September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ವಿಜ್ಞಾಪನಾ ಪತ್ರ, ಆಮಂತ್ರಣ ಪತ್ರಿಕೆ ಬಿಡುಗಡೆ

ಅರಸಿನಮಕ್ಕಿ : ವಿಶೇಷ ಕಾರಣಿಕತೆಯೊಂದಿಗೆ, ಆಧ್ಯಾತ್ಮಿಕವಾಗಿ, ಪರಿಸರ ಸೊಬಗಿನ ಮೂಲಕ ಭಕ್ತರನ್ನು ಆಕರ್ಷಿಸುತ್ತಿರುವ ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನವನ್ನು ಭಕ್ತ ಸಮೂಹದ ಸಹಕಾರದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು ವಿಜ್ಞಾಪನಾ ಪತ್ರವನ್ನು ಆ. 7ರಂದು ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು.

ವಿಜ್ಞಾಪನಾ ಪತ್ರವನ್ನು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್, ಉದ್ಯಮಿ ವಾಮನ ತಾಮ್ಹನ್ ಕರ್, ಸಮಾಜದ ಮುಂದಾಳು ಜಯರಾಮ ನೆಲ್ಲಿತ್ತಾಯ ನಿವೃತ್ತ ಸೇನಾನಿ ಮೋಹನ್ ಶೆಟ್ಟಿ, ದುಬೈಯ ಉದ್ಯಮಿ ರಾಮಮೂರ್ತಿ ಪಿಲಿಕ್ಕಬೆ ಮೊದಲಾದವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ವಾಮನ ತಾಮ್ಹನ್ ಕರ್, ರಾಘವೇಂದ್ರ ನಾಯಕ್ ಹಾಗೂ ಜಯರಾಮ ನೆಲ್ಲಿತ್ತಾಯ ಮಾತನಾಡಿ ಕ್ಷೇತ್ರದ ಕೆಲಸದೊಂದಿಗೆ ಸದಾ ಇರುವುದಾಗಿ ತಿಳಿಸಿದರು.
ವನದುರ್ಗಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆ, ಆಡಳಿತ ಸಮಿತಿ ಅಧ್ಯಕ್ಷರಾದ ಪದ್ಮಯ್ಯ ಬಾರಿಗ, ವನದುರ್ಗಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್, ಮಾಜಿ ಅರ್ಚಕರಾದ ಉಲ್ಲಾಸ್ ಭಟ್, ಮಹಿಳಾ ಸದಸ್ಯರುಗಳು, ಪ್ರಮುಖರಾದ ಬಾಲಕೃಷ್ಣ ಶೆಟ್ಟಿ, ಸಂಜೀವ ಶೆಟ್ಟಿಗಾರ್, ಜಯಪ್ರಸಾದ್ ಶೆಟ್ಟಿಗಾರ್, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿಗಾರ್, ವ್ಯವಸ್ಥಾಪಕ ರೋಹಿತಾಶ್ವ ಶೆಟ್ಟಿಗಾರ್, ವನದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಜಗದೀಶ್ ಕಲ್ಲಕೋಟೆ, ಕಪಿಲ ಕೇಸರಿ ಗೆಳೆಯರ ಬಳಗದ ಪದಾಧಿಕಾರಿಗಳು, ಅರಿಕೆಗುಡ್ಡೆ ಕ್ಷೇತ್ರದ ನಿತ್ಯ ಸ್ವಯಂಸೇವಕರು, ಭಕ್ತರು ಉಪಸ್ಥಿತರಿದ್ದರು. ಕ್ಷೇತ್ರದ ಮುಖ್ಯ ಅರ್ಚಕರಾದ ವೃಷಾಂಕ ಖಾಡಿಲ್ಕರ್ ಉದ್ದೇಶಿತ ಕಾರ್ಯಯೋಜನೆ ಯಶಸ್ಸಿಗಾಗಿ ವಿಶೇಷವಾಗಿ ದೇವತಾ ಪ್ರಾರ್ಥನೆ ನೆರವೇರಿಸಿದರು.


ಈಗಾಗಲೇ ದೇಣಿಗೆ ನೀಡಿದ ದಾನಿಗಳು ಹಾಗೂ ವಾಗ್ದಾನಗೈದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.ಇದೇ ಸಂದರ್ಭ ಆ. 28 ರಂದು ನಡೆಯುವ ವರಮಹಾಲಕ್ಶ್ಮೀ ಪೂಜೆಯ ಆಹ್ವಾನ ಪತ್ರಿಕೆಯನ್ನೂ ಬಿಡುಗಡೆಗೊಳಿಸಲಾಯಿತು.

Related posts

ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ ಅಭಿ ಅರಿಗಾ ನೇಮಕ

Suddi Udaya

ತ್ರೋಬಾಲ್ ಪಂದ್ಯಾಟ: ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ

Suddi Udaya

ಉಜಿರೆ ಶ್ರೀ ಧ. ಮಂ. ಪ.ಪೂ. ಕಾಲೇಜಿನ ಎನ್ನೆಸ್ಸೆಸ್ ವತಿಯಿಂದ ಪೆರಿಂಜೆ ಗ್ರಾಮ ಸಮೀಕ್ಷೆ

Suddi Udaya

ಮರುಮೌಲ್ಯ ಮಾಪನದಲ್ಲಿ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ತುಷಾರ ಬಿ.ಎಸ್‌. ರಾಜ್ಯಕ್ಕೆ 4ನೇ ರ‍್ಯಾಂಕ್

Suddi Udaya

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಉರುವಾಲುವಿನ ಸೀತಾ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಪಡ್ಯಾರಬೆಟ್ಟು ಕ್ಷೇತ್ರದ ಅನುವಂಶೀಕ ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್ ರವರಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!