23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಹೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ಯ ದಿನಾಚರಣೆ: ನಿವೃತ್ತ ಅಡುಗೆ ಸಿಬ್ಬಂದಿ ಸರೋಜಾ ನಾಯ್ಕರಿಗೆ ಸನ್ಮಾನ ಧನ ಸಹಾಯ ಹಸ್ತಾಂತರ

ಬೆಳ್ತಂಗಡಿ: ಶಿಶಿಲ ಗ್ರಾಮದ ಹೇವಾಜೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಅಡುಗೆ ಸಿಬ್ಬಂದಿ ಸರೋಜಾ ನಾಯ್ಕ ಇವರಿಗೆ ಗೌರವ ಸನ್ಮಾನವನ್ನು ನೀಡಲಾಯಿತು.

ಸರಿ ಸುಮಾರು 22 ವರ್ಷಗಳ, ಅವರ ಪ್ರಾಮಾಣಿಕ ಹಾಗೂ ಪ್ರೀತಿಪೂರ್ವಕ ಸೇವೆ ಅವಿಸ್ಮರಣೀಯ. ಮಿತಭಾಷಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಸರೋಜಾರವರು, ಶಾಲೆಯ ಪುಟ್ಟ ಮಕ್ಕಳ ಬಾಯಲ್ಲಿ “ಸರೋಜತ್ತೆ”ಯಾಗಿ ಕರೆಯಲ್ಪಟ್ಟು ಸಂತಸಪಟ್ಟವರು. ಅಚ್ಚುಕಟ್ಟಾದ ಅಡುಗೆಮನೆ ನಿರ್ವಹಣೆ, ಶುಚಿ ರುಚಿಯಾದ ಅಡುಗೆ ತಯಾರಿಯಿಂದ ಮಕ್ಕಳು ಹಾಗೂ ಪೋಷಕರಿಗೆ ಆಪ್ತರಾಗಿದ್ದರು. ಒಂದೇ ಮನೆಯ ಸಹ ಸದಸ್ಯರಂತೆ, ಶಿಕ್ಷಕರೊಂದಿಗಿನ ಅವರ ಬಾಂಧವ್ಯ ಕೂಡ ಪ್ರಶಂಸನಾರ್ಹವೇ ಸರಿ. ಸರೋಜಾರವರ ಉತ್ತಮ ಕಾರ್ಯವೈಖರಿಯಿಂದ ಶಿಕ್ಷಣ ಇಲಾಖೆ ಹಾಗೂ ಬಿಸಿ ಊಟ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಸ್ವಚ್ಛತೆ, ಕೆಲಸ ಹಾಗೂ ಮಕ್ಕಳೆಂದರೆ ಇನ್ನಿಲ್ಲದ ಉತ್ಸಾಹದಿಂದಿದ್ದ ಸರೋಜಾ ಅವರು ದುರದೃಷ್ಟವಶಾತ್ ಕಾಲು ಜಾರಿ ಬಿದ್ದು, ಸೊಂಟದ ಭಾಗದಲ್ಲಿ ತೀವ್ರವಾದ ಪೆಟ್ಟಾಗಿದ್ದು 3 ವರ್ಷಗಳಿಂದ ಹೋರಾಡುತ್ತಿದ್ದಾರೆ. ಮೊದಲಿಗೆ ಸೊಂಟ ನೋವು ಕಾಣಿಸಿಕೊಂಡು, ದಿನಕಳೆದಂತೆ ನರ ಸಂಬಂಧಿ ತೊಂದರೆಗಳು ಕಾಣಿಸಿಕೊಂಡವು. ಪ್ರಸ್ತುತ ಮಂಗಳೂರಿನ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕವಾಗಿ ಮಾನಸಿಕವಾಗಿ ದೈಹಿಕವಾಗಿ ವಿಚಲಿತರಾಗಿದ್ದಾರೆ.

ಗ್ರಾಮಸ್ಥರು, ಹಳೆವಿದ್ಯಾರ್ಥಿಗಳು , ಶಾಲಾ ಪೋಷಕರು, ಸಿಬ್ಬಂದಿಗಳು ಸೇರಿದಂತೆ, ಮಕ್ಕಳ ಪೋಷಕರು ಸಂಗ್ರಹಿಸಿದ ಸಣ್ಣ ಮೊತ್ತವನ್ನು ಅವರ ಮನೆಯಲ್ಲೇ ಅವರಿಗೆ ಹಸ್ತಾಂತರಿಸಲಾಯಿತು. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಮುಖ್ಯೋಪಾಧ್ಯಾಯರು, ಸಿಬ್ಬಂದಿಗಳು ಹಾಗೂ ಪೋಷಕರು, ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಮೂಡಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ಸಾಧನೆಯ ಶಿಖರ: ದ್ವಿತೀಯ ಪಿಯುಸಿಯಲ್ಲಿ 32 ರ‍್ಯಾಂಕ್‌:ವಿಜ್ಞಾನ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 10 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಟಾಪ್ 10 ರ‍್ಯಾಂಕ್‌

Suddi Udaya

ಪೆರಾಡಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ನಾಳೆಯಿಂದ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟ ಉದ್ಘಾಟನೆ

Suddi Udaya

ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ

Suddi Udaya

ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಅಭಿನಂದನ್ ಹರೀಶ್ ಕುಮಾರ್ ಆಯ್ಕೆ

Suddi Udaya

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ರೂ. 20 ಸಾವಿರ ಹಸ್ತಾಂತರ

Suddi Udaya
error: Content is protected !!