29.7 C
ಪುತ್ತೂರು, ಬೆಳ್ತಂಗಡಿ
September 27, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ನೈತಿಕ ಪೊಲೀಸ್ ಗಿರಿ – ಐವರು ಪೊಲೀಸ್ ವಶಕ್ಕೆ : ಪ್ರತಿದೂರು ದಾಖಲು

ಕೊಕ್ಕಡ: ಅಪ್ರಾಪ್ತ ಬಾಲಕಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಕೊಕ್ಕಡ ಕಾಪಿನಬಾಗಿಲು ಎಂಬಲ್ಲಿ ಸಂಭವಿಸಿದೆ. ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ, ಕಾರು ಚಾಲಕನ ವಿರುದ್ಧವೂ ಅಪಹರಣ ಪ್ರಕರಣ ದಾಖಲಾಗಿದೆ.

ಕಾರ್ಕಳ ಈದು ನಿವಾಸಿ ಶೈಕ್ ಮುಕ್ತಾರ್ (50) ನೀಡಿದ ದೂರಿನಂತೆ, ಅವರು ಆಗಸ್ಟ್ 11ರ ರಾತ್ರಿ ತಮ್ಮ ಪರಿಚಯಸ್ಥರ ಅಪ್ರಾಪ್ತ ಮಗಳನ್ನು ಕಾರಿನಲ್ಲಿ ಕರೆದುಕೊಂಡು ಹಾಸನ ಕಡೆಗೆ ತೆರಳುತ್ತಿದ್ದರು. ಈ ವೇಳೆ ಕೊಕ್ಕಡ ಕಾಪಿನಬಾಗಿಲಿನಲ್ಲಿ ಕಾರು ತಡೆದು ನಿಲ್ಲಿಸಿದ ಗುಂಪೊಂದು ಶೈಕ್ ಮುಕ್ತಾ‌ರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದೆ ಎಂದು ದೂರು ನೀಡಲಾಗಿದೆ.

ಈ ದೂರಿನನ್ವಯ ಕೊಕ್ಕಡದ ಧನುಷ್ (23), ದಿನೇಶ್ ಚಾರ್ಮಾಡಿ (45), ಪೂರ್ಣಕ್ಷ ಬಿ ಪುದುವೆಟ್ಟು (40), ಸೂರಜ್ ಕೊಕ್ಕಡ (25), ಮತ್ತು ರಂಜಿತ್ ಬಂಡಾರಿ ಕೊಕ್ಕಡ (29) ಅವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರತಿದೂರು: ಇದೇ ಘಟನೆಗೆ ಸಂಬಂಧಿಸಿದಂತೆ, ಶೈಕ್ ಮುಕ್ತಾರ್ ಅವರು ತಮ್ಮ ಮಗಳನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಅಪಹರಿಸಿದ್ದಾರೆ ಎಂದು ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಶೈಕ್ ಮುಕ್ತಾರ್ ವಿರುದ್ಧ ಎಫ್‌ಐಆ‌ರ್’ ದಾಖಲಾಗಿದ್ದು, ಇದರ ಬಗ್ಗೆ ತನಿಖೆ ಮುಂದುವರಿದಿದೆ.

Related posts

ಪಿಕ್‌ಆಪ್ ವಾಹನ ತಡೆಗಟ್ಟಿ: ಜೀವಬೆದರಿಕೆ ಒಡ್ಡಿದ ಆರೋಪ: ಮೆಸ್ಕಾಂ ಉದ್ಯೋಗಿ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕೇಸು

Suddi Udaya

ಬರೆಂಗಾಯ ಶಾಲಾ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ: ಅಮೃತ ಮಹೋತ್ಸವಕ್ಕೆ ಲಕ್ಷ್ಮಿ ದೇವಧರ್ ಮತ್ತು ಮಕ್ಕಳು ಮೊಳಂಪಾಯ ರಿಂದ ರೂ. 1 ಲಕ್ಷ ದೇಣಿಗೆ

Suddi Udaya

ಸೆ.19: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಶ್ರೀ  ಗಣೇಶ ಚತುರ್ಥಿ ಪ್ರಯುಕ್ತ 108 ತೆಂಗಿನ ಕಾಯಿ ಗಣಹೋಮ ಹಾಗೂ ರಂಗಪೂಜೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

Suddi Udaya

ಸೌಜನ್ಯ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮುಖಾಂತರ ನ್ಯಾಯಾಂಗ ತನಿಖೆಗೆ ವಹಿಸಲು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ವಿ.ಹಿಂ.ಪಂ ಆಗ್ರಹ

Suddi Udaya

ಸುದ್ದಿಉದಯ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ, ಹೇ ಶಾರದೇ, ಕೃಷ್ಣ ವೇಷ ಸ್ಪರ್ಧೆಗಳ ಬಹುಮಾನ ವಿತರಣೆ

Suddi Udaya
error: Content is protected !!