September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಯಿಂದ ಆಟಿ ಕೂಟ ಸಂಭ್ರಮ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮತ್ತು ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಯ ಸಹಯೋಗದಲ್ಲಿ ನಡೆದ ಆಟಿದ ರಂಗ್ ಕಾರ್ಯಕ್ರಮವು ಬೆಳ್ತಂಗಡಿ ಮುಳಿಯ ಸಂಸ್ಥೆಯ ಮೇಲಿನ ಮಹಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿಯ ಅಧ್ಯಕ್ಷರಾದ JFD ಜಿತೇಶ್ ಕುಮಾರ್ ವಹಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಳಿಯ ಜ್ಯುವೆಲರ್ಸ್ ಬೆಳ್ತಂಗಡಿ ಇದರ ಸಹಾಯಕ ವ್ಯವಸ್ಥಾಪಕ ಆದ ಸುಧೀರ್ ಸುವರ್ಣ ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ವಾಣಿ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾಬಲ ಗೌಡ ಇವರು ಆಟಿ ತಿಂಗಳ ಹಿಂದಿನ ಸಂಪ್ರದಾಯಕತೆಯ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಜೆಸಿಐ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ (G&D) ವಿಭಾಗದ ನಿರ್ದೇಶಕರಾದ ಜೆಸಿ ರಂಜಿತ್ HD, ಬೀಟ್ ರಾಕರ್ಸ್ ಸಂಸ್ಥೆಯ ಹಿರಿಯ ಪೋಷಕರಾದ ಶ್ರೀಮತಿ ಸರೋಜ, ನಿಕಟ ಪೂರ್ವ ಅಧ್ಯಕ್ಷ ಆಶಾಳತಾ ಪ್ರಶಾಂತ್, ಕಾರ್ಯದರ್ಶಿ ರಕ್ಷಿತ್ ಅಂಡಿಂಜೆ, ಲೇಡಿ ಜೆಸಿ ಸoಯೋಜಕಿ ಪ್ರತಿಮಾ ಗೌಡ, ಜೆಜೆಸಿ ಅಧ್ಯಕ್ಷರಾದ ತೇಜಸ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯ ಹಾಗೂ ವಿವಿಧ ಆಟೋಟ ಸ್ಪರ್ಧೆಯೊಂದಿಗೆ ಯಶಸ್ವಿಯಾಯಿತು
ವಿಶೇಷವಾಗಿ 52ಬಗೆಯ ತಿಂಡಿ ತಿನಿಸು ಆಕರ್ಷನಿಯವಾಗಿತ್ತು. ಬೀಟ್ ರಾಕರ್ಸ್ ಸಂಸ್ಥೆಯ ಪೋಷಕರು ಹಾಗೂ ಜೆಸಿಐ ಸದಸ್ಯರು ಆಟಿ ತಿಂಗಳ ತಿಂಡಿ ತಿನಿಸು ತಂದು ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 160 ಜನ ಭಾಗವಹಿಸಿದರು.

ವೇದಿಕೆ ಅಹ್ವಾನವನ್ನು ಪೂರ್ವಧ್ಯಕ್ಷ ಜೆಸಿ ನಾರಾಯಣ ಶೆಟ್ಟಿ, ಜೆಸಿ ವಾಣಿಯನ್ನು ಶ್ರೀಮತಿ ನೀತಾ ಕೆ.ಎಸ್, ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ಬೆಳ್ತಂಗಡಿ ಎಸ್.ಡಿ.ಎಮ್ ಸ್ಕೂಲ್ ಶಿಕ್ಷಕಿ ಶ್ರೀಮತಿ ಸೌಮ್ಯ ನೆರವೇರಿಸಿದರು. ಕಾರ್ಯದರ್ಶಿ ಜೆಸಿ ರಕ್ಷಿತ್ ಧನ್ಯವಾದ ಸಲ್ಲಿಸಿದರು.

Related posts

ಶ್ರೀ ಧ.ಮಂ ಕಾಲೇಜಿನಲ್ಲಿ ವಿದ್ಯಾರ್ಥಿ ಸಮಾಗಮ ವಿಶೇಷ ಕಾರ್ಯಕ್ರಮ

Suddi Udaya

ಎಸ್.ಎಮ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯ ಪಿ.ಕೆ ಮುಹಮ್ಮದ್ ಮದನಿ ಅಳಕ್ಕೆ ಉಸ್ತಾದರಿಗೆ ಸನ್ಮಾನ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

Suddi Udaya

ಸುಲ್ಕೇರಿ ಗ್ರಾಮದ ನಾಲ್ಕು ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

Suddi Udaya

ಬಿ ಆರ್ಕ್ ಫಲಿತಾಂಶ: ಎಕ್ಸೆಲ್ ಗುರುವಾಯನಕೆರೆ ಅದ್ಭುತ ಸಾಧನೆ

Suddi Udaya

ಕಿಲ್ಲೂರು ದರ್ಖಾಸು ನಿವಾಸಿ ರಾಧಾಕೃಷ್ಣ ಆಚಾರ್ಯ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!