30.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನೆರಿಯ ವಲಯದ ಭಜನಾ ಪರಿಷತ್ತಿನ ಸಭೆ

ನೆರಿಯ : ನೆರಿಯ ವಲಯದ ಭಜನಾ ಪರಿಷತ್ತಿನ ಸಭೆಯು ವಲಯ ಅಧ್ಯಕ್ಷ ಪಿ.ಕೆ ರಾಜನ್ ಇವರ ಅಧ್ಯಕ್ಷತೆಯಲ್ಲಿ ವಲಯ ಯೋಜನೆ ಕಚೇರಿ ತೋಟತ್ತಾಡಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ಪರಿಷತ್ತಿನ ರಾಜ್ಯ ಅಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ಭಜನಾ ಪರಿಷತ್ತಿನ
ತಾಲೂಕು ಅಧ್ಯಕ್ಷ ರವಿರಾಜ್ ಚಾರ್ಮಾಡಿ. ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಗಣೇಶ್ ಕುಮಾರ್. ತಾಲೂಕು ಭಜನಾ ಪರಿಷತ್ತಿನ ಸಲಹೆಗಾರರಾದ ನಾಗೇಶ್ ನೆರಿಯ ಮತ್ತು ಇನ್ನಿತರ ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರು ವಲಯ ಭಜನಾ ಪರಿಷತ್ತನ್ನು ಬಲಯುತಗೊಳಿಸುವ ಬಗ್ಗೆ ಉಪಸ್ಥಿತರಿದ್ದ ಭಜನಾ ಮಂಡಳಿಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಭಜನಾ ಪರಿಷತ್ತಿನ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತಾ ಮುಂದಿನ ದಿನಗಳಲ್ಲಿ ವಲಯ ಪರಿಷತ್ತಿನ ಪದಾಧಿಕಾರಿಗಳು ಎಲ್ಲಾ ಭಜನಾ ಮಂಡಳಿಗಳಲ್ಲಿ ಭಜನೆ ನಡೆಯುವಂತಹ ಸಂದರ್ಭ ಭೇಟಿ ನೀಡುವ ಅಗತ್ಯತೆಯನ್ನು ವಿವರಿಸಿ ಮುಂದಿನ ತಿಂಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ವಿವರಿಸುತ್ತಾ ಶಿಬಿರಾರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಸಲಹೆಗಾರರಾದ ನಾಗೇಶ್ ರವರ ಸಲಹೆಯಂತೆ ಉಪಸ್ಥಿತರಿದ್ದ ಭಜನಾ ಮಂಡಳಿಗಳ ಪದಾಧಿಕಾರಿಗಳ ಒಪ್ಪಿಗೆ ಮೇರೆಗೆ ಈ ತಿಂಗಳಲ್ಲಿ ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ವಲಯದ ಭಜನಾ ಮಂಡಳಿಗಳ ಮತ್ತು ಭಜನಾ ತಂಡಗಳ ಪದಾಧಿಕಾರಿಗಳನ್ನು ಸೇರಿಸಿ ಸಭೆ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ಗಣೇಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಅನಿತಾ ರವಿರಾಜ್ ಚಾರ್ಮಾಡಿ ಸ್ವಾಗತಿಸಿ ವಂದಿಸಿದರು.

Related posts

ಮೇ 10: ಮೇಲಂತಬೆಟ್ಟು ಸ.ಪ್ರ.ದ. ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ‘ಸ್ನೇಹ ಸಮ್ಮಿಲನ’

Suddi Udaya

ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಳ್ಯಗ್ರಾಹಕರ ಸೇವೆಗಾಗಿ ವೇಣೂರಿನಲ್ಲಿ 21 ನೇ ನೂತನ ಶಾಖೆಯ ಉದ್ಘಾಟನೆ

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ತರಕಾರಿ ಬೀಜ ವಿತರಣೆ

Suddi Udaya

ಕೊಲ್ಲೂರಿನಿಂದ-ನಾಡಿನ ಪ್ರಸಿದ್ದ ಶ್ರದ್ದಾಕೇಂದ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ಯಾತ್ರೆ: ಉಜಿರೆಯಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆಗೆ ಅದ್ದೂರಿ ಚಾಲನೆ,

Suddi Udaya

ಎಸ್.ಎಸ್.ಎಲ್.ಸಿ ಮರು ಮೌಲ್ಯಮಾಪನ: ಶ್ರೀ ಧ. ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಅಮೃತಾ 622 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ

Suddi Udaya

ಬೆಳ್ತಂಗಡಿ ಮಂಜುಶ್ರೀ ಜೆಸಿಐ ವತಿಯಿಂದ ಜೂನಿಯರ್ ಜೇಸಿ ಪದಗ್ರಹಣ ಹಾಗೂ ಯೂತ್ ಡೇ ಕಾರ್ಯಕ್ರಮ

Suddi Udaya
error: Content is protected !!