31.9 C
ಪುತ್ತೂರು, ಬೆಳ್ತಂಗಡಿ
September 30, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರೋಟರಿ ಸಮುದಾಯ ದಳ ಕಲ್ಮಂಜ ಘಟಕದ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ : ರೋಟರೀ ಕ್ಲಬ್ ಬೆಳ್ತಂಗಡಿ ಇದರ ಅಂಗ ಸಂಸ್ಥೆಯಾದ ರೋಟರೀ ಸಮುದಾಯ ದಳ (ಆರ್. ಸಿ.ಸಿ) ಇದರ ಕಲ್ಮಂಜ ದ 2026 -27ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಸಿದ್ದಬೈಲು ಅಂಗನವಾಡಿಯಲ್ಲಿ ನಾಗೇಶ್ ಕಲ್ಮಂಜ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಚೇರ್ಮನ್ ಅರ್.ಸಿ.ಸಿ. ರೋಟರಿ ಕ್ಲಬ್ ಬೆಳ್ತಂಗಡಿ ವೆಂಕಟೇಶ್ವರ ಭಟ್ ಕೆ.ಜೆ.ರವರ ಉಪಸ್ಥಿತಿಯಲ್ಲಿ ಕಲ್ಮಂಜ ಘಟಕದ ಅಧ್ಯಕ್ಷರಾಗಿ ಬಿ.‌ ಶ್ರೀನಿವಾಸ ರಾವ್, ಉಪಾಧ್ಯಕ್ಷರಾಗಿ ಗುರುಪ್ರಸಾದ್ ಹೆಬ್ಬಾರ್, ಕಾರ್ಯದರ್ಶಿಯಾಗಿ ಶ್ರೀಮತಿ ವಸಂತಿ, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಗೌಡ, ಖಜಾಂಚಿಯಾಗಿ ರಾಘವ ಕಲ್ಮಂಜ, ಸಮುದಾಯ ಸೇವೆ ಯೋಗೀಶ್ ಪರಾಂಜಪೆ, ಕ್ಲಬ್ ಸೇವೆ ಸತೀಶ್ ಟಿ, ಆರೋಗ್ಯ ಸೇವೆ ಶ್ರೀಮತಿ ಸರೋಜಿನಿ, ಸದಸ್ಯರಾಗಿ ನಾಗೇಶ್ ಕಲ್ಮಂಜ, ಜಾನಕಿ, ಪವಿತ್ರ, ಜಯಂತ್ ರಾವ್, ವಿದ್ಯಾ, ಕೃಷ್ಣಮೂರ್ತಿ ಹೆಬ್ಬಾರ್, ಪ್ರಕಾಶ್ ಭಟ್ ಜಯಂತ್ ರಾವ್ ಆಯ್ಕೆಯಾದರು.

ಕಳೆದ ವರ್ಷದ ಆರ್.ಸಿ.ಸಿ ಕಲ್ಮಂಜದ ಅದ್ಯಕ್ಷ ನಾಗೇಶ್ ಕಲ್ಮಂಜ ಅವರಿಂದ ಬಿ. ಶ್ರೀನಿವಾಸ ರಾವ್ ಇವರಿಗೆ ಅಧಿಕಾರ ಹಸ್ತಾಂತರಿಸುವ ಪದಗ್ರಹಣ ಸಮಾರಂಭವನ್ನು ಮುಂಡಾಜೆಯಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು.

Related posts

ಉಜಿರೆ ಬಾರ್ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ

Suddi Udaya

ಸ್ಪಂದನ ಬಂಟರ ಸೇವಾ ತಂಡದಿಂದ 50ನೇ ಸೇವಾ ಕಾರ್ಯಕ್ರಮ: ನೂತನ ಸ್ಪಂದನ ಮನೆ ಹಸ್ತಾಂತರ

Suddi Udaya

ಬಳಂಜ ಗ್ರಾ.ಪಂ. ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ಹಿರಿಯರಿಗೆ ಗೌರವಾರ್ಪಣೆ ಕಾರ್ಯಕ್ರಮ‌

Suddi Udaya

ಪುಂಜಾಲಕಟ್ಟೆ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತ  ಮಾಹಿತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ತಾಲೂಕಿನ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ

Suddi Udaya
error: Content is protected !!