August 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಮತ್ತು ಡಿ.ಎಡ್. ಕಾಲೇಜಿನಲ್ಲಿ ಆಟಿದ ಕೂಟ

ಉಜಿರೆ: ತುಳುನಾಡಿನ ಆಟಿ ತಿಂಗಳ ಆಚರಣೆ, ಸಾಂಪ್ರದಾಯಿಕ ಆಹಾರ ತಯಾರಿಕೆ ಮತ್ತು ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಪ್ರಶಿಕ್ಷಣಾರ್ಥಿಗಳಿಗೆ ಪರಿಚಯಿಸುವ ಸದುದ್ದೇಶದಿಂದ ಎಸ್.ಡಿ.ಎಂ. ಬಿ.ಎಡ್. ಮತ್ತು ಡಿ.ಎಡ್. ಕಾಲೇಜಿನಲ್ಲಿ “ಆಟಿದ ಕೂಟ” ಕಾರ್ಯಕ್ರಮವು ಸಡಗರ ಸಂಭ್ರಮದಿಂದ ನಡೆಯಿತು.

ಮುಖ್ಯ ಅತಿಥಿಯಾಗಿ ಯಶವಂತ್ ಬೆಳ್ತಂಗಡಿ, ರಂಗನಿರ್ದೇಶಕರು, ಕಲಾಕೇಂದ್ರ ಎಸ್.ಡಿ.ಎಂ. ಕಾಲೇಜು ಉಜಿರೆ ಇವರು ಮಾತನಾಡುತ್ತಾ ನಮ್ಮ ತುಳುನಾಡು ಪರಶುರಾಮನ ನಾಡು. ಈ ನಾಡಿನ ಮಣ್ಣಿಗೆ ವಿಶೇಷ ಮನ್ನಣೆಯಿದೆ. ನಮ್ಮೆಲ್ಲರ ಪೂರ್ವಜರು ಆಗಿನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದ ಈ ಆಟಿದ ಕೂಟದ ಹಳೆಯ ಸಂಪ್ರದಾಯ, ಔಷಧೀಯ ಸಸ್ಯಗಳ ಸಮರ್ಪಕ ಬಳಕೆ ಮತ್ತು ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಅಡುಗೆಗಳನ್ನು ಇಂದಿನ ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಈ ಹಬ್ಬವನ್ನು ಆಚರಿಸುತ್ತೇವೆ.

ತುಳುನಾಡ ಹಬ್ಬಗಳು ವಿಶೇಷತೆಯಿಂದ ಕೂಡಿದ್ದು ಇದನ್ನು ಆಚರಿಸುವುದರಿಂದ ಅವರ ಮನಸ್ಸಿಗೆ ಆನಂದ ಮತ್ತು ನೆಮ್ಮದಿ ಲಭಿಸುತ್ತದೆ. ದೈವರಾಧನೆಯು ಕರಾವಳಿ ಜನರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಆಚರಣೆಯಾಗಿದೆ. ಕೋಲ, ಪಾಡ್ದನ, ದೈವದ ಪಾತ್ರಿ, ಮುಖವರ್ಣಿಕೆಯ ಬಗ್ಗೆ ತಿಳಿಸಿ, ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಆಟಿ ತಿಂಗಳಿನಲ್ಲಿ ಹಿಂದಿನ ಕಾಲದ ಕಷ್ಟ ಹೇಗಿತ್ತೆಂದು ವಿವರಿಸಿ ಹೇಳಿದರು. ತುಳುನಾಡನ್ನು ಉಳಿಸಿ ಬೆಳೆಸಬೇಕು ಈ ನಾಡಿಗೆ ಬೇರೆ ಕಡೆೆಯಿಂದ ಬಂದವರಿಗೆ ತುಳು ಭಾಷೆಯನ್ನು ಕಲಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಸಲ್ಡಾನ ಮಾತಾನಾಡುತ್ತಾ ಈ ಆಟಿ ಮಾಸವು ಮಳೆಗಾಲದಿಂದ ಕೂಡಿದ್ದು ಎಲ್ಲೆಲ್ಲೂ ಹಸಿರು ಪ್ರಕೃತಿಯಿಂದ ಕೂಡಿರುವುದು ವಿಶೇಷವಾಗಿರುವಂತದ್ದು. ಧಾರ್ಮಿಕ ಆಚರಣೆಗಳು, ಸಾಂಪ್ರದಾಯಿಕ ಆಚರಣೆಗಳು ಮತ್ತು ಪ್ರಕೃತಿಯೊಂದಿಗಿನ ಸಂಬಂಧಗಳ ಜತೆ ಜನರ ಬದುಕು ಸಾಗುತ್ತಿರುತ್ತದೆ. ಪ್ರತಿಯೊಂದು ಆಚರಣೆಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ಆಚರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.


ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸುಮಾರು 30 ಬಗೆಯ ವೈವಿಧ್ಯಮಯ ಆಟಿ ತಿಂಡಿ-ತಿನಿಸುಗಳನ್ನು ತಯಾರಿಸಿ ಪ್ರದರ್ಶಿಸಲಾಯಿತು. ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ಮತ್ತು ಆಟೋಟಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಎಲ್ಲಾ ಸಹ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಮತ್ತು ಬಿ.ಎಡ್. ಮತ್ತು ಡಿ.ಎಡ್. ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಪ್ರಶಿಕ್ಷಣಾರ್ಥಿಗಳಾದ ಗಾಯನ ಮತ್ತು ತಂಡದವರು ಪ್ರಾರ್ಥಿಸಿ, ಹೇಮಲತಾ ಸ್ವಾಗತಿಸಿ, ದೀಪಿಕಾ ವಂದಿಸಿ, ಪ್ರಶ್ವಿತ್ ಮತ್ತು ಸಾಯಿಧೃತಿ ಕಾರ್ಯಕ್ರಮ ನಿರೂಪಿಸಿದರು.

Related posts

ಧರ್ಮಸ್ಥಳ: ಶ್ರೀ ಮಂ.ಅ. ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಭಿಯಾನ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮ

Suddi Udaya

ಬೆಳಾಲು: ಮಾಯ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ. ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಘ ಮತ್ತು ವಿವಿಧ ಕ್ಲಬ್ ಗಳ ಉದ್ಘಾಟನೆ : ನಾಯಕತ್ವ ಭವಿಷ್ಯದ ಜೀವನಕ್ಕೆ ಬುನಾದಿ: ಸಿ.ಕೆ. ರೋಹಿಣಿ

Suddi Udaya

ಪುಂಜಾಲಕಟ್ಟೆ – ಚಾಮಾ೯ಡಿ‌ ಹೆದ್ದಾರಿ ಕಾಮಗಾರಿ ಗುತ್ತಿಗೆಯಲ್ಲಿ ಬದಲಾವಣೆ: ಮೊಗ್ರೋಡಿ ಕನ್ ಸ್ಟ್ರಕ್ಷನ್ ಗೆ ನೀಡುವ ಕುರಿತು ನಿಧಾ೯ರ

Suddi Udaya

ಕಳಿಯ :ಬಳ್ಳಿದಡ್ಡ ನಿವಾಸಿ ಉಮೇಶ್ ಪೂಜಾರಿ ನಿಧನ

Suddi Udaya
error: Content is protected !!