31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿ

ದೇವಾಂಗ ಸಮಾಜದ ಪದಗ್ರಹಣ ಪ್ರತಿಭಾ ಪುರಸ್ಕಾರ


ಮುಂಡಾಜೆ:ದೇವಾಂಗ ಸಮಾಜದ ಕುಲಕಸುಬು ನೇಯ್ಗೆ ವೃತ್ತಿಯು ನಾಗರಿಕ ಸಮಾಜ ನಿರ್ಮಾಣದ ಕಣ್ಣುಗಳಿದ್ದಂತೆ.ಈ ಬಗ್ಗೆ ನಮಗೆ ಹೆಮ್ಮೆ, ಗೌರವವಿದೆ.ಆದರೆ ಈಗಿನ ಕಾಲಘಟ್ಟದಲ್ಲಿ ವೃತ್ತಿಗೆ ಬಹಳಷ್ಟು ಗಂಡಾಂತರ ಇರುವುದರಿಂದ ಸಮಾಜದ ಮಕ್ಕಳು ಕಠಿಣ ಪರಿಶ್ರಮದಿಂದ ಶ್ರೇಷ್ಠ ವಿದ್ಯಾಭ್ಯಾಸವನ್ನು ಮಾಡಿ ಪರ್ಯಾಯ ಉದ್ಯೋಗ ಹುಡುಕುವ ಅವಶ್ಯಕತೆ ಇದೆ ಎಂದು ದೇವಾಂಗ ಸಂಘ(ರಿ) ಬೆಂಗಳೂರು ಇದರ ಅಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಡಾ.ಜಿ ರಮೇಶ್ ಹೇಳಿದರು.


ಇತ್ತೀಚೆಗೆ ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ನಡೆದ ದೇವಾಂಗ ಸಮಾಜ -ಮುಂಡಾಜೆ ಘಟಕ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ದೇವಾಂಗ ಸಮಾಜ ಬಾಂಧವರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತಾನಾಡಿದರು.
ಸಾಹಿತಿ ಮತ್ತು ಚಿಕ್ಕಮಗಳೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ನಾಗಶ್ರೀ ತ್ಯಾಗರಾಜ್ ರವರು ದಿಕ್ಸೂಚಿ ಭಾಷಣದಲ್ಲಿ ಮುಂಡಾಜೆ ದೇವಾಂಗ ಸಮಾಜವು ಕೈಗೊಂಡ ಇಂತಹ ಅಧ್ಬುತ ಪ್ರಯತ್ನವನ್ನು ಶ್ಲಾಘಿಸಿ,ಸಂಘಟನೆಯ ಶಕ್ತಿಯನ್ನು ವಿವರಿಸಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ದೇವಾಂಗ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಮತ್ತು ತರೀಕೆರೆ ಪುರಸಭೆಯ ಮಾಜಿ ಸದಸ್ಯ ಟಿ.ಆರ್.ಶ್ರೀಧರ್,* ಚಿಕ್ಕಮಗಳೂರಿನ ಮಾಜಿ ನಗರಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘದ ಕಾರ್ಯದರ್ಶಿ ರವಿಕುಮಾರ್, ಕಡೂರಿನ ದೇವಾಂಗ ಸಂಘದ ಅಧ್ಯಕ್ಷ ಹರೀಶ್ ಮುಖ್ಯ ಅತಿಥಿಗಳಾಗಿ ಮಾತಾನಾಡಿದರು.ಸಭೆಯ ಅಧ್ಯಕ್ಷತೆಯನ್ನು ದೇವಾಂಗ ಸಮಾಜ -ಮುಂಡಾಜೆ ಘಟಕದ ಅಧ್ಯಕ್ಷ ರಾಜ್ ಗೋಪಾಲ್ ವಹಿಸಿದ್ದರು.ಸಭೆಯಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಕೆಮ್ಮಾರದ ಆಡಳಿತ ಮೊಕ್ತೇಸರರಾದ ಸಂಜೀವ ಬಡ್ಡಮೆ, ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಅಧ್ಯಕ್ಷ ಲೋಕಯ್ಯ ನೇಕಾರ, ದೇವಾಂಗ ಸಮಾಜ ಉಜಿರೆ ವಲಯದ ಅಧ್ಯಕ್ಷ ರವಿ ನೆಯ್ಯಾಲು,ಮುಂಡಾಜೆ ದೇವಾಂಗ ಸಮಾಜದ ನೂತನ ಅಧ್ಯಕ್ಷ ಶಶಿಧರ್ ಬನಶಂಕರಿ, ಕಾರ್ಯದರ್ಶಿ ಮಹೇಂದ್ರ ಕೊಡಂಗೆ,ನೂತನ ಕಾರ್ಯದರ್ಶಿ ಸಚಿನ್ ಎಂ ಎಸ್ ಮತ್ತಿತರರು ಉಪಸ್ಥಿತರಿದ್ದರು

ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲೆಯ ಸಮಾಜದ ವಿಶೇಷ ಪ್ರತಿಭೆಗಳಿಗೆ ಸನ್ಮಾನ,ನಿಧಿ ಸಮರ್ಪಣೆ ಮಾಡಿದವರಿಗೆ ಅಭಿನಂದನೆ ಸಲ್ಲಿಸಲಾಯಿತು.ತದನಂತರ ದೇವಾಂಗ ಸಮಾಜ -ಮುಂಡಾಜೆ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣವು ಪಣವೀಳ್ಯ ನೀಡುವ ಮೂಲಕ ನಡೆಸಲಾಯಿತು.ಮುಂಡಾಜೆ ದೇವಾಂಗ ಘಟಕದ ನೂತನ ಲಾಂಛನವನ್ನು ಸಚಿನ್ ಎಂ ಎಸ್ ತಯಾರಿಸಿದ್ದು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದೇವಾಂಗ ಸಮಾಜದ ಬಹುತೇಕ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕೇಶವ ದೇವಾಂಗ ಕಡಂಬಳ್ಳಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಮಾಜಿ ಜೊತೆ ಕಾರ್ಯದರ್ಶಿ ಸವಿತಾ ಕೇಶವ ದೇವಾಂಗ ವರದಿ ವಾಚಿಸಿದರು.ಸೌಮ್ಯಗಣೇಶ್ ಮೂಲಾರು ಮತ್ತು ಸೌಮ್ಯ ರೋಹಿತ್ ವಿದ್ಯಾರ್ಥಿಗಳ ಪುರಸ್ಕಾರಕ್ಕೆ ಸಹಕರಿಸಿದರು.ಶಿವಾನಂದ ಮೂಲಾರು ವಂದಿಸಿದರು ದೇವಾಂಗ ಸಮಾಜ ಉಜಿರೆ ವಲಯದ ಸಂಘಟನಾ ಕಾರ್ಯದರ್ಶಿ ರೋಹಿತ್ ಕಾಶಿ ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Related posts

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಸ್ಸಾಂ ಮುಖ್ಯಮಂತ್ರಿ ಗೌರವಾರ್ಪಣೆ

Suddi Udaya

ಜಾನಪದ ಗೀತೆ ಸ್ಪರ್ಧೆ : ಧರ್ಮಸ್ಥಳದ ಸಾನ್ವಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಧರ್ಮಸ್ಥಳ: ಎಸ್.ಐ.ಟಿ ಅಧಿಕಾರಿಗಳಿಗೆ ಮೃತದೇಹಗಳನ್ನು ಹೂತು ಹಾಕಿದ 13 ಸ್ಥಳಗಳನ್ನು ತೋರಿಸಿದ ದೂರುದಾರ ಗುರುತಿಸಿದ ಸ್ಥಳಗಳಿಗೆ ಶಸ್ತ್ರ ಸಜ್ಜಿತ ಎ.ಎನ್.ಎಫ್ ಸಿಬ್ಬಂದಿಗಳಿಂದ ಬಿಗಿ ಭದ್ರತೆ ನಾಳೆ ಮತ್ತೆ ಸ್ಥಳ ಮಹಜರು ಕಾರ್ಯ ಮುಂದುವರಿಕೆ

Suddi Udaya

ತುಳು ಭಾಷೆಗೆ ಐತಿಹಾಸಿಕ ಗೌರವ: ಕರಾವಳಿಗರ ನಿರಂತರ ಹೋರಾಟಕ್ಕೆ ಜಯ-ಪದ್ಮರಾಜ್ ಆರ್.ಪೂಜಾರಿ

Suddi Udaya

ಹೊಸಂಗಡಿ ಬಲ್ಲಂಗೇರಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.2ಲಕ್ಷ ಡಿಡಿ ವಿತರಣೆ

Suddi Udaya

ಬಳಂಜ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾ ಕೂಟ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಮೋಹನ್ ಕುಮಾರ್

Suddi Udaya
error: Content is protected !!