಂಡಿದೆ.

ಆ. 2 ರ ತಡ ರಾತ್ರಿಯ ಮಳೆಯ ಅಬ್ಬರಕ್ಕೆ ಕುಸಿತಗೊಂಡ ಘಟನೆ. ನಡೆದಿದೆ. ಈ ಹಿಂದೆ ಪ್ರವಾಹದಿಂದ ಹಾನಿಯಾಗಿದ್ದ ಈ ಪ್ರದೇಶದಲ್ಲಿ ನೂತನ ಸೇತುವೆ ನಿರ್ಮಾಣ ಗೊಂಡ ಒಂದೇ ವರ್ಷದಲ್ಲೀ ಸೇತುವೆ ಕೆಳಭಾಗದ ತಡೆಗೋಡೆ ಕೊರೆಯಲಾರಂಭಿಸಿತ್ತು ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸೇತುವೆ ಕುಸಿಯಲು ಕಾರಣ ಎನ್ನುತ್ತಾರೆ ಸ್ಥಳೀಯರು.

ಈ ಭಾಗದಲ್ಲಿ ಸುಮಾರು 50 ಮನೆಗಳಿದ್ದು ಸೇತುವೆ ಕುಸಿತ ಹಿನ್ನಲೆ ವಾಹನ ಸಂಚಾರ ಸ್ಥಗಿತಗೊಂಡಿದ್ದುಸಂಪರ್ಕ ಅಸ್ತವ್ಯಸ್ತಗೊಂಡಿದೆ. ಸೇತುವೆ ಮೇಲೆ ನಡೆದುಕೊಂಡು ಹೋಗಲು ಸಾಧ್ಯವಾಗಿದ್ದು, ಈ ಭಾಗಕ್ಕೆ ಯಾವುದೇ ಪರ್ಯಾಯ ರಸ್ತೆ ಇಲ್ಲ, ಮಳೆಯ ಹೆಚ್ಚಿದಲ್ಲಿ ನೀರಿನ ರಭಸಕ್ಕೆ ಸೇತುವೆ ಪೂರ್ತಿ ಕುಸಿದಲ್ಲಿ ಈ ಪ್ರದೇಶ ಸಂಪರ್ಕ ಕಳೆದುಕೊಳ್ಳಲಿದೆ. ಕಳೆದ ಮೂರು ವರ್ಷದ ಹಿಂದೆ ನಿರ್ಮಾಣಗೊಂಡ ಈ ಸೇತುವೆಯ ದುಸ್ಥಿತಿಗೆ ಜನರು ಬೇಸರಿಸಿದ್ದಾರೆ.

Related posts

ಜಿನ ಭಜನಾ ಸ್ಪರ್ಧೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಗಾರ

Suddi Udaya

ಲೇಖಕಿ ಶ್ವೇತಾ ದಿಲೀಪ್ ರವರ ಕೃತಿ “ಜೀವನದ ಬೆಳಕು” ಪುಸ್ತಕ ಬಿಡುಗಡೆ

Suddi Udaya

ಆರಂಬೋಡಿ: ಕುದುಂಬುಡ -ಕೊಮ್ಮಡ ರಸ್ತೆ ಬದಿಯ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ: ಶಾಸಕ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

Suddi Udaya

ನಿರೂಪಕ ಅಜಿತ್ ಕೊಕ್ರಾಡಿ ಯವರಿಗೆ ” ನಿರೂಪಣಾ ರತ್ನ ರಾಜ್ಯ ಪ್ರಶಸ್ತಿ -2026″

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಉರುವಾಲು ಶ್ರೀ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕು| ಮಾನ್ವಿ ಪ್ರಥಮ ಸ್ಥಾನ

Suddi Udaya
error: Content is protected !!