23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಪಟ್ರಮೆ: ಗೆಳೆಯರ ಬಳಗದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಪಟ್ರಮೆಯ ದಲಿತ ಹಕ್ಕು ಸಮಿತಿ ಕಚೇರಿ ಅಂಬೆಡ್ಕರ್ ಭವನದ ಆವರಣದಲ್ಲಿ ಗೆಳೆಯರ ಬಳಗದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಹಿರಿಯರಾದ ಮಾಯಿಲ ನೆಕ್ಕರೆ ಧ್ವಜಾರೋಹಣಗೈದು, ಮಾತನಾಡಿ ಬ್ರಿಟೀಷರ ದಬ್ಬಾಳಿಕೆಗಳ ವಿರುದ್ದ ಸೆಟೆದು ನಿಂತು ಸುಂದರ ಸಮೃದ್ದಿಯ ಸಮತೆಯ ಭಾರತದ ಕನಸು ಹೊತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತೀಯರು, ನಾಯಕತ್ವವಹಿಸಿದ ಗಾಂಧೀಜಿ, ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್, ಅಂಬೇಡ್ಕರ್ , ನೆಹರೂ ಮೊದಲಾದವರು ಕಂಡ ಭಾರತ ನಿರ್ಮಾಣದತ್ತ ನಾವು ಮುನ್ನಡೆಯಬೇಕಿದೆ. ಇದಕ್ಕಾಗಿ ಡಾ ಬಿ ಆರ್ ಅಂಬೆಡ್ಕರ್ ಒದಗಿಸಿಕೊಟ್ಟ ಶ್ರೇಷ್ಟ ಸಂವಿಧಾನದ ಪ್ರಕಾರ ನಾವೆಲ್ಲರೂ ಬದುಕಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಹಾಗೂ ಕಾರ್ಮಿಕ ಮುಖಂಡರಾದ ಬಿ.ಯಂ. ಭಟ್, ಧನಂಜಯ, ಜಯಂತ, ವಿಶಾಲು, ರೋಹಿತ್ ನೆಕ್ಕರೆ, ಉಮೇಶ್ ಪಟ್ಟೂರು, ದೀಕ್ಷಿತ್ ಪಟ್ಟೂರು, ರೋಹಿತ್ ಪಟ್ಟೂರು, ಶ್ಯಾಮರಾಜ್, ಹಾರಿಸ್ ಪಟ್ರಮೆ,ವಿನುಶರಮಣ, ಷರೀಫ್, ಚೋಮ ಮೊದಲಾದವರು ಉಪಸ್ಥಿತರಿದ್ದರು. ವಸಂತ ಟೈಲರ್ ಸ್ವಾಗತಿಸಿ, ವಂದಿಸಿದರು.

Related posts

ಕಾಂಗ್ರೆಸ್ ಸರ್ಕಾರದ “ಜನ ವಿರೋಧಿ ನೀತಿ”ಗಳನ್ನು ಖಂಡಿಸಿ ಕೊಕ್ಕಡ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಬಾರ್ಯ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: 17 ನೇ ಪಾಯಿಂಟ್ ನಲ್ಲಿ ಕಾರ್ಯಾಚರಣೆ ಆರಂಭ

Suddi Udaya

ನಾಲ್ಕೂರು: ನಿಟ್ಟಡ್ಕದಲ್ಲಿ ಪಂಚಶ್ರೀ ಮಕ್ಕಳ ಕುಣಿತಾ ಭಜನಾ ತಂಡ ರಚನೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ಲೋ ಅಸ್ಸಿಸ್ಟೆಂನ್ಸ್ ವಿಸಿಟ್( LAV) ಕಾರ್ಯಕ್ರಮ

Suddi Udaya

ಕಡಿರುದ್ಯಾವರ ಹೇಡ್ಯ ನಿವಾಸಿ ಎಸ್.ಪಿ ಮ್ಯಾಥ್ಯೂ ನಿಧನ

Suddi Udaya
error: Content is protected !!