32 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಭಗವದ್ಭಕ್ತರ ಸಭೆ: ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ

ಕಲ್ಮಂಜ : ಇತಿಹಾಸ ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರ ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಹಾಗೂ ಮುಂಬರುವ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಭಗವದ್ಭಕ್ತರ ಸಭೆಯು ಆ 2ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗುರುರಾಜ ಗುರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಮಹೋತ್ಸವದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಪ್ರಧಾನ ಸಂಚಾಲಕ ಪಾಂಡುರಂಗ ಮರಾಟೆ, ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ ಕೊಡೆಕ್ಕಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಯಶೋಧರ ಗೌಡ, ಪ್ರಸಾದ್ ಕುಮಾರ್, ನಾಗೇಶ್ ಎಂ., ಶ್ರೀಮತಿ ಕೇಶವತಿ, ದೇವಸ್ಥಾನದ ಅರ್ಚಕ ಚಂದ್ರಹಾಸ ಪಟವರ್ಧನ್, ಊರಿನ ಹಿರಿಯರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.

ಸಭೆಯಲ್ಲಿ ಈ ವರ್ಷದ ಜಾತ್ರಾ ಮಹೋತ್ಸವದ ಜಮಾ-ಖರ್ಚಿನ ವಿವರವನ್ನು ಮಂಡಿಸಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಯಿತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ದೋಷಗಳು ಹಾಗೂ ಅವುಗಳಿಗೆ ಕೈಗೊಳ್ಳಬೇಕಾದ ಶಾಸ್ತ್ರೋಕ್ತ ಪರಿಹಾರ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು.

ದೇವಸ್ಥಾನದ ಸಮಗ್ರ ಅಭಿವೃದ್ಧಿ, ಧಾರ್ಮಿಕ ಚಟುವಟಿಕೆಗಳ ವಿಸ್ತರಣೆ ಹಾಗೂ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಭಗವದ್ಭಕ್ತರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಸಭೆಯ ಆರಂಭದಲ್ಲಿ ಅಧ್ಯಕ್ಷ ಗುರುರಾಜ ಗುರಿಪಳ್ಳ ಸ್ವಾಗತಿಸಿದರು. ಸಮಾರೋಪದಲ್ಲಿ ಸಮಿತಿ ಸದಸ್ಯ ಯಶೋಧರ ಗೌಡ ವಂದನಾರ್ಪಣೆ ಸಲ್ಲಿಸಿದರು.

Related posts

ಪುತ್ತೂರಿನ ವಿವೇಕಾನಂದ ಪ.ಪೂ. ಕಾಲೇಜಿಗೆ ಅತ್ಯಧಿಕ ರ‍್ಯಾಂಕ್‌ಗಳು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸಿದ್ಧಿಶ್ರೀ ಸಭಾಭವನಕ್ಕೆ ಸಹಾಯಧನ ಚೆಕ್ ಹಸ್ತಾಂತರ

Suddi Udaya

ಬೆಳಾಲು: ಎರಡು ಗುಂಪುಗಳ ನಡುವೆ ಗಲಾಟೆ: ಪರಸ್ಪರ ಆರೋಪ ಹೊರಿಸಿ ಪೊಲೀಸರಿಗೆ ದೂರು

Suddi Udaya

ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

Suddi Udaya

ಮಹಾ ಕುಂಭಮೇಳದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಹಾಗೂ ಗಣೇಶ್ ಕುಂದರ್ ಬಳಗದವರಿಂದ ಶಾಹಿ ಸ್ನಾನ

Suddi Udaya

ಕೊಕ್ಕಡ ಪ್ರೌಢ ಶಾಲೆಯಿಂದ ರೂ. 3.20 ಲಕ್ಷ ಮೌಲ್ಯದ ಬ್ಯಾಟರಿ ಕಳವು ಮಾಡಿದ ಮೂವರ ಬಂಧನ

Suddi Udaya
error: Content is protected !!