28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಾರತ್ ಸ್ಕೌಟ್ಸ್ & ಗೈಡ್ಸ್ ವತಿಯಿಂದ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆ

ಧರ್ಮಸ್ಥಳ : ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆಯನ್ನು ಆಚರಿಸಲಾಯಿತು.

ವಿಶ್ವ ಸ್ಕಾರ್ಫ್ ದಿನಾಚರಣೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ರೀಮತಿ ಪರಿಮಳ ಎಂ.ವಿ ಇವರಿಗೆ ಸ್ಕಾರ್ಫ್ ತೊಡಿಸಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಶಾಲಾ ಕಬ್ ಮಾಸ್ಟರ್ ಶ್ರೀಮತಿ ಅಮೃತಾ ವಿ.ಶೆಟ್ಟಿ ಇವರು ಸ್ಕಾರ್ಫ್ ದಿನದ ಮಹತ್ವ ವಿವರಿಸಿದರು. ಬಳಿಕ ಬನ್ನಿ ವಿದ್ಯಾರ್ಥಿಗಳಿಗೆ ಏಪ್ರಾನ್ ತೊಡಿಸಿ, ಹೊಸದಾಗಿ ಸೇರ್ಪಡೆಗೊಂಡ ಕಬ್ ಬುಲ್ ಬುಲ್ ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ತೊಡಿಸಿ ಸ್ವಾಗತಿಸಲಾಯಿತು.

ಕಬ್ ಮಾಸ್ಟರ್ ಶ್ರೀಮತಿ ಹೇಮಾವತಿ ಕಬ್ ಹಾಗೂ ಬುಲ್ ಬುಲ್ ಪ್ರತಿಜ್ಞೆ ಹಾಗೂ ನಿಯಮ ಹೇಳಿದರು.ಸ್ಕೌಟ್ ಮಾಸ್ಟರ್ ಶ್ರೀಮತಿ ಶಶಿಕಲಾ ಸ್ಕೌಟ್ ಪ್ರತಿಜ್ಞೆ ಅನ್ನು ಬೋಧಿಸಿದರು. ಗೈಡ್ ಕ್ಯಾಪ್ಟನ್ ಶ್ರೀಮತಿ ದೀಕ್ಷಾ ನಿಯಮ ಬೋಧಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವರು ಮಾತನಾಡುತ್ತಾ ಸ್ಕಾರ್ಫ್ ಮಹತ್ವ ಉದ್ದೇಶ ,ಸಮವಸ್ತ್ರದ ಮಹತ್ವ ಹಾಗೂ ಅದನ್ನು ಧರಿಸುವವರ ಕೆಲಸ ಕಾರ್ಯಗಳು ಜವಾಬ್ದಾರಿ,ಅದನ್ನು ನಿಭಾಯಿಸಬೇಕಾದ ಅಗತ್ಯತೆ ಹಾಗೂ ನಿರ್ವಹಿಸುವ ರೀತಿ ಹೇಗಿರಬೇಕು ಎಂಬುದನ್ನು ವಿವರಿಸಿದರು. ಕಾರ್ಯಕ್ರಮವನ್ನು ಕಬ್ ಮಾಸ್ಟರ್ ಶ್ರೀಮತಿ ಅಮೃತಾ ವಿ ಶೆಟ್ಟಿ ನಿರ್ವಹಿಸಿ, ಕಬ್ ವಿದ್ಯಾರ್ಥಿ ವಿಹಾನ್ ಮಯ್ಯ ಸ್ವಾಗತಿಸಿ,ಕಬ್ ವಿದ್ಯಾರ್ಥಿ ಅಚಿಂತ್ಯ ಧನ್ಯವಾದವಿತ್ತರು.

Related posts

ಗಾಳಿ ಮಳೆ: ಕುತ್ಲೂರು ಅರಸ್ ಕಟ್ಟೆಯಲ್ಲಿ ಮರ, ವಿದ್ಯುತ್ ಕಂಬ ಬಿದ್ದು ಹಾನಿ

Suddi Udaya

ತೆಂಕಕಾರಂದೂರು ಗ್ರಾಮದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣ; ಆರೋಪಿಗಳ ಶೀಘ್ರ ಪತ್ತೆಗಾಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ರಿಶ್ಯಂತ್ ಅವರಿಗೆ ಮನವಿ

Suddi Udaya

ಉಜಿರೆ: ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪರಿಸರ ದಿನಾಚರಣೆ

Suddi Udaya

ಗಾಳಿ ಮಳೆಗೆ ಚಲಿಸುತ್ತಿದ್ದವಾಹನ ಮೇಲೆ ಬಿದ್ದ ಮರದ ಗೆಲ್ಲು

Suddi Udaya

ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ‘ಮಾನ್ಸೂನ್ ಸೇಲ್’ – ಚಿನ್ನದ ಆಭರಣಗಳು 0%, VA/ಮೇಕಿಂಗ್ ನಲ್ಲಿ 100% ರಿಯಾಯಿತಿ

Suddi Udaya

ಪಶುಸಂಗೋಪನಾ ಇಲಾಖೆಯ ಅಧಿಕಾರಿ ಜಯಕೀರ್ತಿ ಜೈನ್ ಸೇವಾ ನಿವೃತ್ತಿ

Suddi Udaya
error: Content is protected !!