26.9 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಿಂಧೂರ ಶೆಟ್ಟಿ ರಚಿಸಿದ ಸ್ಕ್ರಿಬಲ್ ಆರ್ಟ್ ಇಂಡಿಯಾ ಬುಕ್ ಆಪ್ ರೆಕಾರ್ಡ್‌ಗೆ ಸೇರ್ಪಡೆ

ಬೆಳ್ತಂಗಡಿ: ಸಿಂಧೂರ ಶೆಟ್ಟಿ ಇವರು ಚಾರ್ಟ್ ಪೇಪರ್ ಮೇಲೆ ಕಪ್ಪು ಮಾರ್ಕರ್ ಪೆನ್ ಬಳಸಿ, ಸ್ಕ್ರಿಬಲ್ ಆರ್ಟ್ (ಅಸ್ತವ್ಯಸ್ತ ವೃತ್ತಾಕಾರದ ಮಾದರಿ) ತಂತ್ರದ ಮೂಲಕ ಚಾರ್ಲಿ ಚಾಪ್ಲಿನ್ ಅವರ ಕಪ್ಪು-ಬಿಳಿ ಸ್ಟೆನ್ಸಿಲ್ ಕಲಾಕೃತಿಯನ್ನು ರಚಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ (IBR Achiever) ಬಿರುದಿಗೆ ಪಾತ್ರರಾಗಿದ್ದಾರೆ.


ಈ ಸಾಧನೆಯನ್ನು ಅವರು 18 ವರ್ಷ 1 ತಿಂಗಳ ವಯಸ್ಸಿನಲ್ಲಿ ಸಾಧಿಸಿದ್ದು, 9-7-2026 ರಂದು ಈ ದಾಖಲೆಯನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ.

ನಡ ಗ್ರಾಮದ ಕೆಲ್ತಾಜೆ ಸಾಯಿ ಪ್ರಸಾದ ಮನೆ ನಿವಾಸಿ ಕೃಷ್ಣ ಶೆಟ್ಟಿ ಮತ್ತು ಶ್ರೀಮತಿ ಭಾರತಿ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಇವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ನಡ ಸರಕಾರಿ ಶಾಲೆಯಲ್ಲಿ ಮತ್ತು ಪಿ.ಯು.ಸಿ ಯನ್ನು ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜು ಉಜಿರೆಯಲ್ಲಿ ಪೂರೈಸಿದ್ದು, ಪ್ರಸ್ತುತ ಸಂತ ಫಿಲೋಮಿನ ಕಾಲೇಜು ಪುತ್ತೂರು ಇಲ್ಲಿ ಪ್ರಥಮ ವರ್ಷದ BCA AI & ML ವ್ಯಾಸಾಂಗ ಮಾಡುತ್ತಿದ್ದಾರೆ.

ಇವರು ಈ ಹಿಂದೆಯೂ 46 A4 ಶೀಟ್‌ಗಳನ್ನು ಬಳಸಿ ಸರೋಜಿನಿ ನಾಯ್ಡು ಅವರ ಟೈಪೋಗ್ರಾಫಿಕ್ ಆರ್ಟನ್ನು ಅವರ ಕವನಗಳನ್ನು ಬಳಸಿ ಮಾಡಿ ಗಮನ ಸೆಳೆದಿದ್ದರು. ಶಾಲಾ ದಿನಗಳಲ್ಲಿಯೂ ತನ್ನ ಅದ್ಬುತ ಪ್ರತಿಭೆಯ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ಇನ್ನಷ್ಟು ಸಾಧನೆಗಳನ್ನು ಮಾಡುವ ಕನಸನ್ನು ಹೊಂದಿದ್ದಾರೆ.

Related posts

ಧರ್ಮಸ್ಥಳ: ವಿಜಯ ಕ್ರೆಡಿಟ್ ಸೊಸೈಟಿಗೆ ಡಿ. ಹರ್ಷೇಂದ್ರ ಕುಮಾರ್ ಭೇಟಿ

Suddi Udaya

ಮಲವಂತಿಗೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಮಲವಂತಿಗೆ: ದಿಡುಪೆ ಶ್ರೀ ವಿದ್ಯಾ ಗಣಪತಿ ಪೂಜ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ: ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ನಾಯಕರ ಆಯ್ಕೆ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಕರಣ: ಆದೇಶ ರದ್ದುಪಡಿಸಿದ ಹೈಕೋರ್ಟ್

Suddi Udaya
error: Content is protected !!